ಬೆಂಗಳೂರು: ದಂತಚೋರ ವೀರಪ್ಪನ್ ಕುರಿತಂತೆ ವೆಬ್ ಸಿರೀಸ್ ಬರುತ್ತಿದ್ದು, ಕೆಎಸ್ಆರ್ಪಿ ಎಡಿಜಿಪಿ ಅಲೋಕ್ ಕುಮಾರ್ ವೆಬ್ ಸಿರೀಸ್ಗೆ ಕ್ಲಾಪ್ ಮಾಡಿ ಚಾಲನೆ ನೀಡಿದರು.
ಕೊರಮಂಗಲ ಬಳಿ ಇರುವ ಕೆಎಸ್ಆರ್ಪಿ ಆವರಣದ ದೇವಸ್ಥಾನದಲ್ಲಿ ಚಾಲನೆ ನೀಡಿದ್ದು, ಈ ವೇಳೆ, ವೆಬ್ ಸಿರೀಸ್ ನಿರ್ದೇಶಕ ಎಎಂಆರ್ ರಮೇಶ್, ನಟ ಕಿಶೋರ್ ಹಾಜರಿದ್ದರು.
ದಂತಚೋರ ವೀರಪ್ಪನ್ ಬೇಟೆಯಲ್ಲಿ ಎಸ್ಟಿಎಫ್, ಎಎನ್ಎಫ್ ಮತ್ತು ಕೆಎಸ್ಆರ್ಪಿ ಪಡೆ ಪ್ರಮುಖ ಕಾರ್ಯಾಚರಣೆ ಮಾಡಿತ್ತು. ಈ ಹಿನ್ನೆಲೆ ಕೆಎಸ್ಆರ್ಪಿ ಆವರಣದಲ್ಲಿ ವೆಬ್ ಸಿರೀಸ್ಗೆ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿದೆ.
ದಂತಚೋರನ ಬಗ್ಗೆ 'Veerappan Hunger for killing' ಹೆಸರಲ್ಲಿ ವೆಬ್ ಸಿರೀಸ್ ಮೂಡಿ ಬರುತ್ತಿದ್ದು ಅಲೊಕ್ ಕುಮಾರ್ ಇದರ ಮಾಹಿತಿ ಪಡೆದಿದ್ದಾರೆ.