ಬಿಗ್ಬಾಸ್ ವಿನ್ನರ್ ಶೈನ್ ಶೆಟ್ಟಿ ಸಿನಿಮಾವೊಂದರಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಪ್ರಾಯಶಃ' ಎಂಬ ಸಿನಿಮಾ ಕ್ರೈಮ್ ಥ್ರಿಲ್ಲರ್ ಕಥೆಯಾಗಿದ್ದು, ರಂಜಿತ್ ರಾವ್ ಸಿನಿಮಾ ನಿರ್ದೇಶನದ ಜೊತೆಗೆ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಈ ಹಿಂದೆ ಕಿರುತೆರೆ ಧಾರಾವಾಹಿಗಳನ್ನು ನಿರ್ದೇಶಿಸಿದ್ದ ರಂಜಿತ್ ರಾವ್, 'ಪ್ರಾಯಶಃ' ಸಿನಿಮಾ ಮಾಡುತ್ತಿದ್ದಾರೆ.
ಅರಮನೆ ಮತ್ತು ಯಾರಿವಳು ಧಾರಾವಾಹಿ ನಾಯಕ ರಾಹುಲ್ ಹಾಗೂ ಸವರ್ಣ ದೀರ್ಘ ಸಂಧಿ ನಾಯಕಿ ಕೃಷ್ಣ ಭಟ್ ಜೋಡಿಯಾಗಿದ್ದಾರೆ. ಪ್ರಾಯಶಃ ಸಿನಿಮಾದಲ್ಲಿ ಬಿಗ್ ಬಾಸ್ ವಿನ್ನರ್ ಶೈನ್ ಶೆಟ್ಟಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಶೈನ್ ಶೆಟ್ಟಿ ಪೂರ್ಣ ಪ್ರಮಾಣದ ನಾಯಕನಾಗಿ ಬೆಳ್ಳಿತೆರೆ ಪ್ರವೇಶಿಸಬೇಕಿತ್ತು. ಆದರೆ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಸಿನಿಮಾ ಪಾತ್ರಗಳ ವಿವರಣೆ ನೀಡಲು ವಾಯ್ಸ್ ಓವರ್ ನೀಡಿದ್ದಾರೆ.
ಲಾಕ್ಡೌನ್ಗೂ ಮೊದಲು ಚಿತ್ರತಂಡ ಮಂಗಳೂರು ಸುತ್ತಮುತ್ತ ಶೂಟಿಂಗ್ ನಡೆಸಿದೆ. ಶೀಘ್ರವೇ ಹಾಡೊಂದನ್ನು ರಿಲೀಸ್ ಮಾಡಲು ಚಿಂತಿಸಿದೆ. ಸಿನಿಮಾ ಪೋಸ್ಟ್-ಪ್ರೊಡಕ್ಷನ್ ಪ್ರಕ್ರಿಯೆಯಲ್ಲಿದ್ದು, ಪ್ರಸ್ತುತ ಡಿಟಿಎಸ್ ಮತ್ತು ಡಿಐ ನಡೆಯುತ್ತಿದೆ. ಮೇಡ್ ಅಂಡರ್ ಆರ್ಹಾ ಕ್ರಿಯೇಷನ್ಸ್ ಅಡಿಯಲ್ಲಿ ಸಿನಿಮಾ ತಯಾರಾಗುತ್ತಿದೆ. ಚಿತ್ರದಲ್ಲಿ ಪ್ರಶಾಂತ್ ಪಾಟೀಲ್ ಕ್ಯಾಮರಾ ಕೆಲಸ ನಿರ್ವಹಿಸುತ್ತಿದ್ದಾರೆ. ವಿಜಯ್ ಕೃಷ್ಣ ಸಂಗೀತ ನೀಡಿದ್ದಾರೆ. ನಟ ಶೋಭರಾಜ್ ಪವೂರ್, ಮಧು ಹೆಗ್ಡೆ, ಸುನಿಲ್ ಸಾಗರ್ ಮತ್ತು ವಿನೀತ್ ಇದ್ದಾರೆ.