ETV Bharat / sitara

ಬರ್ತಿದ್ದಾರೆ ‘ಸೆಲ್ಫಿ ಮಮ್ಮಿ’- ಗೂಗಲ್ ಡ್ಯಾಡಿ! - SELFIE MUMMY GOOGLE DADDY

ಕನ್ನಡದಲ್ಲಿ ಸೆಲ್ಫಿ ಮಮ್ಮಿ - ಗೂಗಲ್​ ಡ್ಯಾಡಿ ಅಂತ ಸಿನಿಮಾ ಬರುತ್ತಿದ್ದು ಸಿನಿಮಾದಲ್ಲಿ ಸೃಜನ್​ ಲೋಕೇಶ್​​ ಮತ್ತು ಮೇಘನಾ ರಾಜ್​ ನಟಿಸಿದ್ದಾರೆ. ಸಿನಿಮಾಕ್ಕೆ ಮಧು ಚಂದ್ರ ನಿರ್ದೇಶನ ಮಾಡಿದ್ದಾರೆ.

ಸೃಜನ್​​ ಮತ್ತು ಮೇಘನಾ ರಾಜ್​​
author img

By

Published : Nov 6, 2019, 11:13 AM IST

ವಿಭಿನ್ನ ಹೆಸರುಗಳನ್ನು ಇಟ್ಕೊಂಡು ಸಾಮಾಜಿಕ ಕಳಕಳಿ ಸಾರುವ ಸಿನಿಮಾಗಳಿಗೆ ಕನ್ನಡದಲ್ಲಿ ಬರವಿಲ್ಲ. ಇಂತಹದ್ದೇ ಕಾನ್ಸೆಪ್ಟ್​​ ಇಟ್ಕೊಂಡು ತೆರೆ ಮೇಲೆ ಬರಲು ಸಿನಿಮಾವೊಂದು ಸಿದ್ದವಾಗುತ್ತಿದೆ.

ಮುಂದಿನ ತಿಂಗಳು ಬಿಡುಗಡೆಗೆ ಸಿದ್ದವಾಗಿರುವ ‘ಸೆಲ್ಫಿ ಮಮ್ಮಿ -ಗೂಗಲ್ ಡ್ಯಾಡಿ’ ಸಿನಿಮಾ ಇಂದಿನ ಕಾಲದ ಮಕ್ಕಳ ಮೇಲೆ ನಿರ್ಮಾಣವಾಗುತ್ತಿರುವ ಸಿನಿಮಾ. ಈ ಸಿನಿಮಾದಲ್ಲಿ ಮಕ್ಕಳು ಹೇಗೆ ಮೊಬೈಲ್​​​​ಗೆ ಅಡಿಕ್ಟ್​​ ಆಗಿದ್ದಾರೆ ಎಂಬ ಬಗ್ಗೆ ಹೇಳಲಾಗಿದೆ. ಅಲ್ಲದೇ ಇಂದಿನ ಮಕ್ಕಳು ಪಬ್ಜಿ, ಬ್ಲೂ ವೆಲ್​ನಂತಹ ಆಟಗಳಿಗೆ ಜೀವವನ್ನೇ ಕಳೆದುಕೊಳ್ಳುತ್ತಿದ್ದಾರೆ. ಇಂತಹ ಸಮಯದಲ್ಲಿ ಹಿರಿಯರು ಹಾಗೂ ಶಿಕ್ಷಕರ ಮಾರ್ಗದರ್ಶವಿದ್ದು, ಮಕ್ಕಳು ಈ ದಾರಿಯಿಂದ ದೂರ ಇರುವಂತೆ ಎಚ್ಚರ ವಹಿಸಬೇಕು ಎಂದು ನಿರ್ದೇಶಕರು ವಿವರಿಸಿದ್ದಾರೆ.

selfie mummy google daddy
‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ!

