ETV Bharat / sitara

ಮುಂಬೈ ಆರ್ಥರ್‌ ರೋಡ್‌ ಜೈಲಿಗೆ ಬಂದು ಮಗನ ಭೇಟಿ ಮಾಡಿದ ಶಾರೂಖ್ ಖಾನ್ - Arthar Road Jail

ನಿನ್ನೆ ಮುಂಬೈನ ವಿಶೇಷ ಎನ್​ಡಿಪಿಎಸ್ ನ್ಯಾಯಾಲಯ ಆರ್ಯನ್ ಖಾನ್​ಗೆ ಜಾಮೀನು ನಿರಾಕರಿಸಿ ಮಹತ್ವದ ಆದೇಶ ಹೊರಡಿಸಿತ್ತು.

Shahrukh
ಶಾರೂಕ್ ಖಾನ್​
author img

By

Published : Oct 21, 2021, 10:27 AM IST

Updated : Oct 21, 2021, 11:01 AM IST

ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿ ಪ್ರಸ್ತುತ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿರುವ ಪುತ್ರ ಆರ್ಯನ್ ಖಾನ್​ನನ್ನು ನೋಡಲು ಬಾಲಿವುಡ್ ನಟ ಶಾರೂಕ್ ಜೈಲಿಗೆ ಆಗಮಿಸಿದರು.

ಅಕ್ಟೋಬರ್ 3 ರಂದು ಮುಂಬೈನ ರೇವ್ ಪಾರ್ಟಿ ಮಾಡುತ್ತಿದ್ದ ವೇಳೆ ಎನ್​ಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರ್ಯನ್ ಖಾನ್ ಸೇರಿದಂತೆ ಆತನ ಸ್ನೇಹಿತರಾದ ಅರ್ಬಾಜ್ ಮರ್ಚೆಂಟ್, ಮುನ್​ಮುನ್​​ ಧಮೇಚ, ನೂಪುರ್ ಸಾರಿಕಾ, ಇಸ್ಮಿತ್ ಸಿಂಗ್, ಮೋಹಕ್ ಜೈಸ್ವಾಲ್, ವಿಕ್ರಾಂತ್ ಚೋಕರ್ ಹಾಗು ಗೋಮಿತ್ ಚೋಪ್ರಾ ಸೇರಿ ಹಲವರನ್ನು ಬಂಧಿಸಿದ್ದರು.

ಆರ್ಥರ್ ರೋಡ್ ಜೈಲಿಗೆ ಭೇಟಿ ನೀಡಿದ ಶಾರೂಕ್​ ಖಾನ್​

ನಂತರ, ಆರ್ಯನ್ ಖಾನ್​ಗೆ ಜಾಮೀನು ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಆದರೆ ನಿನ್ನೆ ಈ ಕುರಿತು ಮುಂಬೈನ ವಿಶೇಷ ಎನ್​ಡಿಪಿಎಸ್ ನ್ಯಾಯಾಲಯದಿಂದ ಮಹತ್ವದ ಆದೇಶ ಹೊರಬಿದ್ದಿದ್ದು, ಬೇಲ್​ ಅರ್ಜಿ ವಜಾಗೊಂಡಿದೆ. ಇದೀಗ ಆರ್ಯನ್ ಪರ ವಕೀಲರು ಜಾಮೀನು ಕೋರಿ ಬಾಂಬೆ ಹೈಕೋರ್ಟ್​​ ಮೊರೆ ಹೋಗಿದ್ದಾರೆ.

ಈ ಬೆನ್ನಲ್ಲೇ ಇಂದು ಬೆಳಗ್ಗೆ ಶಾರೂಕ್ ಖಾನ್​ ಜೈಲಿಗೆ ಭೇಟಿ ನೀಡಿ, ಮಗನನ್ನು ಭೇಟಿ ಮಾಡಿದರು.

Last Updated : Oct 21, 2021, 11:01 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.