ETV Bharat / sitara

'ಶುಗರ್ ಫ್ಯಾಕ್ಟರಿ' ಚಿತ್ರಕ್ಕೆ ಬಂದ್ರು ಶಿಲ್ಪಾ ಶೆಟ್ಟಿ...ಆದರೆ ಇವರು ಬಾಲಿವುಡ್​ ಶಿಲ್ಪಾ ಶೆಟ್ಟಿ ಅಲ್ಲ - Shilpa shetty selected to Sugar factory

ಬಾಲಮಣಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಗಿರೀಶ್ ನಿರ್ಮಾಣದಲ್ಲಿ ದೀಪಕ್ ಅರಸ್ ನಿರ್ದೇಶಿಸುತ್ತಿರುವ 'ಶುಗರ್ ಫ್ಯಾಕ್ಟರಿ' ಚಿತ್ರಕ್ಕೆ ಮೂರನೇ ನಾಯಕಿಯಾಗಿ ಶಿಲ್ಪಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಶಿಲ್ಪಾ ಶೆಟ್ಟಿ ಇದಕ್ಕೂ ಮುನ್ನ ನ್ಯೂರಾನ್ ಹಾಗೂ ರಾಮಾಚಾರಿ ಚಿತ್ರದಲ್ಲಿ ನಟಿಸುವ ಮೂಲಕ ಗುರುತಿಸಿಕೊಂಡಿದ್ದಾರೆ.

Shilpa shetty
ಶಿಲ್ಪಾ ಶೆಟ್ಟಿ
author img

By

Published : Dec 24, 2020, 9:07 AM IST

ಡಾರ್ಲಿಂಗ್ ಕೃಷ್ಣ 'ಶುಗರ್ ಫ್ಯಾಕ್ಟರಿ' ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಕಳೆದ ಎರಡು ತಿಂಗಳಿಂದ ಕೇಳಿ ಬರುತ್ತಲೇ ಇದೆ. ಈಗಾಗಲೇ ಈ ಚಿತ್ರಕ್ಕೆ ಇಬ್ಬರು ನಾಯಕಿಯರು ಆಯ್ಕೆಯಾಗಿದ್ದರು. ಈಗ ಶಿಲ್ಪಾ ಶೆಟ್ಟಿ ಎಂಬ ಮೂರನೇ ನಾಯಕಿ ಈ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. 2021 ಜನವರಿಯಿಂದ ಈ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.

Shilpa shetty
ಶಿಲ್ಪಾ ಶೆಟ್ಟಿ

ಈ ಚಿತ್ರಕ್ಕೆ ಈಗಾಗಲೇ ಸೋನಾಲ್ ಮಾಂತೇರೋ ಮತ್ತು ಅದ್ವಿತಿ ಶೆಟ್ಟಿ ನಾಯಕಿಯರಾಗಿ ಆಯ್ಕೆಯಾದ ಸುದ್ದಿ ಬಂದಿತ್ತು. ಈಗ ಶಿಲ್ಪಾ ಶೆಟ್ಟಿ ಬಂದಿರುವುದರಿಂದ ಈ ಸಿನಿಮಾ ಕಥೆ ಏನಿರಬಹುದು ಎಂಬ ಕುತೂಹಲ ಮೂಡಿದೆ. ಶಿಲ್ಪಾ ಶೆಟ್ಟಿ ಎಂದರೆ ಎಲ್ಲರೂ ಬಾಲಿವುಡ್​​​ ಶಿಲ್ಪಾ ಶೆಟ್ಟಿ ಎಂದು ತಪ್ಪು ತಿಳಿಯುತ್ತಾರೆ. ಆದರೆ ಇದು ಆ ಶಿಲ್ಪಾ ಶೆಟ್ಟಿ ಅಲ್ಲ, ಶಿಲ್ಪಾ ಶೆಟ್ಟಿ ಇದಕ್ಕೂ ಮುನ್ನ 'ನ್ಯೂರಾನ್' ಚಿತ್ರದಲ್ಲಿ ನಟಿಸಿದ್ದರು. 'ರಾಮಾಚಾರಿ' ಚಿತ್ರದಲ್ಲಿ ಕೂಡಾ ನಟಿಸುತ್ತಿದ್ದಾರೆ. ಈಗ ಅವರು ಡಾರ್ಲಿಂಗ್ ಕೃಷ್ಣನಿಗೆ ನಾಯಕಿಯಾಗಿ 'ಶುಗರ್ ಫ್ಯಾಕ್ಟರಿ' ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಇದನ್ನೂ ಓದಿ:ಕಿರುತೆರೆ ಸಮಾಚಾರ: ಶೈನ್​​ ಶೆಟ್ಟಿ ಬಗ್ಗೆ ದೀಪಿಕಾ ದಾಸ್ ಹೇಳಿದ್ದೇನು?​​​

'ಶುಗರ್ ಫ್ಯಾಕ್ಟರಿ' ಒಂದು ರೊಮ್ಯಾಂಟಿಕ್ ಕಥಾಹಂದರ ಇರುವ ಚಿತ್ರ. ಈ ಚಿತ್ರದ ಮೂಲಕ ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿರ್ದೇಶನಕ್ಕೆ ಮರಳಿದ್ದಾರೆ ​​​​​​​​​​​​. ದೀಪಕ್ ಈ ಹಿಂದೆ 'ಮನಸಾಲಜಿ' ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಈಗ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರೊಂದಿಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಇನ್ನು ಬಹದ್ದೂರ್ ಚೇತನ್ ಈ ಚಿತ್ರಕ್ಕೆ ಸಂಭಾಷಣೆ ರಚಿಸುತ್ತಿದ್ದಾರೆ. ಬಾಲಮಣಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ಗಿರೀಶ್ ಎಂಬುವವರು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ಕಬೀರ್ ರಫಿ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ. ಜನವರಿ 28ರಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಬೆಂಗಳೂರು, ಮೈಸೂರು, ಗೋವಾ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.