ವಾರಾಂತ್ಯದಲ್ಲಿ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮದ ನಿರೂಪಕಿ ಶಾಲಿನಿ ಮರಳಿ ಚಿಣ್ಣರ ಚಿಲಿಪಿಲಿಗೆ ಬರಲಿದ್ದಾರೆ. ಇತ್ತೀಚೆಗಷ್ಟೇ ಚಿಣ್ಣರ ಚಿಲಿಪಿಲಿ ಸೀಸನ್ 2 ಆರಂಭವಾಗಿದ್ದು, ನಿರೂಪಕರಾಗಿ ಉಮಾಶ್ರೀ ಕಾಣಿಸಿಕೊಂಡಿದ್ದರು. ಕಾರಣಾಂತರಗಳಿಂದ ನಿರೂಪಕರು ಬದಲಾಗಿದ್ದು ಉಮಾಶ್ರೀ ಜಾಗಕ್ಕೆ ಶಾಲಿನಿ ಬಂದಿದ್ದಾರೆ.
ಚಿಣ್ಣರ ಚಿಲಿಪಿಲಿ ಸೀಸನ್ 1 ರನ್ನು ಬಹಳ ಉತ್ತಮವಾಗಿ ನಡೆಸಿಕೊಡುತ್ತಿದ್ದ ಶಾಲಿನಿ ಇದೀಗ ಮತ್ತೊಮ್ಮೆ ಸೀಸನ್ 2ರ ನಿರೂಪಣೆ ಮಾಡುತ್ತಿದ್ದಾರೆ. ಆ ಮೂಲಕ ಮತ್ತೆ ಪುಟಾಣಿಗಳ ಜೊತೆಗೆ ವೀಕ್ಷಕರನ್ನು ಮನರಂಜಿಸಲು ಶಾಲಿನಿ ಸಜ್ಜಾಗಿದ್ದಾರೆ.
ಪಾಪಾ ಪಾಂಡು ಸೀಸನ್ 2ರಲ್ಲಿ ಪಾಚು ಆಗಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿರುವ ಶಾಲಿನಿ ಇತ್ತೀಚೆಗಷ್ಟೇ ತಮ್ಮದೇ ಆದ ಯೂಟ್ಯೂಬ್ ಚಾನೆಲ್ 'ಶಾಲಿವುಡ್' ಆರಂಭಿಸಿದ್ದಾರೆ.