ಭಾರತೀಯ ಚಿತ್ರರಂಗದಲ್ಲಿ ಒಂದು ಸಿನಿಮಾ ಬಿಡುಗಡೆ ಆದ್ರೆ, ಆ ಸಿನಿಮಾ ಮತ್ತೆ ಪ್ರಸಾರ ಆಗೋದು ಟಿವಿಗಳ ಮಾತ್ರ. ಅಭಿಮಾನಿಗಳ ಒತ್ತಾಯದ ಮೇರೆಗೆ ಒಂದು ಅಥವಾ ಎರಡು ಬಾರಿ ಸಿನಿಮಾವನ್ನ ಮತ್ತೆ ಬಿಡುಗಡೆ ಮಾಡಬಹುದು. ಆದರೆ, ಇಲ್ಲೊಂದು ಸಿನಿಮಾ ಅತಿ ಹೆಚ್ಚು ಬಾರಿ ಬಿಡುಗಡೆ ಆಗುವ ಮೂಲಕ ಹೊಸ ಅಧ್ಯಾಯ ಬರೆದಿದೆ.
ಓಂ ಸಿನಿಮಾ 1995ರಂದು ರಿಲೀಸ್ ಆಗಿ, ಕೆಲವು ದಿನಗಳ ಹಿಂದೆ ಸಿಲ್ವರ್ ಜ್ಯೂಬ್ಲಿಯನ್ನ ಆಚರಿಸಿಕೊಂಡಿತ್ತು. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ ಓಂ ಚಿತ್ರ, ತೆರೆಕಂಡು ಇಂದಿಗೆ ಬರೋಬ್ಬರಿ 26 ವರ್ಷಗಳು ತುಂಬಿವೆ. ಮೇ 19, 1995ರಂದು ಓಂ ತೆರೆ ಕಂಡಿತ್ತು. ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಮಾಸ್ಟರ್ ಪೀಸ್ ಸಿನಿಮಾ ಓಂ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಪ್ರೇಮಾ ಅಭಿನಯದ, ಉಪೇಂದ್ರ ನಿರ್ದೇಶನದ ಓಂ ಸಿನಿಮಾ ಶುರುವಾಗಿದ್ದೇ ಒಂದು ಇಂಟ್ರಸ್ಟ್ರಿಂಗ್ ಕಹಾನಿ.
![Shivarajkumar starred Om movie completes 26 years](https://etvbharatimages.akamaized.net/etvbharat/prod-images/kn-bng-06-shivarajkumar-upendra-om-movie-complete-26years-7204735_19052021192451_1905f_1621432491_661.jpg)
ಇಂದು ಕನ್ನಡ ಚಿತ್ರರಂಗದಲ್ಲಿ ಬುದ್ದಿವಂತ ನಿರ್ದೇಶಕ ಹಾಗೂ ನಟ ಅಂತಾ ಕರೆಯಿಸಿಕೊಂಡ ಉಪೇಂದ್ರ, ಕಾಲೇಜು ದಿನಗಳಲ್ಲಿ ಬರೆದ ಸ್ಕ್ರಿಪ್ಟ್ ಓಂ. ಈ ಸಿನಿಮಾ ಕಥೆ ಬರೆದಾಗ ಉಪೇಂದ್ರ ಮೊದಲಿಗೆ ನಟ ಕುಮಾರ್ ಗೋವಿಂದ್ ಹಾಕಿಕೊಂಡು ಈ ಸಿನಿಮಾ ಮಾಡಬೇಕು ಅಂದು ಕೊಂಡಿದ್ರು. ಆದರೆ, ಕೆಲವು ಕಾರಣಗಳಿಂದ ಈ ಓಂ ಸಿನಿಮಾ ಕಥೆಯನ್ನ ಶಿವರಾಜ್ ಕುಮಾರ್ಗೆ ಮಾಡಬೇಕಾದ ಕಾಲ ಕೂಡಿ ಬಂತು.
