ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸುಮ್ಮನೆ ಕಾಲಹರಣ ಮಾಡುವ ನಟನಲ್ಲ. ಬಿಡುವಿನ ಸಮಯದಲ್ಲಿ ಕಥೆಗಳನ್ನು ಕೇಳುವುದು, ಫಿಟ್ನೆಸ್ಗೆ ಒತ್ತು ಕೊಡುವುದು ಸೇರಿದಂತೆ ಏನಾದರೊಂದು ಮಾಡುತ್ತಲೇ ಇರುತ್ತಾರೆ.
ಈಗ ತಮ್ಮ ಅಚ್ಚುಮೆಚ್ಚಿನ ಕ್ರಿಕೆಟ್ ಆಡುವ ಮೂಲಕ ತಾವೂ ಒಬ್ಬ ಉತ್ತಮ ಆಲ್ರೌಂಡರ್ ಎಂದು ಅಭಿಮಾನಿಗಳಿಗೆ ತೋರಿಸಿಕೊಟ್ಟಿದ್ದಾರೆ. ಕಾಲೇಜು ದಿನಗಳಿಂದ ಉತ್ತಮ ಆಲ್ರೌಂಡರ್ ಆಗಿದ್ದ ಶಿವಣ್ಣಗೆ ಕ್ರಿಕೆಟ್ ಅಂದ್ರೆ ಪಂಚ ಪ್ರಾಣವಂತೆ.
ಹೀಗಾಗಿ ನಾಗವಾರ ನಿವಾಸದ ಪಕ್ಕದ ಮೈದಾನವೊಂದರಲ್ಲಿ ವಿನಯರಾಜ್ ಕುಮಾರ್, ಯುವರಾಜ್ ಕುಮಾರ್, ತಂಗಿ ಮಗ ಧೀರೇನ್ ರಾಮ್ ಕುಮಾರ್, ಟಗರು ಚಿತ್ರದ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಹಾಗೂ ಸ್ನೇಹಿತರ ಜೊತೆಗೂಡಿ ಬಿಂದಾಸ್ ಕ್ರಿಕೆಟ್ ಆಡಿದ್ದಾರೆ.