ಶಾನ್ವಿ ಶ್ರೀವಾತ್ಸವ್, ವಿಭಿನ್ನ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಪಟ್ಟ ಅಲಂಕರಿಸಿದ ಸುಂದರಿ. ಶಾನ್ವಿ ಮೂಲತಃ ವಾರಣಾಸಿಯವರು. ಆಕೆ ಕನ್ನಡ ಚಿತ್ರರಂಗಕ್ಕೆ ಬಂದಾಗ ಕನ್ನಡ ಮಾತನಾಡಲು ಬರುತ್ತಿರಲಿಲ್ಲ. ಆದರೆ ಇದೀಗ ಕನ್ನಡ ಕಲಿಯುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ.
- " class="align-text-top noRightClick twitterSection" data="">
ಹೌದು, ವಾರಣಾಸಿಯಿಂದ ಕರ್ನಾಟಕಕ್ಕೆ ಬಂದ ನಟಿ ಈಗ ಕನ್ನಡ ಕಲಿತಿದ್ದಾರೆ. ಎಲ್ಲರ ಜೊತೆಗೆ ಕನ್ನಡದಲ್ಲಿ ಮಾತನಾಡಿ, ತಮ್ಮ ಸಿನಿಮಾಗೆ ತಾವೇ ಡಬ್ ಮಾಡಿದ್ದಾರೆ. ಶಾನ್ವಿ ಕನ್ನಡದಲ್ಲಿ ತಮ್ಮ ಕರಿಯರ್ ಆರಂಭಿಸಿದ್ದು 'ಚಂದ್ರಲೇಖ' ಚಿತ್ರದ ಮೂಲಕ. ಆ ವೇಳೆ ಅವರಿಗೆ ಶೂಟಿಂಗ್ ಸೆಟ್ನಲ್ಲಿ ಕನ್ನಡ ಅರ್ಥ ಆಗುತ್ತಿರಲಿಲ್ಲ. ಆದರೆ, ಈಗ ಕನ್ನಡ ಕಲಿತು, ಕನ್ನಡ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಕನ್ನಡ ರಾಜ್ಯೋತ್ಸವದಂದು ಕನ್ನಡಿಗರಿಗೆ ಶಾನ್ವಿ ಪತ್ರ ಬರೆದಿದ್ದಾರೆ. ಮೊದ ಮೊದಲು ಶಾನ್ವಿಗೆ ಭಾಷೆ ತಿಳಿಯದ ಕಾರಣಕ್ಕೆ ಶೂಟಿಂಗ್ ಸೆಟ್ ನಲ್ಲಿ ತುಂಬಾ ಭಯ ಆಗುತ್ತಿತ್ತಂತೆ. 'ಚಂದ್ರಲೇಖ' ಸಿನಿಮಾದಲ್ಲಿ ಶಾನ್ವಿ ದೆವ್ವದ ಪಾತ್ರ ಮಾಡಿದ್ದರಿಂದ ಮುಂದೆ ಶಾನ್ವಿ ಶ್ರೀವಾತ್ಸವ್ ಅವರಿಗೆ ಸ್ವೀಟ್ ಗೋಸ್ಟ್ ಹೀರೋಯಿನ್ ಎಂಬ ಹೆಸರಿಂದಲೇ ಜನರು ಕರೆಯಲಾರಂಭಿಸಿದರು.
'ಮಾಸ್ಟರ್ ಪೀಸ್' ಸಿನಿಮಾದ ನಂತರ ಶಾನ್ವಿಯನ್ನು ಎಲ್ಲರೂ ನಾಗವಲ್ಲಿ ಎಂದು ಕರೆಯುತ್ತಿದ್ದರಂತೆ. ಈ 'ಮಾಸ್ಟರ್ ಪೀಸ್' ಚಿತ್ರದ ನಂತರ ಶಾನ್ವಿ ಅದೃಷ್ಟ ಖುಲಾಯಿಸಿತು. 'ತಾರಕ್' ಸಿನಿಮಾದಲ್ಲಿ ದರ್ಶನ್ ಜೊತೆಗೆ ನಟಿಸುವ ಅವಕಾಶ ಪಡೆದರು. 'ಮಫ್ತಿ', 'ಸಾಹೇಬ', ಗಣೇಶ್ ಜೊತೆಗೆ 'ಸುಂದರಾಂಗ ಜಾಣ' ಹಾಗೂ 'ಗೀತಾ' ಸಿನಿಮಾದಲ್ಲಿ ಎರಡು ಶೇಡ್ನಲ್ಲಿ ಶಾನ್ವಿ ಮಿಂಚಿದ್ದಾರೆ. ಸದ್ಯಕ್ಕೆ ರಕ್ಷಿತ್ ಶೆಟ್ಟಿ ಜೊತೆಗೆ 'ಅವನೇ ಶ್ರೀಮನ್ನಾರಾಯಣ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗಾಗಿ 55 ದಿನಗಳ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, 15 ದಿನಗಳ ಕಾಲ ಡಬ್ಬಿಂಗ್ ಮಾಡಿದ್ದಾರೆ. 'ಈ ಬಾರಿ ಲಕ್ಷ್ಮಿ ಪಾತ್ರದಲ್ಲಿ ಜನರ ಮುಂದೆ ಬರುತ್ತಿದ್ದು, ಕನ್ನಡಿಗರ ಪ್ರೀತಿಯ ನಿರೀಕ್ಷೆಯಲ್ಲಿ ಇದ್ದೇನೆ ಎಂದು ಶಾನ್ವಿ ಶ್ರೀವಾತ್ಸವ್ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ವಿಶೇಷವಾಗಿ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಹೇಳುವ ಮೂಲಕ ಕನ್ನಡಿಗರ ಹೃದಯ ಕದ್ದಿದ್ದಾರೆ.