ETV Bharat / sitara

ಎರಡನೇ ಹಂತದ ಶೂಟಿಂಗ್​ ಮುಗಿಸಿದ 'ಶಂಭೋ ಶಿವ ಶಂಕರ' - ಪುನೀತ್, ರೋಹಿತ್, ರಕ್ಷಕ್

ಅಭಯ್ ಪುನೀತ್, ರೋಹಿತ್ ಮತ್ತು ರಕ್ಷಕ್ ನಾಯಕರಾಗಿ ನಟಿಸುತ್ತಿರೋ ಶಂಭೋ ಶಿವ ಶಂಕರ ಚಿತ್ರ ಸದ್ಯ ಎರಡನೇ ಹಂತದ ಶೂಟಿಂಗ್​ ಅನ್ನು ಮುಕ್ತಾಯ ಮಾಡಿದೆ.

ಎರಡನೇ ಹಂತದ ಶೂಟಿಂಗ್​ ಮುಗಿಸಿದ 'ಶಂಭೋ ಶಿವ ಶಂಕರ'

author img

By

Published : Jan 16, 2021, 7:28 PM IST

ಸ್ಯಾಂಡಲ್​​​ವುಡ್​​ನಲ್ಲಿ ಟೈಟಲ್​​​ನಿಂದ ಗಮನ ಸೆಳೆಯುತ್ತಿರೋ ಚಿತ್ರ ಶಂಭೋ ಶಿವ ಶಂಕರ. ಅಭಯ್ ಪುನೀತ್, ರೋಹಿತ್ ಮತ್ತು ರಕ್ಷಕ್ ನಾಯಕರಾಗಿ ನಟಿಸುತ್ತಿರೋ ಈ ಚಿತ್ರ ಸದ್ಯ ಎರಡನೇ ಕಂತಿನ ಶೂಟಿಂಗ್​ ಅನ್ನು ಮುಕ್ತಾಯ ಮಾಡಿದೆ.

ಈ ಚಿತ್ರದಲ್ಲಿ ಸುಪ್ರೀಂ ಹೀರೋ ಶಶಿಕುಮಾರ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಸಿನಿಮಾದ ಪ್ರಮುಖ ಪಾತ್ರದಲ್ಲಿ ಅಭಯ್ ಪುನೀತ್, ರೋಹಿತ್, ರಕ್ಷಕ್​, ಸೊನಾಲ್ ಮಾಂಟೆರೊ, ಜೋಗಿ ನಾಗರಾಜ್, ಪ್ರದೀಪ್ ತಿಪಟೂರು, ಆಶಾ ಸುಜಯ್, ಪ್ರೇಮ, ರೋಹಿಣಿ, ಸಂಗಮೇಶ್ ಬಣ್ಣ ಹಚ್ಚುತ್ತಿದ್ದಾರೆ.

ಎರಡನೇ ಹಂತದ ಶೂಟಿಂಗ್​ ಮುಗಿಸಿದ 'ಶಂಭೋ ಶಿವ ಶಂಕರ'

ಬೆಂಗಳೂರಿನಲ್ಲೇ 26 ದಿನಗಳ ಕಾಲ‌ ಚಿತ್ರೀಕರಣ ಮಾಡಲಾಗಿದೆ. ಕಿರುತೆರೆಯಲ್ಲಿ ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶಿಸಿರುವ ಶಂಕರ್ ಕೋನಮಾನಹಳ್ಳಿ ಶಂಭೋ ಶಿವ ಶಂಕರ ಚಿತ್ರದ‌ ನಿರ್ದೇಶನ ಮಾಡುತ್ತಿದ್ದಾರೆ. ಶಂಕರ್​​​ಗೆ ಇದು ಮೊದಲ ಸಿನಿಮಾ. ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕರೇ ಬರೆದಿದ್ದಾರೆ.

ಗೌಸ್ ಫೀರ್ ಹಾಗೂ ಹಿತನ್ ಹಾಸನ್ ಹಾಡುಗಳನ್ನು ಬರೆದಿದ್ದು, ಹಿತನ್ ಹಾಸನ್ ಅವರೇ ಸಂಗೀತ ನೀಡುತ್ತಿದ್ದಾರೆ‌. ನಟರಾಜ್ ಮುದ್ದಾಲ ಛಾಯಾಗ್ರಹಣ, ಕಲೈ ನೃತ್ಯ ನಿರ್ದೇಶನ ಹಾಗೂ ವೆಂಕಟೇಶ್ ಯುಡಿವಿ ಸಂಕಲನ ಈ ಚಿತ್ರಕ್ಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.