ETV Bharat / sitara

ಮಗುವಾದ ನಂತರವೂ ನಟನೆಗೆ ಸಿದ್ಧರಾದ ಸಿಂಪಲ್​ ನಟಿ, ಪೊಲೀಸ್​ ಪಾತ್ರಧಾರಿಯಾಗಿ 2ನೇ ಇನ್ನಿಂಗ್ಸ್ ಶುರು - ನಟನೆಗೆ ವಾಪಸಾದ್ರು ಶ್ವೇತಾ ಶ್ರೀವಾತ್ಸವ್​

ಮದುವೆ, ಮಗು ಎಂದು ಕಳೆದ ಮೂರು ವರ್ಷಗಳಿಂದ ಆ್ಯಕ್ಟಿಂಗ್​​​ನಿಂದ ದೂರ ಇದ್ದ ನಟಿ ಶ್ವೇತಾ ಶ್ರೀವಾತ್ಸವ್ ಇದೀಗ ಮತ್ತೆ ನಟನೆಗೆ ವಾಪಸಾಗಿದ್ದಾರೆ. ‘ರಹದಾರಿ‘ ಎಂಬ ಚಿತ್ರದಲ್ಲಿ ಅವರು ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದು ಚಿತ್ರದ ಶೂಟಿಂಗ್ ಶೀಘ್ರದಲ್ಲೇ ಆರಂಭವಾಗಲಿದೆ.

ಶ್ವೇತಾ
author img

By

Published : Oct 9, 2019, 12:54 PM IST

Updated : Oct 9, 2019, 1:36 PM IST

ಕನ್ನಡದ ಬಹಳಷ್ಟು ನಾಯಕಿಯರು ಮದುವೆ, ಮಕ್ಕಳು, ಸಂಸಾರ ಎಂದು ಕೆಲವು ವರ್ಷ ಜವಾಬ್ದಾರಿ ಮುಗಿಸಿಕೊಂಡು ಮತ್ತೆ ನಟನೆಗೆ ವಾಪಸಾಗಿ ಮೊದಲಿದ್ದ ಜನಪ್ರಿಯತೆಯನ್ನು ಉಳಿಸಿಕೊಂಡಿರುವ ಉದಾಹರಣೆಗಳಿವೆ. ಅಂತಹ ನಟಿಯರಲ್ಲಿ ಶ್ವೇತಾ ಶ್ರೀವಾತ್ಸವ್ ಕೂಡಾ ಒಬ್ಬರು.

Shwetha Srivatsav
ಪತಿ ಅಮಿತ್ ಜೊತೆ ಶ್ವೇತಾ

‘ಪ್ರಾರ್ಥನೆ’ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡುವ ಮೂಲಕ ಸ್ಯಾಂಡಲ್​​​ವುಡ್​​​ಗೆ ಕಾಲಿಟ್ಟ ಶ್ವೇತಾ, ನಂತರ ಸಿಂಪಲ್​ ಸುನಿ ನಿರ್ದೇಶನದ ‘ಸಿಂಪಲ್ಲಾಗ್​​​​​​ ಒಂದು ಲವ್ ಸ್ಟೋರಿ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜೊತೆ ನಟಿಸುವ ಮೂಲಕ ನಾಯಕಿಯಾಗಿ ಪ್ರಮೋಷನ್ ಪಡೆದರು. ನಂತರ ಸೈಬರ್ ಯುಗದೊಳ್​​, ಫೇರ್ ಆ್ಯಂಡ್​ ಲವ್ಲಿ, ಆತ್ಮಸಾಕ್ಷಿ ಸಿನಿಮಾಗಳಲ್ಲಿ ಅವರು ನಟಿಸಿದರೂ ಸಿನಿಮಾ ಅಂತ ಯಶಸ್ಸು ಗಳಿಸಲಿಲ್ಲ. ನಂತರ ಅವರಿಗೆ ಬ್ರೇಕ್ ನೀಡಿದ್ದು 'ಕಿರಗೂರಿನ ಗಯ್ಯಾಳಿಗಳು' ಸಿನಿಮಾ. ನಂತರ ಅವರು ಗರ್ಭಿಯಾಗಿದ್ದರಿಂದ ನಟನೆಯಿಂದ ದೂರ ಸರಿದರು. ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಶ್ವೇತಾಗೆ ಅಶ್ಮಿತಾ ಎಂಬ 2 ವರ್ಷದ ಮುದ್ದಾದ ಹೆಣ್ಣು ಮಗು ಇದೆ.

Shwetha Srivatsav
ಪುತ್ರಿ ಅಶ್ಮಿತಾ ಜೊತೆ ಶ್ವೇತಾ ಶ್ರೀವಾತ್ಸವ್​​​​​​​​​​​

ಇದೀಗ ಮೂರು ವರ್ಷಗಳ ಗ್ಯಾಪ್ ನಂತರ ಗಿರೀಶ್ ವೈರಮುಡಿ ನಿರ್ದೇಶನದ 'ರಹದಾರಿ' ಸಿನಿಮಾದಲ್ಲಿ ಶ್ವೇತಾ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗಿರೀಶ್ ಈಗಾಗಲೇ ‘ಒಂದ್​ ಕಥೆ ಹೇಳ್ಳಾ‘ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದಾರೆ. 'ರಹದಾರಿ' ಸಿನಿಮಾದಲ್ಲಿ ‘ಬೆಲ್​ ಬಾಟಮ್​‘ ಚಿತ್ರದಂತೆಯೇ ಸಸ್ಪೆನ್ಸ್​ ಇದೆಯಂತೆ. ಬಸವರಾಜು ಹಾಗೂ ಮಂಜುನಾಥ್ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಸದ್ಯದಲ್ಲೇ ಆರಂಭವಾಗಲಿದೆ.

