ETV Bharat / sitara

ಸಿನಿಪ್ರಿಯರ 'ಗಮನಂ'ಕ್ಕೆ: ಡಿ.10ರಂದು ಶ್ರಿಯಾ ಸರಣ್‌ ಚಿತ್ರ ರಿಲೀಸ್ - ನಿತ್ಯಾ ಮೆನನ್ ಸಿನಿಮಾಗಳು

ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಲನಚಿತ್ರ 'ಗಮನಂ' ಡಿಸೆಂಬರ್ 10 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ.

ಗಮನಂ
ಗಮನಂ
author img

By

Published : Nov 22, 2021, 4:55 PM IST

ಹೈದರಾಬಾದ್ : ನಟಿ ಶ್ರಿಯಾ ಸರಣ್ (Shriya Saran) ಮತ್ತು ನಿತ್ಯಾ ಮೆನನ್ (Nithya Menen) ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಚಲನಚಿತ್ರ 'ಗಮನಂ' ('Gamanam') ಶೀಘ್ರದಲ್ಲೇ ತೆರೆ ಕಾಣಲಿದೆ.

ಹೌದು, 'ಗಮನಂ' ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಮುಂದಿನ ಡಿಸೆಂಬರ್ 10ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಸಿನಿಮಾವನ್ನು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳ ಜತೆಗೆ ಕನ್ನಡದಲ್ಲೂ ವೀಕ್ಷಿಸಬಹುದು.

ಇದನ್ನೂ ಓದಿ: ಕೊನೆಗೂ ಪ್ರಿಯತಮನ ಬಗ್ಗೆ ಬಾಯ್ಬಿಟ್ಟ ನಟಿ ರಾಕುಲ್​ ಪ್ರೀತ್​ ಸಿಂಗ್!... ಯಾರವನು?

ಮಹಿಳಾ ಪ್ರಧಾನ ಕಥೆ ಒಳಗೊಂಡಿರುವ ಈ ಚಿತ್ರದಲ್ಲಿ ನಟ ಪ್ರೇಮ್‌ ನಾಯಕನಾದ್ರೆ, ಶ್ರಿಯಾ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಾರು ಹಾಸನ್, ಶಿವ ಕಂದುಕುರಿ, ಪ್ರಿಯಾಂಕಾ ಜಾವಾಲ್ಕರ್, ಸುಹಾಸ್ ಸೇರಿದಂತೆ ಪ್ರಮುಖರು ವಿವಿಧ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: ಬುರ್ಜ್‌ ಖಲೀಫಾದಲ್ಲಿ ಮುದ್ದುಮಗಳ ಹುಟ್ಟುಹಬ್ಬ ಆಚರಿಸಿದ ಅಲ್ಲು ಅರ್ಜುನ್

ಖ್ಯಾತ ಬರಹಗಾರ ಸಾಯಿ ಮಾಧವ್ ಬುರ್ರಾ ಸಂಭಾಷಣೆಕಾರನಾಗಿ ಕೆಲಸ ಮಾಡಿದ್ದು, ಇಳಯರಾಜ ಸಂಗೀತ ಸಂಯೋಜಿಸಿದ್ದಾರೆ. ರಮೇಶ್ ಕರುಟೂರಿ ಮತ್ತು ವೆಂಕಿ ಪುಷ್ದಾಪು ನಿರ್ಮಾಪಕರಾಗಿದ್ದು, ಜ್ಞಾನಶೇಖರ್ ವಿ.ಎಸ್.ಛಾಯಾಗ್ರಹಕರಾಗಿ ಕಾರ್ಯನಿರ್ವಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.