ETV Bharat / sitara

ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್ ಜಾಲ; ನಂಗೇನೂ ಗೊತ್ತಿಲ್ಲ ಅಂದ್ರು ಶರ್ಮಿಳಾ ಮಾಂಡ್ರೆ - ಸ್ಯಾಂಡಲ್​ವುಡ್​ನಲ್ಲಿ ಡ್ರಗ್ಸ್ ಜಾಲ

ಈಗಾಗಲೇ ಕೆಲ ನಟರು ಹಾಗೂ ನಿರ್ದೇಶಕರು ಈ ಡ್ರಗ್ಸ್ ಮಾಫಿಯಾ ನಮಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಸದ್ಯ ನಟಿ ಶರ್ಮಿಳಾ ಮಾಂಡ್ರೆ ಡ್ರಗ್ಸ್ ಹಾಗೂ ಗಾಂಜಾ ಜಾಲದ ಬಗ್ಗೆ ಪರೋಕ್ಷವಾಗಿ ಹೇಳಿಕೆ ಕೊಟ್ಟಿದ್ದಾರೆ‌.

Sharmila Mandre
ಶರ್ಮಿಳಾ ಮಾಂಡ್ರೆ
author img

By

Published : Aug 29, 2020, 7:21 PM IST

ಡ್ರಗ್ಸ್ ಹಾಗೂ ಗಾಂಜಾ ಮಾಫಿಯಾ ಈಗ ಸ್ಯಾಂಡಲ್​ವುಡ್​ನಲ್ಲಿ ಹೆಚ್ಚು ಸೌಂಡ್ ಮಾಡುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಕೆಲ ನಟ, ನಟಿಯರು ಹಾಗೂ ಸಂಗೀತ ನಿರ್ದೇಶಕರು ಈ ಡ್ರಗ್ಸ್, ಗಾಂಜಾ ಮತ್ತಿನಲ್ಲಿ ತೇಲುತ್ತಿದ್ದಾರೆ ಎಂಬ ಆಶ್ಚರ್ಯಕರ ಮಾಹಿತಿಯನ್ನು ಎನ್​ಸಿಬಿ ಹೊರ ಹಾಕಿದೆ.

ಈಗಾಗಲೇ ಕೆಲ ನಟರು ಹಾಗು ನಿರ್ದೇಶಕರು ಈ ಡ್ರಗ್ಸ್ ಮಾಫಿಯಾ ನಮಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಸದ್ಯ ನಟಿ ಶರ್ಮಿಳಾ ಮಾಂಡ್ರೆ ಡ್ರಗ್ಸ್ ಹಾಗೂ ಗಾಂಜಾ ಜಾಲದ ಬಗ್ಗೆ ಪರೋಕ್ಷವಾಗಿ ಹೇಳಿಕೆ ಕೊಟ್ಟಿದ್ದಾರೆ‌. ಸದ್ಯ ಸ್ಯಾಂಡಲ್​ವುಡ್ ನಲ್ಲಿ ಹೆಚ್ಚು ಕೇಳಿ ಬರುತ್ತಿರುವ ವಿಷ್ಯದ ಬಗ್ಗೆ ನನಗೇನೂ ಗೊತ್ತಿಲ್ಲ, ಜೊತೆಗೆ ನನಗೆ ಯಾವತ್ತೂ ಈ ರೀತಿ ಅನುಭವ ಆಗಿಲ್ಲ. ನಾನು ಸಿನಿಮಾ ಹಿನ್ನೆಲೆ ಕುಟುಂಬದಿಂದ ಬಂದವಳು, ನಮ್ಮ ತಾತ , ನಮ್ಮ ತಂದೆ ಚಿತ್ರರಂಗದಲ್ಲಿ ಪ್ರಖ್ಯಾತ ಸಿನಿಮಾ ವಿತರಕರು ಎಂದು ಶರ್ಮಿಳಾ ಮಾಂಡ್ರೆ ಪರೋಕ್ಷವಾಗಿ ಹೇಳಿದ್ದಾರೆ.

ಈಗ ಶರ್ಮಿಳಾ ಮಾಂಡ್ರೆ ಈ ಹೇಳಿಕೆ ಕೊಡೋದಿಕ್ಕೆ ಕಾರಣ, ಲಾಕ್​ಡೌನ್ ಸಂದರ್ಭದಲ್ಲಿ ಶರ್ಮಿಳಾ ಸ್ನೇಹಿತರು ಜೊತೆಗೂಡಿ ಭರ್ಜರಿ ಪಾರ್ಟಿ ಮಾಡಿ, ಕಾರು ಅಪಘಾತವಾಗಿ ಈ ಬೆಂಗಳೂರು ಚೆಲುವೆ ಹೆಚ್ಚು ಸುದ್ದಿಯಾಗಿದ್ದಳು. ಹೀಗಾಗಿ ಡ್ರಗ್ಸ್ ಜಾಲದಲ್ಲಿ ಶರ್ಮಿಳಾ ಹೆಸರು ಕೇಳಿ ಬಂದಿತ್ತು. ಈ ಕಾರಣಕ್ಕೆ ಶರ್ಮಿಳಾ ಈ ಘಟನೆ ಬಗ್ಗೆ ತಮ್ಮ ರಿಯಾಕ್ಷನ್ ಕೊಟ್ಟಿದ್ದಾರೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.