ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಇತ್ತೀಚೆಗಷ್ಟೇ 'ಓಂ' ಚಿತ್ರದ 25ನೇ ವರ್ಷದ ಸಂಭ್ರಮವನ್ನು ಆಚರಿಸಿದ್ದರು. ಅಭಿಮಾನಿಗಳು ಶಿವಣ್ಣ ಅವರ ಹೊಸ ಚಿತ್ರ ಯಾವುದಿರಬಹುದು ಎಂದು ತಿಳಿಯಲು ಕಾತರರಾಗಿದ್ದಾರೆ. ಈ ನಡುವೆ ಅಭಿಮಾನಿಗಳಿಗೆ ಖುಷಿಯ ವಿಚಾರ ನೀಡಿದ್ದಾರೆ ಸೆಂಚುರಿ ಸ್ಟಾರ್.
ಜುಲೈ 12 ಶಿವರಾಜ್ಕುಮಾರ್ ಹುಟ್ಟುಹಬ್ಬದಂದು ಅವರ ಹೊಸ ಸಿನಿಮಾ 'ಇಂದ್ರಸೇನ' ಆರಂಭವಾಗಲಿದೆ ಎನ್ನಲಾಗುತ್ತಿದೆ. ಸಂಭಾಷಣೆಕಾರ ಹಾಗೂ ನಿರ್ದೇಶಕ ಮುರಳಿ ಮೋಹನ್ ಅವರ ಕನಸಿನ ಪ್ರಾಜೆಕ್ಟ್ ಇದಾಗಿದ್ದು ಸೆಂಚುರಿ ಸ್ಟಾರ್ ಅವರ ಡೇಟ್ಸ್ ಪಡೆದಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ಕೂಡಾ ರೆಡಿ ಮಾಡಿದ್ಧಾರಂತೆ ಮುರಳಿ ಮೋಹನ್. ಈ ಹಿಂದೆ ವಿ. ಮನೋಹರ್ ನಿರ್ದೇಶನದಲ್ಲಿ ಶಿವಣ್ಣ 'ಇಂದ್ರ ಧನುಷ್' ಚಿತ್ರದಲ್ಲಿ ನಟಿಸಿದ್ದರು. ಈಗ ಮುರಳಿ ಮೋಹನ್ ನಿರ್ದೇಶದಲ್ಲಿ 'ಇಂದ್ರಸೇನ' ಆಗುತ್ತಿದ್ಧಾರೆ.
![Murali mohan](https://etvbharatimages.akamaized.net/etvbharat/prod-images/murali-mohan-dialogue-writer-of-om-film1591150746503-70_0306email_1591150757_832.jpg)
ಮುರಳಿ ಮೋಹನ್ 'ಓಂ' ಚಿತ್ರಕ್ಕೆ ಸಂಭಾಷಣೆ ಬರೆದವರು. ಈ ಮುನ್ನ ಶಿವರಾಜ್ಕುಮಾರ್ ಅಭಿನಯದ 'ಸಂತ', ಉಪೇಂದ್ರ ಅಭಿನಯದ 'ನಾಗರಹಾವು', ವಿ. ರವಿಚಂದ್ರನ್ ಅಭಿನಯದ 'ಮಲ್ಲಿಕಾರ್ಜುನ' ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಬಹಳ ವರ್ಷಗಳ ನಂತರ ಇದೀಗ ಮತ್ತೆ ಶಿವಣ್ಣ ಸಿನಿಮಾ ಮೂಲಕ ನಿರ್ದೇಶನಕ್ಕೆ ಬಂದಿದ್ಧಾರೆ. ಸಿನಿಮಾ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡಿದರೆ ಜುಲೈ 12 ರಂದು ಚಿತ್ರ ಸೆಟ್ಟೇರಲಿದೆ.