ಕೊರೊನಾದಿಂದ ಜನರ ಜೀವನ ಸಾಮಾನ್ಯ ಸ್ಥಿತಿಯಲ್ಲಿ ಇಲ್ಲ. ಹೊರಗೆ ಹೋದರೆ ಎಲ್ಲಿ ಕೊರೊನಾ ತಗಲುವುದೋ ಎಂಬ ಕಾರಣಕ್ಕೆ ಜನರು ಮನೆಯಿಂದ ಹೊರ ಹೋಗದೆ ಮನೆಯಲ್ಲೇ ಕುಳಿತಿದ್ದಾರೆ. ಸೆಲಬ್ರಿಟಿಗಳ ಜೀವನ ಕೂಡಾ ಇದಕ್ಕೆ ಹೊರತಾಗಿಲ್ಲ.
ಕೊರೊನಾ ಸಮಸ್ಯೆ ಯಾವಾಗ ಮುಗಿಯುತ್ತದೆಯೋ, ಚಿತ್ರೀಕರಣ ಯಾವಾಗ ಆರಂಭವಾಗುತ್ತದೋ ಎಂದು ಕೆಲವರು ಕಾಯುತ್ತಿದ್ದರೆ, ಮತ್ತೆ ಕೆಲವರು ಇದ್ಯಾವುದರ ಗೋಜಿಗೆ ಹೋಗದೆ ಕುಟುಂಬದವರೊಂದಿಗೆ ಸಂತೋಷವಾಗಿ ಕಾಲ ಕಳೆಯುತ್ತಿದ್ದಾರೆ. ಸ್ಯಾಂಡಲ್ವುಡ್ ಸಿಂಪಲ್ ಹುಡುಗಿ ಈ ಹೊತ್ತಿಗಾಗಲೇ ತಮ್ಮ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಬೇಕಿತ್ತು. ಆದರೆ ಕೊರೊನಾ ಕಾರಣ ಚಿತ್ರೀಕರಣ ಆರಂಭವಾಗಿಲ್ಲ. ಆದರೆ ಇದಕ್ಕೆ ಶ್ವೇತಾ ಸ್ವಲ್ಪವೂ ತಲೆ ಕೆಡಿಸಿಕೊಂಡಿಲ್ಲ. ಏಕೆಂದರೆ ಅವರು ಮನೆಯಲ್ಲಿ ತಮ್ಮ ಮುದ್ದಿನ ಮಗಳೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ.
- " class="align-text-top noRightClick twitterSection" data="
">
ನಿನ್ನೆಯಷ್ಟೇ ಶ್ವೇತಾ ತಮ್ಮ ಮುದ್ದು ಮಗಳು ಅಶ್ಮಿತಾ ಮೂರನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಮೊದಲ ವರ್ಷ ಶ್ವೇತಾ, ಅಭಿಮಾನಿಗಳನ್ನು ಆಹ್ವಾನಿಸಿ ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದರು. ಎರಡನೇ ವರ್ಷ ಕೂಡಾ ಅಶ್ಮಿತಾ ಬರ್ತ್ಡೇ ಗ್ಯ್ರಾಂಡ್ ಆಗಿತ್ತು. ಆದರೆ ಈ ಬಾರಿ ಮನೆಯವರೇ ಸೇರಿ ಅಶ್ಮಿತಾ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ಈ ವಿಶೇಷ ದಿನದಂದು ಶ್ವೇತಾ ಹಾಗೂ ಅಶ್ಮಿತಾ ಇಬ್ಬರೂ ಒಂದೇ ಬಣ್ಣದ ಬಟ್ಟೆಯಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಜೊತೆಗೆ ಮಗಳಿಗೆ ಕೇಕ್ ಕಟ್ ಮಾಡಿಸುವ ವಿಡಿಯೋವನ್ನು ಶ್ವೇತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಮಗಳು ಅಶ್ಮಿತಾ ಕೂಡಾ ಈ ಬರ್ತ್ಡೇ ತಯಾರಿ ನೋಡಿ ಖುಷಿ ಪಟ್ಟಿದ್ದಾಳೆ. ಮಗಳ ನಗು, ಆಟ, ತುಂಟಾಟವನ್ನು ನೋಡುತ್ತಾ ಶ್ವೇತಾ ಶ್ರೀವಾತ್ಸವ್ ಪ್ರತಿ ಕ್ಷಣವೂ ಎಂಜಾಯ್ ಮಾಡುತ್ತಿದ್ಧಾರೆ. ಮಗಳ ಹುಟ್ಟುಹಬ್ಬದಂದು ಎಲ್ಲರಿಗಿಂತ ಹೆಚ್ಚಾಗಿ ತಾವೇ ಸಂಭ್ರಮಿಸಿದ್ದಾರೆ.