![Shivarajkumar starred Om movie completes 26 years](https://etvbharatimages.akamaized.net/etvbharat/prod-images/kn-bng-06-shivarajkumar-upendra-om-movie-complete-26years-7204735_19052021192451_1905f_1621432491_858.jpg)
ಡಾ.ರಾಜ್ ಕುಮಾರ್ ಹಾಗೂ ಸಹೋದರ ವರದಾಜ್ ಸ್ವತಃ ಕುಳಿತು ಓಂ ಸಿನಿಮಾದ ಕಥೆಯನ್ನ ಕೇಳಿದ್ರಂತೆ. ಅಣ್ಣಾವ್ರು ಓಂ ಸಿನಿಮಾ ಕಥೆ ಕೇಳಿ ಉಪೇಂದ್ರಗೆ 5,000 ಸಾವಿರ ಅಡ್ವಾನ್ಸ್ ಹಣ ಕೊಟ್ಟು ಈ ಸಿನಿಮಾ ಕಥೆ ಮತ್ತಷ್ಟು ಬದಲಾವಣೆ ಮಾಡಿ ಅಂತಾ ಓಂಕಾರ ಹಾಕಿದ್ದರಂತೆ.
ನಷ್ಟದಲ್ಲಿದ್ದ ಇಂಡಸ್ಟ್ರಿಗೆ ಬೂಸ್ಟ್ ನೀಡಿದ್ದ ಸಿನಿಮಾ
ನಿರ್ದೇಶಕ ಉಪೇಂದ್ರ 1995ರಲ್ಲೇ ರಿಯಲ್ ಡಾನ್ಗಳನ್ನ ಇಟ್ಟುಕೊಂಡು ಓಂ ಸಿನಿಮಾ ಮಾಡಿದ್ದು, ಒಂದು ಚಾಲೆಂಜಿಂಗ್ ಆಗಿತ್ತು. ಇನ್ನು ಓಂ ಅಕ್ಷರಕ್ಕೆ ಸಂಬಂಧಪಟ್ಟಂತೆ ಸಿನಿಮಾದಲ್ಲಿ ಹಾಡು ಇಡುವ ಪ್ಲ್ಯಾನ್ ಯಾವುದು ಇರಲಿಲ್ಲ, ಆದರೆ ಅಣ್ಣಾವ್ರ ಸಲಹೆ ಮೇರೆಗೆ ಹೇ ದಿನಕರ ಹಾಡನ್ನು ಮಾಡಲಾಯಿತು.
![Shivarajkumar starred Om movie completes 26 yearsShivarajkumar starred Om movie completes 26 years](https://etvbharatimages.akamaized.net/etvbharat/prod-images/kn-bng-06-shivarajkumar-upendra-om-movie-complete-26years-7204735_19052021192451_1905f_1621432491_503.jpg)
ಹೀಗೆ ಒಂದಲ್ಲ ಒಂದು ದಾಖಲೆ, ಮಾಡಿರೋ ಓಂ ಸಿನಿಮಾದ ಬಗ್ಗೆ ಒಂದು ರೋಚಕ ಕಥೆ ಇದೆ. ಥಿಯೇಟರ್ಗಳಲ್ಲಿ ಲಾಭ ಕಡಿಮೆ ಆದಾಗ, ವಿತರಕರು ಕೊಂಚ ಕಷ್ಟದಲ್ಲಿದ್ದಾಗ, ಅವರೆಲ್ಲರಿಗೂ ಆಪತ್ಭಾಂಧವ ಈ ಓಂ ಸಿನಿಮಾ ಅನ್ನೋದು.
ಕನ್ನಡ ಸಿನಿಮಾ ಇತಿಹಾಸದಲ್ಲಿ, ಎಷ್ಟು ಬಾರಿ ನೋಡಿದರೂ, ಮತ್ತೆ ಮತ್ತೆ ನೋಡಬೇಕು ಎನ್ನುವಂತಹ ಬೋರಾಗದೇ ಇರುವ ಸಿನಿಮಾಗಳ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಸಿನಿಮಾ ಬಹುಶಃ ಓಂ ಮಾತ್ರ. ಈ ಚಿತ್ರ ಬಿಡುಗಡೆಯಾಗಿ 25 ವರ್ಷಗಳು ಆಗಿದ್ದರೂ ಕೂಡ ಈಗಲೂ ಓಂ ಸಿನಿಮಾ ರಿಲೀಸ್ ಆದ್ರೆ, ಜನ ಮುಗಿಬಿದ್ದು ನೋಡುತ್ತಾರೆ. ಪ್ರತಿ ಬಾರಿ ಓಂ ಬಿಡುಗಡೆಯಾದಾಗಲೂ 10ರಿಂದ 20 ಲಕ್ಷ ರೂಪಾಯಿ ಕಲೆಕ್ಷನ್ ಆಗುತ್ತಿದೆಯಂತೆ.
