ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ಸಿನಿಮಾ ಕಬ್ಜ. ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ನಲ್ಲಿ ಸಿನಿಮಾ ಮೂಡಿ ಬರಲಿದೆ. ಈ ಸಿನಿಮಾದಲ್ಲಿ ಶ್ರೀಯಾ ಅವರು ಮಧುಮತಿಯ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಕಬ್ಜದಲ್ಲಿ ಇಬ್ಬರು ನಾಯಕಿಯರಿದ್ದು ಶ್ರೀಯಾ ರಾಣಿಯ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಅಂಡರ್ ವಲ್ಡ್ ಕಿಂಗ್ ಆಗಿ ಉಪೇಂದ್ರ ಅಭಿನಯಿಸಿದ್ದಾರೆ.
![shriya sharan selected as heroine to upendra and sudeep starrer kabza movie](https://etvbharatimages.akamaized.net/etvbharat/prod-images/kn-bng-03-upendrakabza-cinema-aaddakke-bandha-south-nati-7204735_07032022145422_0703f_1646645062_300.jpg)
ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲೂ ಸಿನಿಮಾ ನಿರ್ಮಾಣವಾಗುತ್ತಿದೆ. ಸದ್ಯ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ. ರವಿ ಬಸ್ರೂರು ಸಂಗೀತ ಸಂಯೋಜನೆ, ಶಿವಕುಮಾರ್ ಕಲಾ ನಿರ್ದೇಶನ ಸೇರಿದಂತೆ ಬಹುತೇಕ ‘ಕೆ.ಜಿ.ಎಫ್’ ತಾಂತ್ರಿಕ ಬಳಗವೇ ಈ ಚಿತ್ರದಲ್ಲೂ ಮುಂದುವರೆದಿದೆ.
![ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಶ್ರೀಯಾ](https://etvbharatimages.akamaized.net/etvbharat/prod-images/14661835_bin.jpg)
ಇದನ್ನೂ ಓದಿ: ತೆಲುಗು, ಕನ್ನಡ ಸಿನಿಮಾಗಳ ಪ್ಯಾನ್‌ಇಂಡಿಯಾ ಹವಾ; 1000 ಕೋಟಿ ರೂ.ಹೂಡಿಕೆ