ETV Bharat / sitara

ಶಿವಣ್ಣನ ಜೊತೆ ಡ್ಯಾನ್ಸ್ ಮಾಡಿ ಬಹಳ ಥ್ರಿಲ್ ಆಗಿದ್ದೇನೆ: ಶ್ರದ್ಧಾ ಶ್ರೀನಾಥ್​​​​ - ಶಿವರಾಜ್​​ಕುಮಾರ್

'ಯುಟರ್ನ್' ಖ್ಯಾತಿಯ ಶ್ರದ್ಧಾ ಶ್ರೀನಾಥ್​​ಗೆ ಈಗ ಕಾಲಿವುಡ್ , ಬಾಲಿವುಡ್​​​ನಲ್ಲೂ ಸಾಕಷ್ಟು ಅವಕಾಶಗಳು ಸಿಗುತ್ತಿದ್ದು ಸದ್ಯಕ್ಕೆ ಶಿವರಾಜ್​​​ಕುಮಾರ್ ಜೊತೆ 'ರುಸ್ತುಂ' ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಶಿವಣ್ಣ ಜೊತೆಗೆ ಡ್ಯಾನ್ಸ್ ಮಾಡಿದ ಅನುಭವವನ್ನು ಅವರು ಹೇಳಿಕೊಂಡಿದ್ದಾರೆ.

ಶ್ರದ್ಧಾ ಶ್ರೀನಾಥ್​​​​
author img

By

Published : Mar 12, 2019, 8:02 PM IST

Updated : Mar 13, 2019, 3:42 PM IST

ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶಿಸುತ್ತಿರುವ 'ರುಸ್ತುಂ' ಸಿನಿಮಾ ಶೂಟಿಂಗ್ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ನಿನ್ನೆ ತಾನೇ ಶಿವರಾಜ್ ಕುಮಾರ್ ಹಾಗೂ ಶ್ರದ್ಧಾ ಶ್ರೀನಾಥ್ ಇಬ್ಬರೂ ಹಾಡೊಂದಕ್ಕೆ ಹೆಜ್ಜೆ ಹಾಕಿರುವ ದೃಶ್ಯವನ್ನು ಚಿತ್ರೀಕರಿಸಲಾಗಿದೆ.

ಶ್ರದ್ಧಾ ಶ್ರೀನಾಥ್​​​​

ಇನ್ನು ಶ್ರದ್ಧಾ ಶ್ರೀನಾಥ್ ತಾವು ಶಿವಣ್ಣ ಅವರೊಂದಿಗೆ ಹೆಜ್ಜೆ ಹಾಕಿದ ಅನುಭವವನ್ನು ಈಟಿವಿ ಭಾರತ್ ಕನ್ನಡದೊಂದಿಗೆ ಹಂಚಿಕೊಂಡಿದ್ದಾರೆ. ಶಿವಣ್ಣ ಅವರೊಂದಿಗೆ ಡ್ಯಾನ್ಸ್ ಮಾಡಿದ್ದೇನೆ ಎಂದರೆ ನಂಬಲು ಆಗುತ್ತಿಲ್ಲ. ಅವರು ಇನ್ನೂ ಯುವಕರನ್ನೂ ನಾಚಿಸುವಂತೆ ಹೆಜ್ಜೆ ಹಾಕುತ್ತಾರೆ. ನಾನಂತೂ ಅವರೊಂದಿಗೆ ಡ್ಯಾನ್ಸ್ ಮಾಡಿ ಬಹಳ ಥ್ರಿಲ್ ಆಗಿದ್ದೇನೆ. ಅವರೊಂದಿಗೆ ನಟಿಸಲು ಅವಕಾಶ ಸಿಕ್ಕಿದ್ದೇ ನನ್ನ ಅದೃಷ್ಟ ಎಂದು ಶ್ರದ್ಧಾ ಹೇಳಿದ್ದಾರೆ.

ಇನ್ನು ತಮ್ಮ ದಿನನಿತ್ಯದ ರೊಟೀನ್ ಬಗ್ಗೆ ಕೂಡಾ ಶ್ರದ್ಧಾ ಮಾತನಾಡಿದ್ದಾರೆ. ಶೂಟಿಂಗ್ ಬಿಟ್ಟು ಫ್ರೀ ಟೈಮ್​​ನಲ್ಲಿ ಮನೆಯಲ್ಲೇ ಇರಲು ಇಷ್ಟಪಡುತ್ತೇನೆ. ಅಮ್ಮ ಮಾಡುವ ಉಪ್ಪಿಟ್ಟು, ರೊಟ್ಟಿ, ದೋಸೆ ನನಗೆ ತುಂಬಾ ಇಷ್ಟ. ಟ್ರಾವೆಲಿಂಗ್ ಕೂಡಾ ಬಹಳ ಇಷ್ಟ. ಅದರಲ್ಲೂ ಯೂರೋಪ್ ಎಂದರೆ ತುಂಬಾ ಇಷ್ಟಪಡುತ್ತೇನೆ. ಅಲ್ಲಿನ ವಾತಾವರಣ, ಹವಾಗುಣ ಎಲ್ಲವೂ ಸೂಪರ್ ಎಂದು ಶ್ರದ್ಧಾ ತಮ್ಮ ಇಷ್ಟಗಳ ಬಗ್ಗೆ ಹೇಳಿಕೊಂಡರು.

ಈ ವರ್ಷ ಶ್ರದ್ಧಾ ಅಭಿನಯಿಸಿರುವ ಕನ್ನಡದ ರುಸ್ತುಂ ಹಾಗೂ ಹಿಂದಿ, ತಮಿಳು ಭಾಷೆಗಳ ಹಲವು ಚಿತ್ರಗಳು ಸಾಲು ಸಾಲಾಗಿ ಬಿಡುಗಡೆಯಾಗಲಿರುವುದರಿಂದ ಅವರು ಬಹಳ ಖುಷಿಯಲ್ಲಿದ್ದಾರೆ.

Intro:Body:

Shraddha Srinath

Conclusion:
Last Updated : Mar 13, 2019, 3:42 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.