ETV Bharat / sitara

ಹೆಣ್ಣು ಮಗುವಿಗೆ ತಾಯಿಯಾದ್ರು ಶಿಲ್ಪಾ ಶೆಟ್ಟಿ: ಇಲ್ಲಿದೆ ನೋಡಿ ಮಗುವಿನ ಹೆಸರು! - ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ ಮತ್ತೆ ತಾಯಿಯಾಗಿದ್ದಾರೆ. ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಂ​ ಖಾತೆಯಲ್ಲಿ ಮಾಹಿತಿ ಶೇರ್​ ಮಾಡಿರುವ ಕರಾವಳಿ ಚೆಲುವೆ, ನಮ್ಮ ಕುಂದ್ರ ಕುಟುಂಬಕ್ಕೆ ಮತ್ತೊಬ್ಬ ಅತಿಥಿ ಎಂಟ್ರಿಯಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.

Shilpa Shetty  Meet Their Baby Daughter Samisha
ಹೆಣ್ಣು ಮಗುಗೆ ತಾಯಿಯಾದ್ರು ಶಿಲ್ಪಾ ಶೆಟ್ಟಿ
author img

By

Published : Feb 21, 2020, 8:16 PM IST

ಶಿಲ್ಪಾ ಶೆಟ್ಟಿ ಶಿವರಾತ್ರಿ ಹಬ್ಬದಂದು ತಮ್ಮ ಅಭಿಮಾನಿ ಬಳಗಕ್ಕೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಶಿಲ್ಪಾ ಶೆಟ್ಟಿ ಮತ್ತೆ ತಾಯಿಯಾಗಿದ್ದಾರೆ. ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಂ​ ಖಾತೆಯಲ್ಲಿ ಮಾಹಿತಿ ಶೇರ್​ ಮಾಡಿರುವ ಕರಾವಳಿ ಚೆಲುವೆ, ನಮ್ಮ ಕುಂದ್ರ ಕುಟುಂಬಕ್ಕೆ ಮತ್ತೊಬ್ಬ ಅತಿಥಿ ಎಂಟ್ರಿಯಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಮಗು ತನ್ನ ತಾಯಿಯ ಬೆರಳು ಹಿಡಿದುಕೊಂಡಿರುವ ಫೋಟೋ ಹಾಕಿರುವ ಶಿಲ್ಪಾ ಶೆಟ್ಟಿ, ದೇವರಿಗೆ ನಾವು ಮಾಡಿದ ಪ್ರಾರ್ಥನೆ ಫಲಿಸಿದೆ. ನಮ್ಮ ಮನೆಗೆ ಯುವ ರಾಣಿ ಬಂದಿದ್ದಾಳೆ. ಈ ವಿಷಯವನ್ನು ಹೇಳಲು ನಮಗೆ ಥ್ರಿಲ್​ ಆಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇನ್ನು ಆ ಹೆಣ್ಣು ಮಗುವಿನ ಬಗ್ಗೆಯೂ ಶಿಲ್ಪಾ ಶೆಟ್ಟಿ ಬರೆದುಕೊಂಡಿದ್ದಾರೆ. ಸಮಿಶಾ ಶೆಟ್ಟಿ ಕುಂದ್ರ, ಈ ಮಗು ಫೆಬ್ರವರಿ 15ರಂದು ಜನಿಸಿದೆ. ಈ ಮಗುವಿನ ಹೆಸರಿನ ಅರ್ಥ 'ಸ' ಅಂದ್ರೆ ಸಂಸ್ಕೃತದಲ್ಲಿ ಹೊಂದಿರುವುದು ಎಂದರ್ಥ. 'ಮಿಶಾ' ಅಂದ್ರೆ ರಷ್ಯಾ ಭಾಷೆಯಲ್ಲಿ ದೇವರನ್ನು ಇಷ್ಟ ಪಡುವುದು ಎಂಬ ಅರ್ಥ ಕೊಡುತ್ತದೆ ಎಂದು ಹೇಳಿದ್ದಾರೆ. ಹಾಗೆಯೇ ತಮ್ಮ ಬರಹವನ್ನು ಮುಂದುವರೆಸಿರುವ ಶಿಲ್ಪಾ ಶೆಟ್ಟಿ, ನಮ್ಮ ಮನೆಗೆ ಜೂನಿಯರ್​​​​ ಎಸ್​​ಎಸ್​ಕೆ(ಶಿಲ್ಪಾ ಶೆಟ್ಟಿ ಕುಂದ್ರ) ಬಂದ್ರು ಎಂದು ಬರೆದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.