ETV Bharat / sitara

ನಾನು ಋತುಮತಿಯಾಗಿದ್ದಾಗ ದೇವರ ಪೂಜೆಯಲ್ಲಿ ಭಾಗವಹಿಸಿದ್ದೆ: ನಟಿ ಶ್ರದ್ಧಾ ಶ್ರೀನಾಥ್ - ನಟಿ ಶ್ರದ್ಧಾ ಶ್ರೀನಾಥ್

ಕನ್ನಡ ಮಾತ್ರವಲ್ಲದೇ ದಕ್ಷಿಣ ಭಾರತದ ಇನ್ನಿತರ ಭಾಷೆಗಳಲ್ಲಿ ಜನಪ್ರಿಯತೆ ಸಂಪಾದಿಸಿಕೊಂಡಿರುವ ಶ್ರದ್ಧಾ ಶ್ರೀನಾಥ್ ಅವರ ನೇರ ನುಡಿ ಹಾಗೂ ದಿಟ್ಟ ನಿರ್ಧಾರದಿಂದ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಇದೀಗ ತಮ್ಮ ಇನ್​ಸ್ಟಾಗ್ರಾಮ್ ನಲ್ಲಿ ಋತುಚಕ್ರದ ಬಗ್ಗೆ ಹಂಚಿಕೊಂಡಿದ್ದಾರೆ.

Shradda shrinath
Shradda shrinath
author img

By

Published : Jun 1, 2020, 12:33 PM IST

ಸ್ಯಾಂಡಲ್​ವುಡ್​ ನಟಿ ಶ್ರದ್ಧಾ ಶ್ರೀನಾಥ್ ಸಾಮಾಜಿಕ ವಿಚಾರಗಳ ಕುರಿತು ಮುಕ್ತವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಇದಕ್ಕೆ ಉತ್ತಮ ಉದಾಹರಣೆ ಇಲ್ಲಿದೆ ನೋಡಿ.

Shradda shrinath
ಶ್ರದ್ಧಾ ಶ್ರೀನಾಥ್​​

ಕನ್ನಡ ಮಾತ್ರವಲ್ಲದೇ ದಕ್ಷಿಣ ಭಾರತದ ಇನ್ನಿತರ ಭಾಷೆಗಳಲ್ಲಿ ಜನಪ್ರಿಯತೆ ಸಂಪಾದಿಸಿಕೊಂಡಿರುವ ಶ್ರದ್ಧಾ ಶ್ರೀನಾಥ್ ಅವರ ನೇರ ನುಡಿ ಹಾಗೂ ದಿಟ್ಟ ನಿರ್ಧಾರದಿಂದ ಅಭಿಮಾನಿಗಳ ಮನಸ್ಸು ಗೆದಿದ್ದಾರೆ. 'ಆಪರೇಷನ್‌ ಅಲಮೇಲಮ್ಮ' ಹಾಗೂ 'ಯು ಟರ್ನ್' ನಾಯಕಿ ಇದೀಗ ತಮ್ಮ ಜೀವನದ ಮತ್ತೊಂದು ಅನುಭವ ಹಂಚಿಕೊಂಡಿದ್ದಾರೆ.

ಶ್ರದ್ಧಾ ಶ್ರೀನಾಥ್ ಅವರು ಇನ್​ಸ್ಟಾಗ್ರಾಮ್ ಅಕೌಂಟ್ ನಲ್ಲಿ ಅವರಿಗೆ 14 ವರ್ಷ ವಯಸ್ಸು ಇರುವಾಗ ಆದ ಒಂದು ಪ್ರಸಂಗವನ್ನು ಹೇಳಿಕೊಂಡಿದ್ದಾರೆ. ಸಾಮಾನ್ಯವಾಗಿ ಅನೇಕ ಮಹಿಳೆಯರು ಋತುಚಕ್ರದ ಬಗ್ಗೆ ಓಪನ್ ಆಗಿ ಮಾತನಾಡಲು ಹಿಂಜರಿಯುತ್ತಾರೆ. ಆದರೆ, ಶ್ರದ್ಧಾ ಕಳೆದ 28 ರಂದು ಆಚರಿಸಿದ ವಿಶ್ವ ಋತುಚಕ್ರ ನೈರ್ಮಲ್ಯ ದಿವಸಕ್ಕೆ ಸಂಬಂಧಿಸಿದಂತೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಆಗ ನನಗೆ 14 ವರ್ಷ. ನಮ್ಮ ಮನೆಯಲ್ಲಿ ದೇವರ ಪೂಜೆ ನಡೆಯುತ್ತಿತ್ತು. ಆ ಪೂಜೆಯಲ್ಲಿ ನಾನು ಪಾಲ್ಗೊಂಡಿದ್ದೆ. ಆದರೆ, ಆಗಲೇ ನನಗೆ ಪೀರಿಯಡ್ಸ್ ಆಯಿತು. ಈ ವೇಳೆ, ಅಮ್ಮ ನನ್ನ ಜೊತೆಗಿರಲಿಲ್ಲ. ಆದ್ದರಿಂದ ನಾನು ನನ್ನ ಪಕ್ಕದಲ್ಲಿ ಕುಳಿತಿದ್ದ ಚಿಕ್ಕಮ್ಮನಿಗೆ ಆತಂಕದಿಂದಲೇ ಈ ವಿಷಯ ತಿಳಿಸಿದೆ. ಈ ವಿಚಾರವನ್ನು ಚಿಕ್ಕಮ್ಮನ ಪಕ್ಕದಲ್ಲಿ ಇದ್ದವರು ಕೇಳಿಸಿಕೊಂಡು ಪರವಾಗಿಲ್ಲ ಚಿನ್ನ, ದೇವರು ಕ್ಷಮಿಸುತ್ತಾನೆ ಎಂದು ಸಮಾಧಾನದ ಮಾತುಗಳನ್ನು ಹೇಳಿದ್ದರು ಎಂದು ಬರೆದುಕೊಂಡಿದ್ದಾರೆ.

ಇದಾದ ನಂತರ ಶ್ರದ್ಧಾ ಶ್ರೀನಾಥ್ ಹೆಚ್ಚಾಗಿ ಮಹಿಳಾ ಪರ ಚಿಂತಕರಾಗಿ ಪರಿವರ್ತನೆಯಾಗಿದ್ದಾರೆ. ಸದ್ಯ ನಟಿ ಹಾಕಿರುವ ಪೋಸ್ಟ್ ವೈರಲ್ ಆಗಿದ್ದು, ಅನೇಕರು ಮುಕ್ತವಾಗಿ ವಿಷಯಗಳ ಬಗ್ಗೆ ಬರೆದುಕೊಂಡಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶ್ರದ್ಧಾ ಶ್ರೀನಾಥ್ ಆಂಗ್ಲ ಭಾಷೆಯಲ್ಲಿ ಬರೆದುಕೊಂಡಿರುವುದು ಹೀಗಿದೆ

’’I was 14. At a family pooje, I got my period. I was not accompanied by my mom, so I nudged my aunt sitting next to me and worriedly informed her of it (because I was not carrying a sanitary pad). Another good natured lady sitting close, saw me worried and overheard me and said to me, smiling reassuringly, “Parvagilla chinna, devaru kshamistaare/ don’t worry child, God will forgive you” (for being part of the Pooja while menstruating). That’s the day I became a feminist and a non believer. I was 14’’

ETV Bharat Logo

Copyright © 2025 Ushodaya Enterprises Pvt. Ltd., All Rights Reserved.