ಕೆಂಗೇರಿಯ ಸೇಂಟ್​​​ ಬೆನಡಿಕ್ಟ್ ಶಾಲೆಯ ಆವರಣದಲ್ಲಿ ಮೊಬೈಲ್​ ರೆಸ್ಟ್​​ ಡೆ ಆಚರಿಸಲಾಗಿದ್ದು, ಈ ವೇಳೆ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಸುರೇಶ್ ಕುಮಾರ್​ ಕಾರ್ಯಕ್ರದ ಉದ್ಘಾಟನೆ ಮಾಡಿ ಚಿತ್ರದ ಟೀಸರ್​​ ರಿಲೀಸ್​ ಮಾಡಿದ್ರು. ಈ ಕಾರ್ಯಕ್ರಮಕ್ಕೆ 50 ಕ್ಕೂ ಹೆಚ್ಚು ಶಾಲೆಗಳಿಂದ ಆಗಮಿಸಿದ್ದ ಸಾವಿರಾರು ಮಕ್ಕಳಿಂದ ನಡುಗೆ ಮಾಡಲಾಯಿತು.

selfie mummy google daddy
‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ!
selfie mummy google daddy
‘ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ!

ಈ ಚಿತ್ರವನ್ನು ಮಧು ಚಂದ್ರ ನಿರ್ದೇಶನ ಮಾಡುತ್ತಿದ್ದು, ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಹಾಗೂ ಮೇಘನಾರಾಜ್ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಅಲ್ಲದೇ ಅಚ್ಯುತ್​​ ಕುಮಾರ್​​, ಗಿರಿಜಾ ಲೋಕೇಶ್, ದತ್ತಣ್ಣ, ಸುಂದರ್ ರಾಜ್, ಬೇಬಿಶ್ರೀ, ಮಾಸ್ಟರ್ ಆಲಾಪ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ.

ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಚಾಲನೆ

ಮುಂದಿನ ತಿಂಗಳು ಬಿಡುಗಡೆಗೆ ಸಿದ್ದವಾಗಿರುವ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಇಂದಿನ ಕಾಲಕ್ಕೆ ಹೊಂದುವ ಶೀರ್ಷಿಕೆ ಎಲ್ಲರಿಗೂ ತಿಳಿಯಲೆಂದೆ ಒಂದು ವಿಶೇಷ ಪ್ರಚಾರ ಕಾರ್ಯವನ್ನು ಹಮ್ಮಿಕೊಂಡಿತ್ತು. ಕೆಂಗೇರಿಯ ಸೈಂಟ್ ಬೆನಡಿಕ್ಟ್ ಶಾಲೆಯ ಆವರಣದಲ್ಲಿ ಪ್ರಾಥಮಿಕ ಮತ್ತು ಪ್ರೌಡ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಪಾಲ್ಗೊಂಡು ಮೊಬೈಲ್ ರೆಸ್ಟ್ ಡೇ ಕಾರ್ಯಕ್ರಮವನ್ನು ಉಧ್ಘಾಟನೆ ಮಾಡಿದರು. 50 ಕ್ಕೂ ಹೆಚ್ಚು ಶಾಲೆಗಳಿಂದ ಆಗಮಿಸಿದ್ದ ಸಾವಿರಾರು ಮಕ್ಕಳು ವಾಕತಾನ್ ಸಹ ಏರ್ಪಾಡು ಮಾಡಲಾಗಿತ್ತು. ಇದೆ ಸಂದರ್ಭದಲ್ಲಿ ಸಚಿವ ಎಸ್ ಸುರೇಶ್ ಕುಮಾರ್ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಚಿತ್ರದ ಟೀಸರ್ ಅನ್ನು ಸಹ ಬಿಡುಗಡೆ ಮಾಡಿದರು.

ಶಿಕ್ಷಣ ಸಚಿವರಿಗೆ ಚಿತ್ರದ ತಂಡದಿಂದ ಮೊಬೈಲ್ ವಿರಾಮ ದಿನಾಚರಣೆ ಜಾರಿಗೆ ಬರಬೇಕು ಎಂಬ ಮನವಿಯನ್ನು ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಶಿಕ್ಷಣ ಸಚಿವರು ಚಿತ್ರದ ಆಶಯಕ್ಕೆ ಒಳ್ಳೆಯದಾಗಲಿ ಎಂದು ಹರಸಿದರು.

