ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಆದರೆ, ಈ ಬಾರಿ ಶಿವಣ್ಣ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಕೋವಿಡ್ ಕಾರಣ ಅವರು ಮೊದಲೇ ಹೇಳಿದಂತೆ ಸರಳವಾಗಿ ಕೇಕ್ ಕತ್ತರಿಸಿ ಬರ್ತಡೇ ಆಚರಿಸಿಕೊಂಡಿದ್ದಾರೆ.
ಸದ್ಯ 59ನೇ ವಸಂತಕ್ಕೆ ಕಾಲಿಟ್ಟಿರುವ ಸೆಂಚುರಿ ಸ್ಟಾರ್ಗೆ ಮಗಳು ನಿವೇದಿತಾ ಸರ್ ಪ್ರೈಸ್ ಬರ್ತಡೇ ಕೇಕ್ ಕಟ್ ಮಾಡಿಸಿದ್ದಾರೆ. ಪತ್ನಿ ಗೀತಾ ಹಾಗೂ ಕೆಲ ಆತ್ಮೀಯರೊಂದಿಗೆ ಕನಕಪುರದ ಫಾರ್ಮ್ ಹೌಸ್ನಲ್ಲಿ ಸಿಂಪಲ್ ಆಗಿ ಹುಟ್ಟು ಹಬ್ಬ ಸೆಲೆಬ್ರೇಟ್ ಮಾಡಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ 35 ವರ್ಷಗಳನ್ನು ಪೂರೈಸಿ 120ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶಿವರಾಜ್ ಕುಮಾರ್, ಈ ಪಯಣದಲ್ಲಿ ಸಾಕಷ್ಟು ಸೋಲು, ಗೆಲುವುಗಳನ್ನು ಕಂಡಿದ್ದಾರೆ. ಡಾ. ರಾಜ್ಕುಮಾರ್, ವಿಷ್ಣುವರ್ಧನ್ ಮತ್ತು ಅಂಬರೀಶ್ ಅವರ ಬಳಿಕ ಕನ್ನಡ ಚಿತ್ರರಂಗದ ನಾಯಕ್ವದ ಹೊಣೆಯನ್ನು ಶಿವಣ್ಣ ಹೊತ್ತಿದ್ದಾರೆ.
ಶಿವರಾಜ್ ಕುಮಾರ್ ಅವರಿಗೆ ಆರೋಗ್ಯ, ಐಶ್ವರ್ಯ ಕೊಟ್ಟು ಕಾಪಾಡಲಿ ಎಂದು ಕಿಚ್ಚ ಸುದೀಪ್ ಶುಭ ಹಾರೈಸಿದ್ದಾರೆ. ಅದೇ ರೀತಿ ಹಲವರು ಶಿವಣ್ಣನವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ.
ಓದಿ : 'ಶಿವಪ್ಪ' ಚಿತ್ರದ ಹೆಸರು ಬದಲಾವಣೆ.. ಶಿವಣ್ಣನ ಹುಟ್ಟುಹಬ್ಬದಂದೇ ಅಧಿಕೃತ ಘೋಷಣೆ
ಶಿವಣ್ಣ ಹುಟ್ಟುಹಬ್ಬದ ಪ್ರಯುಕ್ತ ಅವರ ಭಜರಂಗಿ 2, ಹಾಗೂ 123 ನೇ ಸಿನಿಮಾದ ಟೈಟಲ್ ಇಂದು ಅನಾವರಣಗೊಳ್ಳಲಿದೆ. ಅಲ್ಲದೆ, ನಾಲ್ಕೈದು ಹೊಸ ಸಿನಿಮಾಗಳು ಘೋಷಣೆಯಾಗುವ ಸಾಧ್ಯತೆಯಿದೆ.