ETV Bharat / sitara

ಸಖತ್ ತಮಾಷೆಯಾಗಿದೆ ಸತೀಶ್ ನೀನಾಸಂ ಪೆಟ್ರೋಮ್ಯಾಕ್ಸ್ ಚಿತ್ರದ ಡಿಸ್ಕಷನ್! - Neenasam Satish

ಪೆಟ್ರೋಮ್ಯಾಕ್ಸ್ ಸ್ಯಾಂಡಲ್​ವುಡ್​ನಲ್ಲಿ ಟೈಟಲ್​ನಿಂದಲೇ ಸದ್ದು ಮಾಡುತ್ತಿರುವ ಸಿನಿಮಾವಾಗಿದ್ದು, ನಿರ್ದೇಶಕ ವಿಜಯ ಪ್ರಸಾದ್ ಹಾಗೂ ನೀನಾಸಂ ಸತೀಶ್ ಜೊತೆಗೂಡಿ, ಇಡೀ ಪೆಟ್ರೋಮ್ಯಾಕ್ಸ್ ಟೀಮ್​ನೊಂದಿಗೆ ಸ್ಕ್ರಿಪ್ಟ್ ರೀಡಿಂಗ್ ಚರ್ಚೆ ಮಾಡಿದ್ದಾರೆ.

Discussion with Petromax Cinema Team
ನಿರ್ದೇಶಕ ವಿಜಯ ಪ್ರಸಾದ್ ಹಾಗೂ ನೀನಾಸಂ ಸತೀಶ್
author img

By

Published : Oct 14, 2020, 8:36 PM IST

ಪೆಟ್ರೋಮ್ಯಾಕ್ಸ್ ಇದು ಸ್ಯಾಂಡಲ್​ವುಡ್​ನಲ್ಲಿ ಟೈಟಲ್​ನಿಂದಲೇ ಸದ್ದು ಮಾಡುತ್ತಿರುವ ಸಿನಿಮಾ. ಪರಿಮಳ ಲಾಡ್ಜ್ ಸಿನಿಮಾ ರಿಲೀಸ್ ಮುನ್ನವೇ, ನೀನಾಸಂ ಸತೀಶ್ ಹಾಗೂ ನಿರ್ದೇಶಕ ವಿಜಯ್ ಪ್ರಸಾದ್ ಜೊತೆ ಪೆಟ್ರೋಮ್ಯಾಕ್ಸ್ ಚಿತ್ರವನ್ನು ಅನೌನ್ಸ್​ ಮಾಡಿರೋದು ಗೊತ್ತಿರುವ ವಿಚಾರ.

ಈಗಾಗಲೇ ವಿಜಯ್ ಪ್ರಸಾದ್ ನಿರ್ದೇಶನದ ಪರಿಮಳ ