ETV Bharat / sitara

ಮತ್ತೊಮ್ಮೆ ಬೆಳ್ಳಿತೆರೆ ಮೇಲೆ ಮುಖಾಮುಖಿಯಾಗುತ್ತಿರುವ ಟಗರು ಶಿವ ಹಾಗೂ ಡಾಲಿ..! - ಸ್ಯಾಂಡಲ್​ವುಡ್ ನಟ ಡಾಲಿ ಧನಂಜಯ್

'ಟಗರು' ಚಿತ್ರದಲ್ಲಿ ಮೋಡಿ ಮಾಡಿದ್ದ ಶಿವರಾಜ್​ಕುಮಾರ್ ಹಾಗೂ ಡಾಲಿ ಧನಂಜಯ್ ಜೋಡಿ ಮತ್ತೆ ಒಂದಾಗುತ್ತಿದೆ. ಇನ್ನೂ ಹೆಸರಿಡದ ಹೊಸ ಚಿತ್ರದಲ್ಲಿ ಇಬ್ಬರೂ ನಟಿಸುತ್ತಿದ್ದು ಚಿತ್ರವನ್ನು ವಿಜಯ್ ಮಿಲ್ಟನ್ ನಿರ್ದೇಶಿಸುತ್ತಿದ್ದಾರೆ.

Tagaru fame Dolly Dhananjay
ಮತ್ತೆ ಒಟ್ಟಿಗೆ ನಟಿಸುತ್ತಿರುವ ಶಿವಣ್ಣ ಧನಂಜಯ್
author img

By

Published : Jul 10, 2020, 11:32 PM IST

2018ರಲ್ಲಿ ಕನ್ನಡ ಚಿತ್ರರಂಗದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆದ ಸಿನಿಮಾ 'ಟಗರು'. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಹಳ ವರ್ಷಗಳ ನಂತರ ಖಾಕಿ ತೊಟ್ಟು ಅಬ್ಬರಿಸಿದ ಚಿತ್ರ ಇದು. ಈ ಚಿತ್ರದ ಹಾಡುಗಳಂತೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ.

Tagaru fame Dolly Dhananjay
ಮತ್ತೆ ಒಟ್ಟಿಗೆ ನಟಿಸುತ್ತಿರುವ ಶಿವಣ್ಣ ಧನಂಜಯ್

ಈ ಚಿತ್ರದಲ್ಲಿ ಸೆಂಚುರಿ ಸ್ಟಾರ್ ಎದುರು ಧನಂಜಯ್ ಪಕ್ಕಾ ರಾ ಸ್ಟೈಲ್​​​​ನ ಡಾಲಿಯಾಗಿ ಕಾಣಿಸಿಕೊಂಡಿದ್ರು. ಇವರಿಬ್ಬರ ಕಾಂಬೋ ದೊಡ್ಡ ಮಟ್ಟದಲ್ಲಿ ಕ್ರೇಜ್ ಹುಟ್ಟುಹಾಕಿತ್ತು. ಈ ಸಿನಿಮಾದಿಂದ ಧನಂಜಯ್ ಡಾಲಿ ಧನಂಜಯ್ ಆಗಿ ಸ್ಟಾರ್ ಡಮ್ ಗಿಟ್ಟಿಸಿಕೊಂಡ್ರು. ಇದೀಗ ಈ ಜೋಡಿ ಹೆಸರಿಡದ ಹೊಸ ಸಿನಿಮಾವೊಂದರಲ್ಲಿ ಮತ್ತೆ ಒಂದಾಗುತ್ತಿದ್ದಾರೆ.

Tagaru fame Dolly Dhananjay
ಶಿವಣ್ಣ ಜೊತೆ ಮತ್ತೆ ನಟಿಸುತ್ತಿರುವುದಾಗಿ ಹೇಳಿಕೊಂಡ ಧನಂಜಯ್

ಶಿವಣ್ಣ ಹಾಗೂ ಧನಂಜಯ್ ಒಟ್ಟಾಗಿ ನಟಿಸುತ್ತಿರುವ ಈ ಚಿತ್ರವನ್ನು ವಿಜಯ್ ಮಿಲ್ಟನ್ ಎಂಬ ನಿರ್ದೇಶಕ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ‌. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತವಿದೆ. ಈ ಸಿನಿಮಾ ಬಗ್ಗೆ ಧನಂಜಯ್ ಅಧಿಕೃತವಾಗಿ ಘೋಷಿಷಿದ್ದು 2021ಕ್ಕೆ ನಾನು ಶಿವಣ್ಣ ಮತ್ತೆ ನಿಮ್ಮ ಮುಂದೆ ಬರ್ತೀವಿ ಅಂತಾ ಹೇಳಿದ್ದಾರೆ. ಆದರೆ ಈ‌ ಚಿತ್ರದಲ್ಲಿ ಡಾಲಿ ಹಾಗೂ ಶಿವಣ್ಣ ಯಾವ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವುದು ಮಾತ್ರ ಸಸ್ಪೆನ್ಸ್.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.