ವಿಜಯ ರಾಘವೇಂದ್ರ ಮತ್ತು ಶ್ರೀಮುರುಳಿ ಇದೀಗ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಮೊನ್ನೆ ತಾನೆ ಬಿಡುಗಡೆಯಾಗಿರುವ ಶ್ರೀಮುರುಳಿ ನಟನೆಯ ಭರಾಟೆ ಸಿನಿಮಾ ಮೊದಲ ದಿನವೇ ಕರ್ನಾಟಕದಲ್ಲಿ 8.3 ಕೋಟಿ ಬಾಚಿ ಒಳ್ಳೆಯ ಕಲೆಕ್ಷನ್ ಗಿಟ್ಟಿಸಿಕೊಂಡಿದೆ. ಇನ್ನು, ವಿಜಯ ರಾಘವೇಂದ್ರ ನಟಿಸುತ್ತಿರುವ ಮಾಲ್ಗುಡಿ ಡೇಸ್ ಸಿನಿಮಾ ಕೂಡ ಸಖತ್ ಸುದ್ದಿಯಲ್ಲಿದೆ.
ಅಣ್ಣ-ತಮ್ಮನಿಗೆ ಕಿರಿ ವಯಸ್ಸಿನಲ್ಲಿಯೇ ವಯಸ್ಸಾಗಿದೆ. ಅಯ್ಯೋ ಇವರಿಗೇನಾಯ್ತು ಅಂದ್ರಾ.. ನಿಜವಾಗಿಯೂ ಇವರಿಗೆ ವಯಸ್ಸಾಗಿಲ್ಲ. ಆದರೆ, ಈ ಇಬ್ಬರು ನಟರು ವಯಸ್ಸಾದ ವೃದ್ದರ ಪಾತ್ರ ಮಾಡಿದ್ದಾರೆ.
ಚೇತನ್ ಕುಮಾರ್ ನಿರ್ದೇಶನದ ಭರಾಟೆ ಸಿನಿಮಾದಲ್ಲಿ ರತ್ನಾಕರ ಎಂಬ ವೃದ್ದನ ಪಾತ್ರವನ್ನು ಶ್ರೀಮುರುಳಿ ಮಾಡಿದ್ರೆ, ಮಾಲ್ಗುಡಿ ಡೇಸ್ ಸಿನಿಮಾದಲ್ಲಿ ವಿಜಯ ರಾಘವೇಂದ್ರ ಕೂಡ ಮುದುಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾಗೆ ಕಿಶೋರ್ ಮೂಡಬಿದ್ರೆ ನಿರ್ದೇನದ ಜವಾಬ್ದಾರಿ ಹೊತ್ತಿದ್ದಾರೆ. ಕೇವಲ ನಿರ್ದೇಶಕರಾಗಿ ಅಲ್ಲ, ಚಿತ್ರಕಥೆ ಸಂಭಾಷಣೆಯನ್ನೂ ಇವರೇ ನಿರ್ವಹಿಸಿದ್ದಾರೆ.
ಇನ್ನು, ಮಾಲ್ಗುಡಿ ಡೇಸ್ ಸಿನಿಮಾದಲ್ಲಿ ವಿಜಯ್ ರಾಘವೇಂದ್ರ 65-70 ವರ್ಷದ ವೃದ್ದನಾಗಿ ಕಾಣಿಸಿಕೊಂಡಿದ್ದು, ಇದಕ್ಕೆ ಮೇಕಪ್ ಮಾಡಲು ಬರೋಬ್ಬರಿ ಮೂರು ಗಂಟೆ ಬೇಕಂತೆ. ಅಲ್ಲದೆ ಮೇಕಪ್ ರಿಮೂವ್ ಮಾಡಲು ಒಂದು ಗಂಟೆ ಬೇಕಂತೆ. ಒಟ್ಟಾರೆ ಈ ಎರಡೂ ಸಿನಿಮಾಗಳಲ್ಲಿ ವಯೋ ವೃದ್ದರ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಣ್ಣ-ತಮ್ಮನಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗ್ತಿದೆ.