‘ಪಡ್ಡೆ ಹುಲಿ’ ಚಿತ್ರದ ನಂತರ ಖ್ಯಾತ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಚೊಚ್ಚಲ ಚಿತ್ರದಲ್ಲಿ ಡಾ.ವಿಷ್ಣುವರ್ಧನ ಅವರ ನೆರಳಿನಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈ ನವನಟ, 85 ಕಥೆಗಳನ್ನು ಕೇಳಿ ಕೊನೆಗೆ ರಾಷ್ಟ್ರ ಪ್ರಶಸ್ತಿ ವಿಜೇತ ವಿ.ಕೆ. ಪ್ರಕಾಶ್ ಅವರ ನಿರ್ದೇಶನದಲ್ಲಿ ಅಭಿನಯಿಸಲು ಸಿದ್ಧರಾಗಿದ್ದಾರೆ.
ಶ್ರೇಯಸ್ ಅವರ ಎರಡನೇ ಸಿನಿಮಾಕ್ಕೆ 'ವಿಷ್ಣುಪ್ರಿಯ' ಶಿರ್ಷಿಕೆ ಇಡಲಾಗಿದೆ. ಈ ಚಿತ್ರಕ್ಕೆ ‘ವಿಷ್ಣು’ ಹೆಸರು ಅಂಟಿಕೊಂಡಿದೆ ಅಂದ್ಮೇಲೆ ಸಾಹಸ ಸಿಂಹ ವಿಷ್ಣುವರ್ಧನ ಛಾಯೆ ಸಿನಿಮಾದಲ್ಲಿರುವುದು ಗ್ಯಾರಂಟಿ ಎನ್ನಲಾಗ್ತಿದೆ.
ಶ್ರೇಯಸ್ ಮೊದಲ ಚಿತ್ರ 'ಪಡ್ಡೆಹುಲಿ'ಯಲ್ಲಿ ಅಭಿನಯದ ಮೂಲಕ ಹೆಸರು ಪಡೆದರು. ಆದರೆ, ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಗೆಲ್ಲಲಿಲ್ಲ. ಈಗ ಅವರ ತಂದೆ ಕೆ.ಮಂಜು ಅವರು ಒಂದು ಅಪರೂಪದ ಕಥೆ ಆಯ್ಕೆ ಮಾಡಿದ್ದಾರೆ.
ಇನ್ನು, ವಿಷ್ಣುಪ್ರಿಯ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿರುವ ಪ್ರಕಾಶ್ ಹೆಸರಾಂತ ಮಲಯಾಳಂ ನಿರ್ದೇಶಕ. ಇವರು ಹಿಂದಿ ಹಾಗೂ ತೆಲುಗು ಭಾಷೆಯಲ್ಲೂ ನಿರ್ದೇಶನ ಮಾಡಿದ್ದಾರೆ. ಕನ್ನಡದಲ್ಲಿ 2010 ರಲ್ಲಿ ‘ಐ ದೊಂದ್ಲ ಐದು’ ಕನ್ನಡ ಸಿನಿಮಾ ನಿರ್ದೇಶನ ಮಾಡಿದ್ದರು. ಸದ್ಯ ವಿಷ್ಣುಪ್ರಿಯ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.