ನಾಡಿನಾದ್ಯಂತ 64ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಕಳೆಗಟ್ಟಿದೆ. ಕನ್ನಡ ಹಬ್ಬವನ್ನು ಆಚರಿಸುತ್ತಿರುವ ಕನ್ನಡಿಗರಿಗೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ನಾಡಹಬ್ಬದ ಶುಭಾಶಯ ಹೇಳಿದ್ದಾರೆ.
ಕನ್ನಡ ಮಾತನಾಡಿ, ಕನ್ನಡ ಉಳಿಸಿ, ಕನ್ನಡ ಬೆಳೆಸಿ... ನಾಡಿನ ಯಾವುದೇ ವಿಚಾರದಲ್ಲಿ ಕನ್ನಡಿಗರ ಜೊತೆ ಸದಾ ನಾನು ಇರುತ್ತೇನೆ ಎಂದು ಹೇಳುವ ಮೂಲಕ ಕರುನಾಡ ಚಕ್ರವರ್ತಿ ಕನ್ನಡಿಗರಿಗೆ ಶುಭಾಶಯ ಹೇಳಿದ್ದಾರೆ.
ಕನ್ನಡಿಗರಿಗೆ ಹಿರಿಯ ನಟ ಅನಂತ್ ನಾಗ್ ಅವರು ವಿಶೇಷ ದಿನಕ್ಕೆ ಶುಭ ಕೋರಿದ್ದು, ಕನ್ನಡಿಗರಿಗೆ ಆಯುಷ್ಮಾನ್ ಭವ ಚಿತ್ರವನ್ನು ಬಿಡುಗಡೆ ಮಾಡುವ ಮೂಲಕ ರಾಜ್ಯೋತ್ಸವದ ಶುಭಾಶಯ ಹೇಳಬೇಕೆಂದುಕೊಂಡಿದ್ದೆವು , ದುರದೃಷ್ಟವಶಾತ್ ಅದು ಸಾಧ್ಯವಾಗಲಿಲ್ಲ ಅದಕ್ಕೆ ಕ್ಷಮೆ ಇರಲಿ, ದಯವಿಟ್ಟು ಕನ್ನಡ ರಾಜ್ಯೋತ್ಸವವನ್ನು ಆನಂದದಿಂದ ಆಚರಿಸಿ ಎಂದು ಕನ್ನಡಿಗರಿಗೆ ರಾಜ್ಯೋತ್ಸವಕ್ಕೆ ಶುಭಕೋರಿದ್ದಾರೆ.