![Shivarajkumar starred Om movie completes 26 years](https://etvbharatimages.akamaized.net/etvbharat/prod-images/kn-bng-06-shivarajkumar-upendra-om-movie-complete-26years-7204735_19052021192451_1905f_1621432491_19.jpg)
18 ವರ್ಷದ ಬಳಿಕ ಟಿವಿ ಪರದೆಗೆ ಬಂದ ಓಂ
ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ನೀಡಿದ ಈ ಚಿತ್ರ 18 ವರ್ಷಗಳ ಬಳಿಕ ಖಾಸಗಿ ಟಿವಿ ವಾಹಿನಿಗೆ ಮಾರಾಟವಾಗಿರುವುದು ವಿಶೇಷಗಳಲ್ಲಿ ವಿಶೇಷ. ಈ ಸಿನಿಮಾ ಬಂದು 18ವರ್ಷ ಆದ್ರೂ 2.5 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಅಂದಿನ ದಿನಗಳಲ್ಲಿ ಬಾಕ್ಸ್ ಆಫೀಸ್ನಲ್ಲಿ 25 ಕೋಟಿ ರೂ.ಗಳಿಸುವ ಮೂಲಕ ದಾಖಲೆ ಬರೆದಿತ್ತು.
![Shivarajkumar starred Om movie completes 26 years](https://etvbharatimages.akamaized.net/etvbharat/prod-images/kn-bng-06-shivarajkumar-upendra-om-movie-complete-26years-7204735_19052021192451_1905f_1621432491_256.jpg)
ಇನ್ನು ಈ ಸಿನಿಮಾವನ್ನ ಅವತ್ತಿನ ದಿನಗಳಲ್ಲಿ ವಜ್ರೇಶ್ವರಿ ಕಂಬೈನ್ಸ್ನಲ್ಲಿ, ಬರೋಬ್ಬರಿ 50 ಲಕ್ಷ ರೂಪಾಯಿ ಮಾಡಿ ಈ ಸಿನಿಮಾ ನಿರ್ಮಾಣ ಮಾಡಲಾಗಿತ್ತು. ಈ ಸಿನಿಮಾಕ್ಕೆ ಸಂಭಾಷಣೆ ಬರೆದಿದ್ದ ಮುರಳಿ ಮೋಹನ್ ಹೇಳುವ ಪ್ರಕಾರ ಈ ಚಿತ್ರದ ರಿಮೇಕ್ ರೈಟ್ಸ್ 55 ಲಕ್ಷ ರೂಪಾಯಿಗೆ ಮಾರಾಟ ಆಗಿತ್ತಂತೆ.
![Shivarajkumar starred Om movie completes 26 years](https://etvbharatimages.akamaized.net/etvbharat/prod-images/kn-bng-06-shivarajkumar-upendra-om-movie-complete-26years-7204735_19052021192451_1905f_1621432491_587.jpg)
ಇದಲ್ಲೆ ಓಂ ಸಿನಿಮಾ ಅತೀ ಹೆಚ್ಚು ಬಾರಿ ರೀ ರಿಲೀಸ್ ಆಗಿದ್ದು, ಕರ್ನಾಟಕದಾದ್ಯಂತ 400 ಥಿಯೇಟರ್ಗಳಲ್ಲಿ 650 ಬಾರಿ ಬಿಡುಗಡೆಯಾಗಿದೆ. ಒಟ್ಟಾರೆ ಓಂ ಚಿತ್ರ ತೆರೆ ಕಂಡು 26 ವರ್ಷಗಳು ಕಳೆದಿದ್ರೂ ಕೂಡ ಈ ಸಿನಿಮಾ ಹವಾ ಮಾತ್ರ ಕಡಿಮೆ ಆಗಿಲ್ಲ. ಭಾರತೀಯ ಸಿನಿಮಾ ರಂಗದಲ್ಲಿ 650ಕ್ಕೂ, ಅಧಿಕ ಬಾರಿ ರೀ-ರಿಲೀಸ್ ಆಗಿರುವ ಏಕೈಕ ಕನ್ನಡ ಸಿನಿಮಾ ಇದಾಗಿದೆ.
![Shivarajkumar starred Om movie completes 26 years](https://etvbharatimages.akamaized.net/etvbharat/prod-images/kn-bng-06-shivarajkumar-upendra-om-movie-complete-26years-7204735_19052021192451_1905f_1621432491_189.jpg)