ETV Bharat / sitara

ಕೆ. ಮಂಜು ಪುತ್ರ ಶ್ರೇಯಸ್ ಈಗ ಮಲಯಾಳಂ ಪವರ್ ಸ್ಟಾರ್​​​ - Producer K Manju son Shreyas

'ಪಡ್ಡೆಹುಲಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ ಈಗ ಹೆಸರಿಡದ ಮತ್ತೊಂದು ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಇದರೊಂದಿಗೆ ಅವರು ಮಲಯಾಳಂನಲ್ಲಿ ಪವರ್ ಸ್ಟಾರ್ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

K Manju son Shreyas
ಕೆ. ಮಂಜು ಪುತ್ರ ಶ್ರೇಯಸ್
author img

By

Published : Dec 24, 2020, 2:05 PM IST

ಹಿರಿಯ ನಿರ್ಮಾಪಕ ಕೆ. ಮಂಜು ಮಗ ಶ್ರೇಯಸ್ 'ಪಡ್ಡೆಹುಲಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದವರು. ನಂತರ ಅವರು ಪ್ರಿಯಾ ವಾರಿಯರ್ ಅವರೊಂದಿಗೆ ನಟಿಸಿದ ವಿಷ್ಣುಪ್ರಿಯ ಸಿನಿಮಾ ಕನ್ನಡ ಮಾತ್ರವಲ್ಲದೆ ಮಲಯಾಳಂ ಭಾಷೆಗೆ ಕೂಡಾ ಡಬ್ ಆಗಿ ಬಿಡುಗಡೆಯಾಗುತ್ತಿದೆ. ಈ ನಡುವೆ ಅವರು ಹೊಸ ಚಿತ್ರವೊಂದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಸಲಾರ್​​ನಲ್ಲಿ ಪ್ರಭಾಸ್​​ ಜೊತೆ ನಟಿಸ್ತಾರಂತೆ ಈ ನಟಿ

ಶ್ರೇಯಸ್ ಈಗ ಮಲಯಾಳಂನಲ್ಲಿ ಪವರ್​ ಸ್ಟಾರ್ ಆಗಿ ಮಿಂಚಲಿದ್ದಾರೆ. ಈ ಸಿನಿಮಾ ಕನ್ನಡದಲ್ಲಿ ಕೂಡಾ ಬಿಡುಡೆಯಾಗುತ್ತಿದೆ. 'ಒರು ಆಡಾರ್​ ಲವ್' ಮತ್ತು 'ಹ್ಯಾಪಿ ವೆಡ್ಡಿಂಗ್​' ಚಿತ್ರಗಳನ್ನು ನಿರ್ದೇಶಿಸಿದ್ದ ಒಮರ್ ಲುಲು ಈ ಚಿತ್ರವನ್ನು ನಿರ್ದೇಶಿಸಿದ್ದು, ಡೆನ್ನಿಸ್​ ಜೋಸೆಫ್​ ಕಥೆ-ಚಿತ್ರಕಥೆ ಬರೆದಿದ್ದಾರೆ. ಈ ಚಿತ್ರ ಮುಂದಿನ ವರ್ಷ ಪ್ರಾರಂಭವಾಗಲಿದೆ. ಕನ್ನಡದ ಇನ್ನೊಂದು ಹೆಸರಿಡದ ಚಿತ್ರದಲ್ಲೂ ಶ್ರೇಯಸ್​ ಅಭಿನಯಿಸುತ್ತಿದ್ದಾರಂತೆ. ಇದೊಂದು ರೊಮ್ಯಾಂಟಿಕ್​ ಕಾಮಿಡಿಯಾಗಿದ್ದು, ಮುಂದಿನ ಏಪ್ರಿಲ್​ನಲ್ಲಿ ಆರಂಭವಾಗಲಿದೆ ಎನ್ನಲಾಗಿದೆ. ಸದ್ಯಕ್ಕೆ ಈ ಚಿತ್ರದ ನಿರ್ದೇಶಕರು, ತಂತ್ರಜ್ಞರು ಮತ್ತು ಕಲಾವಿದರ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಈ ಮಧ್ಯೆ, ಇತ್ತೀಚೆಗೆ ಖ್ಯಾತ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಅವರ ನೇತೃತ್ವದಲ್ಲಿ ಶ್ರೇಯಸ್​ ಹೊಸ ಫೋಟೋಶೂಟ್​ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.