ಕನ್ನಡ ಚಿತ್ರರಂಗದಲ್ಲಿ ಚಿತ್ರದ ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿರೋ ಸಿನಿಮಾ 'ಕನ್ನಡಿಗ'. ಕ್ರೇಜಿಸ್ಟಾರ್ ರವಿಚಂದ್ರನ್ ಅಪ್ಪಟ ಕನ್ನಡಿಗನ ಪಾತ್ರದಲ್ಲಿ ಅಭಿನಯಿಸುತ್ತಿರೋ ನಿರೀಕ್ಷೆಯ ಸಿನಿಮಾ.ಬಹುತೇಕ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ನಲ್ಲಿ ಬ್ಯುಸಿಯಾಗಿರೋ ಕನ್ನಡಿಗ ಚಿತ್ರದ ಟೈಟಲ್ ಹಾಡನ್ನ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಡುವ ಮೂಲಕ ಕ್ರೇಜಿಸ್ಟಾರ್ಗೆ ಸಾಥ್ ನೀಡಿದ್ದಾರೆ.ನಿರ್ದೇಶಕ ಸಂತೋಷ್ ಆನಂದ್ ರಾಮ್ ಬರೆದಿರುವ ಸಾಹಿತ್ಯಕ್ಕೆ, ಶಿವರಾಜ್ ಕುಮಾರ್ ಸಖತ್ ಎನರ್ಜಿಯಿಂದ ಹಾಡಿದ್ದಾರೆ.
ಈ ಹಾಡು ಕನ್ನಡಿಗ ಚಿತ್ರದ ಶೀರ್ಷಿಕೆ ಹಾಡು ಆಗಿದ್ದು, ಸಿರಿಗನ್ನಡಂ ಏಳ್ಗೆ, ಕನ್ನಡಂ ಬಾಳ್ಗೆ, ಕನ್ನಡ ನಮ್ಮಪಾಲ್ಗೆ ಎಂಬ ಹಾಡು ಕೇಳುಗರನ್ನ ರೋಮಾಂಚನಗೊಳಿಸುತ್ತಿದೆ. ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರ್ ಈ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೆಜಿಎಫ್ ನಂತಹ ಹಿಟ್ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುವ ರವಿ ಬಸ್ರೂರ್, 'ಕನ್ನಡಿಗ'ದಲ್ಲಿ ತಮ್ಮ ಕೈ ಚಳಕ ತೋರಿಸಿದ್ದಾರೆ.
- " class="align-text-top noRightClick twitterSection" data="">
ಇನ್ನು ಶಿವರಾಜ್ ಕುಮಾರ್ ಅಭಿನಯದ ಜೊತೆಗೆ ಈಗಾಗಲೇ ಹಲವಾರು ಸಿನಿಮಾಗಳಿಗೆ ಹಾಡುಗಳನ್ನ ಹಾಡಿದ್ದಾರೆ. ಆದರೆ ಈ ಕನ್ನಡಿಗ ಸಿನಿಮಾದಲ್ಲಿ, ಕನ್ನಡ ಭಾಷೆ ಬಗ್ಗೆ ಹಾಡಿರೋ ಪರಿ,ಅದ್ಭುತವಾಗಿ ಮೂಡಿ ಬಂದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ನಿರ್ದೇಶಕ ಬಿ.ಎಂ. ಗಿರಿರಾಜ್ ಅವರು ಈ ಸಿನಿಮಾದ ಕಥೆಯನ್ನು ಬರೆದು ನಿರ್ದೇಶನ ಮಾಡಿದ್ದಾರೆ.
'ಕನ್ನಡಿಗ' ಚಿತ್ರ ಹೆಸರೇ ಹೇಳುವಂತೆ ಇದೊಂದು ಕನ್ನಡಿಗನ ಕಥೆ ಹೇಳುತ್ತದೆ ಎಂಬುದು ಗೊತ್ತಾಗುತ್ತದೆ.ಇನ್ನು ರವಿಚಂದ್ರನ್, ಜೊತೆ ಪಾವನಾ ಜೋಡಿಯಾಗಿದ್ದಾರೆ. ಇದರ ಜೊತೆಗೆ ಜೀವಿಕಾ ಜಗದೀಶ್ ಮೈತ್ರಿ, ಬಾಲಾಜಿ ಮನೋಹರ್, ಅಚ್ಯುತ್ ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಹಿಂದೆ ಓಂಕಾರ್ ಮೂವೀಸ್ ಬ್ಯಾನರ್ ಅಡಿಯಲ್ಲಿ, ಜಟ್ಟಾ, ಮೈತ್ರಿ, ಗಿರ್ಮಿಟ್ ಸಿನಿಮಾಗಳನ್ನ ನಿರ್ಮಾಪಕ ಎನ್ ಎಸ್ ರಾಜಕುಮಾರ್ ನಿರ್ಮಾಣ ಮಾಡಿದ್ದರು.ಈಗ ಫಸ್ಟ್ ಟೈಮ್ ರವಿಚಂದ್ರನ್ ಸಿನಿಮಾವನ್ನ ಎನ್ ಎಸ್ ರಾಜಕುಮಾರ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸದ್ಯ ಕನ್ನಡಿಗ ಸಿನಿಮಾದ ಟೈಟಲ್ ಹಾಡು ಕೇಳುಗರನ್ನ ಇಂಪ್ರೆಸ್ ಮಾಡುತ್ತಿದ್ದು, ಈ ಸಿನಿಮಾ ಕ್ರೇಜಿಸ್ಟಾರ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.