ಶಿವರಾಜ್ ಕುಮಾರ್ ಅಪ್ಪಟ ಅಭಿಮಾನಿಯಾಗಿದ್ದ ರೋಷನ್ ಸೋಮವಾರ ಈಜಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಮಾಗಡಿ ರಸ್ತೆಯಲ್ಲಿದ್ದ ರೋಷನ್ ಸಾವನ್ನಪ್ಪಿದ್ದಕ್ಕೆ ನಟ ಶಿವರಾಜ್ ಕುಮಾರ್ ಕಂಬನಿ ಮಿಡಿದಿದ್ದಾರೆ.
ಅಭಿಮಾನಿ ಸಾವಿನ ವಿಷ್ಯ ತಿಳಿದು ದುಂಬಾ ಬೇಸರವಾಗಿದೆ. ದಯವಿಟ್ಟು ಕೆಟ್ಟ ಸಾಹಸಗಳನ್ನ ಮಾಡಬೇಡಿ ಅಂತ ಮನವಿ ಮಾಡಿದ್ದಾರೆ. ಗೊತ್ತಿಲ್ಲದೆ ಕೆಲಸಗಳನ್ನ ಮಾಡೋದಿಕ್ಕೆ ಹೋಗಿ ನಿಮ್ಮ ಪ್ರಾಣ ಕಳೆದುಕೊಳ್ಳುವುದರಿಂದ ನಿಮ್ಮ ಕುಟುಂಬದಲ್ಲಿ ನಿಮ್ಮ ಪತ್ನಿ, ಅಣ್ಣ- ತಮ್ಮಂದಿರು, ಅಪ್ಪ-ಅಮ್ಮ ಸೇರಿದಂತೆ ಎಲ್ಲರಿಗೂ ತುಂಬಾ ನೋವಾಗುತ್ತದೆ. ಆದರಿಂದ ದಯವಿಟ್ಟು ಯಾರೂ ಕೂಡ ಇಂತಹ ಸಾಹಸಕ್ಕೆ ಕೈ ಹಾಕಬೇಡಿ ಎಂದು ಮನವಿ ಮಾಡಿದ್ದಾರೆ ಶಿವಣ್ಣ.
ಮೃತ ರೋಷನ್ ಕುಟುಂಬಕ್ಕೆ ಆ ದೇವರು ನೋವನ್ನ ಸಹಿಸಿಕೊಳ್ಳುವ ಶಕ್ತಿ ಕೊಡಲಿ ಮತ್ತು ರೋಷನ್ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಶಿವರಾಜ್ ಕುಮಾರ್ ಪ್ರಾರ್ಥಿಸಿದ್ದಾರೆ.