ಕನ್ನಡದ ಹಲವಾರು ಟಾಪ್ ಸಿನಿಮಾಗಳಲ್ಲಿ ಅಭಿನಯಿಸಿರುವ ವಾರಣಾಸಿ ಬೆಡಗಿ ಶಾನ್ವಿ ಶ್ರೀವಾತ್ಸವ್ ಕೊರೊನಾ ವೈರಸ್ ಹರಡುತ್ತಿರುವ ಸಂದರ್ಭದಲ್ಲಿ ಜನರಿಗೆ ನೆರವಾಗಲು ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡಿದ್ದಾರೆ.

ಹೌದು, ಶಾನ್ವಿ ಶ್ರೀವಾತ್ಸವ್ ತಮ್ಮ ಫೇಸ್ ಬುಕ್ ಬರಹದಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ನಿವಾಸಿಗಳ ಆರೋಗ್ಯ ಕುರಿತು ಕಾಳಜಿ ವಹಿಸಿ ಹಣ ಸಂಗ್ರಹಣೆ ಮಾಡುವೆಡೆಗೆ ಆಸಕ್ತಿ ತೋರಿದ್ದಾರೆ.
ಸದ್ಯ ಲಾಕ್ಡೌನ್ ಹಿನ್ನೆಲೆ ಮುಂಬೈನಲ್ಲಿ ಲಾಕ್ ಆಗಿರುವ ಶಾನ್ವಿ, ಕೋವಿಡ್ 19 ನಿಂದ ಬಳಲುತ್ತಿರುವ ಗ್ರಾಮೀಣ ಪ್ರದೇಶದ ಜನರ ಆರೋಗ್ಯ ರಕ್ಷಣೆಗೆ ತಾವೂ ಹಣ ಹೂಡಿ ಇತರರನ್ನೂ ಈ ಕೆಲಸಕ್ಕೆ ಉತ್ತೇಜಿಸಿ ಎಂದು ವಿನಂತಿಸಿಕೊಂಡಿದ್ದಾರೆ.
ಈಗಾಗಲೇ, ನಟಿ ಶಾನ್ವಿ ಶ್ರೀವಾತ್ಸವ್ 'ರೂರಲ್ ಹೆಲ್ತ್ ಕೇರ್ ಫೌಂಡೇಶನ್' ಜೊತೆ ಸೇರಿಕೊಂಡು ಹಣ ಸಂಗ್ರಹಣೆಗೆ ನೆರವಾಗಿ ಕ್ಯಾನ್ಸರ್ ಪೀಡಿತರಿಗೆ ಸ್ಪಂದಿಸುತ್ತಿದ್ದಾರೆ.