ಶ್ವೇತ ಶ್ರೀವಾತ್ಸವ್ ಮೂರು ವರ್ಷಗಳ ಬಳಿಕ ಹಾಜರಾದರು

ಕನ್ನಡದಲ್ಲಿ ಅನೇಕ ನಾಯಕಿಯರು ಮದುವೆ, ಮಕ್ಕಳು, ಸಂಸಾರದ ಬಗ್ಗೆ ಗಮನ ಹರಿಸಿ ಮತ್ತೆ ವಾಪಸ್ಸಾಗಿ ಜನಪ್ರಿಯತೆ ಉಳಿಸಿಕೊಂಡಿದ್ದಾರೆ. ಸಧ್ಯದ ಉದಾಹರಣೆ ಅಂದರೆ ಶ್ವೇತ ಶ್ರೀವಾತ್ಸವ್! ಪ್ರಾರ್ಥನೆ ಮೂಲಕ ಒಂದು ಪುಟ್ಟ ಪಾತ್ರ ಮಾಡಿ ಆಮೇಲೆ ಸಿಂಪಲ್ ಆಗಿ ಒಂದು ಲವ್ ಸ್ಟೋರಿ ಇಂದ ಖ್ಯಾತಿ ರಕ್ಷಿತ್ ಶೆಟ್ಟಿ ಜೊತೆ ಸಿಂಪಲ್ ಸುನಿ ನಿರ್ದೇಶನದಿಂದ ಪಡೆದುಕೊಂಡರು.

ಶ್ವೇತ ಶ್ರೀವಾತ್ಸವ್ ಅಭಿನಯಿಸಿದ ಸೈಬರ್ ಯುಗದೋಳ್....ಫೈರ್ ಅಂಡ್ ಲವ್ಲಿ, ಆತ್ಮ ಸಾಕ್ಷಿ ಸಿನಿಮಗಳು ಅಷ್ಟು ಸಕ್ಸೆಸ್ ಆಗಲಿಲ್ಲ. ಜನಪ್ರಿಯತೆ ಮತ್ತೆ ಅವರು ಕಿರಗೂರಿನ ಗಯ್ಯಾಳಿಗಳು ಮೂಲಕ ಪಡೆದರು. ಈಗ ಮೂರು ವರ್ಷಗಳ ಬಳಿಕ ರಹದಾರಿ ಸಿನಿಮಾಕ್ಕೆ ಬಣ್ಣ ಹಚ್ಚುತ್ತಿದ್ದಾರೆ.

ಮದುವೆ, ಮಗು ಪಾಲನೆ ಕೆಲವು ವರ್ಷಗಳ ನಂತರ ಈಗ ಶ್ವೇತ ಶ್ರೀವಾತ್ಸವ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಗಿರೀಷ್ ವೈರಮುಡಿ ನಿರ್ದೇಶನದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದ್ ಕಥೆ ಹೆಳ್ಳಾ ಚಿತ್ರದ ನಿರ್ದೇಶಕ ಗಿರಿ ಒಂದು ನೈಜ ಘಟನೆಗೆ ಕುತೂಹಲಕಾರಿ ಅಂಶಗಳನ್ನು ಬೆರಸಿದ್ದಾರೆ. ಬೆಲ್ ಬಾಟಮ್ ಸಿನಿಮಾದಲ್ಲಿ ಆದ ಒಂದು ರಾಬರಿ (ಕಳ್ಳತನ) ರೀತಿ ಈ ಸಿನಿಮಾದಲ್ಲೂ ಸಹ ಇಡೀ ಚಿತ್ರ ಒಂದು ರಾಬರಿ ಸುತ್ತ ಆವರಿಸಿಕೊಂಡಿದೆ.

ಸಸ್ಪೆನ್ಸ್ ಹಾಗೂ ತ್ರಿಲ್ ಇರುವ ಚಿತ್ರ ರಹದಾರಿ ನಿರ್ಮಾಣವನ್ನು ಬಸವರಾಜು ಹಾಗೂ ಮಂಜುನಾಥ್ ಮಾಡಲಿದ್ದಾರೆ.

ಬಕ್ಕೆಶ್ (ರೋಣ) ಹಾಗೂ ಕೆ ಸಿ ರಾವ್ ಸಂಗೀತ ಒದಗಿಸುವ ಈ ಚಿತ್ರದ ಪ್ರಾರಂಭ ಸಧ್ಯದಲ್ಲೇ ಆಗಲಿದೆ. 

Last Updated : Oct 9, 2019, 1:36 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.