'ಶಿವಾಜಿ ಸುರತ್ಕಲ್' , ಟೈಟಲ್ನಿಂದಲೇ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿರುವ ಸಿನಿಮಾ. ಕನ್ನಡದ ಚಾರ್ಮಿಂಗ್ ಸ್ಟಾರ್ ರಮೇಶ್ ಅರವಿಂದ್ ಅಭಿನಯದ 101ನೇ ಸಿನಿಮಾ 'ಶಿವಾಜಿ ಸುರತ್ಕಲ್'. ಟೀಸರ್ನಿಂದ ಗಮನ ಸೆಳೆದಿದ್ದ ಶಿವಾಜಿ ಸುರತ್ಕಲ್ ಚಿತ್ರದ ಅಫಿಷಿಯಲ್ ಟ್ರೇಲರ್ ಅನಾವರಣಗೊಂಡಿದೆ.
ಸೈಕಾಲಜಿಕಲ್ ಥ್ರಿಲ್ಲರ್ ಕಥೆ ಆಧರಿಸಿರುವ 'ಶಿವಾಜಿ ಸುರತ್ಕಲ್' ಟ್ರೇಲರ್ ಸಾಕಷ್ಟು ಭರವಸೆ ಹುಟ್ಟಿಸಿದೆ. ಚಿತ್ರದಲ್ಲಿ ರಮೇಶ್ ಅರವಿಂದ್ ಎರಡು ಶೇಡ್ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಹೈಲೆಟ್ ಬಗ್ಗೆ ಮಾಹಿತಿ ನೀಡಲು, ರಮೇಶ್ ಅರವಿಂದ್, ನಟಿ ರಾಧಿಕಾ ನಾರಾಯಣ್, ಆರೋಹಿ ನಾರಾಯಣ್, ನಿರ್ದೇಶಕ ಆಕಾಶ್ ಶ್ರೀವತ್ಸ, ನಿರ್ಮಾಪಕ ಅನೂಪ್ ಗೌಡ ಸೇರಿದಂತೆ ಇಡೀ 'ಶಿವಾಜಿ ಸುರತ್ಕಲ್' ಚಿತ್ರತಂಡ ಉಪಸ್ಥಿತಿ ಇತ್ತು. ಆಕಾಶ್ ಶ್ರೀವತ್ಸ ಈ ಚಿತ್ರವನ್ನು ನಿರ್ದೇಶಿಸಿದರೆ, ಅನೂಪ್ ಗೌಡ ಹಾಗೂ ರೇಖಾ ಕೆ.ಎನ್. ನಿರ್ಮಿಸಿದ್ದಾರೆ.
'ರಂಗಿತರಂಗ' ಚಿತ್ರದ ನಾಯಕಿ ರಾಧಿಕಾ ನಾರಾಯಣ್ ರಮೇಶ್ ಪತ್ನಿ ಜನನಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. 'ದೃಶ್ಯಂ' ಚಿತ್ರದಲ್ಲಿ ನಟಿಸಿದ್ದ ಆರೋಹಿ ನಾರಾಯಣ್ ಈ ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. 'ಕೇಸ್ ಆಫ್ ರಣಗಿರಿ ರಹಸ್ಯ' ಎಂಬ ಟ್ಯಾಗ್ಲೈನ್ ಹೊಂದಿರುವ ಈ ಚಿತ್ರ, ರಮೇಶ್ ಅರವಿಂದ್ ಸಿನಿಮಾ ಜರ್ನಿಯಲ್ಲಿ ವಿಭಿನ್ನವಾದ ಸಿನಿಮಾ ಆಗುವ ಸೂಚನೆ ನೀಡಿದೆ. ಈ ಚಿತ್ರಕ್ಕೆ ಗುರು ಪ್ರಸಾದ್ ಎಂ.ಜಿ. ಕ್ಯಾಮರಾ ವರ್ಕ್ ಮಾಡಿದ್ದು, ಜೂಡಾ ಸ್ಯಾಂಡಿ ಸಂಗೀತ ನೀಡಿದ್ದಾರೆ.
- " class="align-text-top noRightClick twitterSection" data="">
ಮಹಾಶಿವರಾತ್ರಿ ಹಬ್ಬಕ್ಕೆ ಶಿವಾಜಿ ಸುರತ್ಕಲ್ ಸಿನಿಮಾವನ್ನು, ಕೆ.ಆರ್.ಜಿ ಸ್ಟುಡಿಯೋ ಸಂಸ್ಥೆ ರಾಜ್ಯಾದ್ಯಂತ ಬಿಡುಗಡೆ ಮಾಡಲಿದೆ. ಶ್ರೀಕಾಂತ್ ಈ ಚಿತ್ರವನ್ನು ಸಂಕಲನ ಮಾಡಿದ್ದಾರೆ. ಅಭಿಜಿತ್, ಆಕಾಶ್ ಶ್ರೀವತ್ಸ ಚಿತ್ರಕಥೆ ಬರೆದಿದ್ದಾರೆ. ಮಹಾ ಶಿವರಾತ್ರಿ ಹಬ್ಬಕ್ಕೆ , ಅಂದರೆ ಫೆಬ್ರವರಿ 21 ರಂದು ರಮೇಶ್ ಅರವಿಂದ್ ಡಿಟೆಕ್ಟಿವ್ ಆಗಿ ಬೆಳ್ಳಿ ಪರದೆ ಮೇಲೆ ಮಿಂಚಲಿದ್ದಾರೆ.