ಆಕಾಶ್ ಬುಟ್ಟಿ ಸಿನಿಮಾಸ್ ನಿರ್ಮಾಣದ ಮಧು ಚಂದ್ರ ನಿರ್ದೇಶನದ ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಚಿತ್ರದ ಮುಖ್ಯ ತಾರಾಗಣದಲ್ಲಿ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಹಾಗೂ ಮೇಘನ ರಾಜ್ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಮಕ್ಕಳ ಮೊಬೈಲ್ ಗೇಮ್ಸ್ ಇಂದ ಏನೆಲ್ಲಾ ದುಷ್ಪರಿಣಾಮ ಆಗುತ್ತದೆ, ಇದನ್ನು ಪೋಷಕರು ಹೇಗೆ ತಡೆಗಟ್ಟಬಹುದು ಎಂಬುದು ಸಹ ಇದರಲ್ಲಿ ಅಡಕವಾಗಿದೆ. ಒಂದು ಗಂಭೀರ ವಿಚಾರವನ್ನು ಹಾಸ್ಯ ಲೇಪನದಲ್ಲಿ ನಿರ್ದೇಶಕ ಮಧು ಚಂದ್ರ (ಈ ಹಿಂದೆ ಸೈಬರ್ ಯುಗದೋಳ್ ನವಯುವ ಪ್ರೇಮ ಕಾವ್ಯ, ವಾಸ್ಕೋಡಿ ಗಾಮ, ರವಿ ಹಿಸ್ಟರೀ ಸಿನಿಮಾಗಳ ನಿರ್ದೇಶಕ) ಹೇಳಿದ್ದಾರೆ.

ಮಕ್ಕಳು ಪಬ್ಜಿ, ಬ್ಲೂ ವೆಲ್ ಅಂತಹ ಆಟಗಳಿಗೆ ಜೀವವನ್ನೇ ಕಳೆದುಕೊಂಡಿರುವ ವಿಚಾರ ನಮ್ಮ ಕನ್ನಡ ಮುಂದಿದೆ. ಇಂತಹ ಸಮಯದಲ್ಲಿ ಹಿರಿಯರ ಹಾಗೂ ಶಿಕ್ಷಕರ ಜವಾಬ್ದಾರಿ ಹೆಚ್ಚು ಎನ್ನುತ್ತಾರೆ ನಿರ್ದೇಶಕರು.

ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ಮಾದ್ಲಾಗಿದೆ. ಶಮಂತ್ ನಾಗ್ ಸಂಗೀತ, ರವೀಂದ್ರನಾಥ್ ಛಾಯಾಗ್ರಹಣ, ಸುರೇಶ್ ಅರ್ಮೂಗಮ್ ಸಂಕಲನವಿದೆ.

ಸೃಜನ್ ಲೋಕೇಶ್, ಮೇಘನ ರಾಜ್ ಅಲ್ಲದೆ ಅಕ್ಯುತ್ಕುಮಾರ್, ಗಿರಿಜ ಲೋಕೇಶ್, ದತ್ತಣ್ಣ, ಸುಂದರ್ ರಾಜ್, ಬೇಬಿಶ್ರೀ, ಮಾಸ್ಟೆರ್ ಆಲಾಪ್, ಚಕ್ರವರ್ತಿ, ಅರುಣ್ ಲೋಕಿ, ಟೋನಿ, ತಿಲಕ್, ಸಿದ್ದು, ಮಂಥನ, ಕನ್ನಿಕಾ, ಅನಿತಾ, ಆರಾಧ್ಯ ಅಲ್ಲದೆ ವಿಶೇಷ ಪಾತ್ರದಲ್ಲಿ ಸುಧ ಬರಗೂರು ಸಹ ಅಭಿನಯಿಸಿದ್ದಾರೆ.  

ETV Bharat Logo

Copyright © 2025 Ushodaya Enterprises Pvt. Ltd., All Rights Reserved.