ಟೈಸನ್ ಚಿತ್ರದ ನಂತ್ರ ಸ್ಯಾಂಡಲ್ವುಡ್ನಲ್ಲಿ ಫ್ಯಾನ್ಸ್ ಫಾಲೋವರ್ಸ್ ಹೆಚ್ಚಿಸಿಕೊಂಡಿರುವ ಮರಿ ಟೈಗರ್ ವಿನೋದ್ ಪ್ರಭಾಕರ್ ಸದ್ಯ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
ಸದ್ಯ ವಿನೋದ್ ಪ್ರಭಾಕರ್ ಶ್ಯಾಡೋ ಸಿನಿಮಾದಲ್ಲಿ ನಟಿಸುತ್ತಿದ್ದು, ಚಿತ್ರದ ಆಡಿಯೋ ಬಿಡುಗಡೆಯಾಗಿದೆ. ರಗಡ್ ಚಿತ್ರದ ನಂತ್ರ ಶ್ಯಾಡೋ ಚಿತ್ರ ಸದ್ಯ ರಿಲೀಸ್ಗೆ ರೆಡಿಯಾಗಿದೆ. ಈ ಸಿನಿಮಾಕ್ಕೆ ಟಾಲಿವುಡ್ ಕಮರ್ಷಿಯಲ್ ಡೈರೆಕ್ಟರ್ ಪೂರಿ ಜಗನ್ನಾಥ್ ಗರಡಿಯಲ್ಲಿ ಪಳಗಿರುವ ರವಿಗೌಡ ಆ್ಯಕ್ಷನ್ ಕಟ್ ಹೇಳಿದ್ದು, ಚಕ್ರವರ್ತಿ ನಿರ್ಮಾಣ ಮಾಡಿದ್ದಾರೆ.
ಅಪ್ಪನ ರೀತಿಯಲ್ಲೇ ಕಟ್ಟುಮಸ್ತಾದ ದೇಹ ಕಾಪಾಡಿಕೊಂಡಿರುವ ವಿನೋದ್, ಶ್ಯಾಡೋ ಚಿತ್ರಕ್ಕಾಗಿ ಸಖತ್ ಎಫರ್ಟ್ ಹಾಕಿದ್ದಾರಂತೆ. ಶ್ಯಾಡೋ ಚಿತ್ರ ಪಕ್ಕಾ ಕಮರ್ಷಿಯಲ್ ಸಿನಿಮಾವಾಗಿದ್ದು, ಢಿಫರೆಂಟ್ ಕಥಾವಸ್ತು ಜೊತೆ ನಿರ್ದೇಶಕರು ಟಾಲಿವುಡ್ನಿಂದ ಸ್ಯಾಂಡಲ್ವುಡ್ಗೆ ಬಂದದ್ದಾರೆ. ಇನ್ನು ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಅಚ್ಚು ಸಂಗೀತ ನೀಡಿದ್ದಾರೆ.
ಶ್ಯಾಡೋ ಸಿನಿಮಾದಲ್ಲಿ ವಿನೋದ್ ಜೊತೆ ಬಾಂಬೆ ಬೆಡಗಿ ಶೋಭಿತ ರಾಣ ನಟಿಸಿದ್ದಾರೆ. ಚಿತ್ರದಲ್ಲಿ ಖಳನಟ ಶರತ್ ಲೋಹಿತಾಶ್ಚ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿದ್ದಾರೆ. ಏಪ್ರಿಲ್ನಲ್ಲಿ ರಾಬರ್ಟ್ ಚಿತ್ರ ರಿಲೀಸ್ ಆದ ನಂತ್ರ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.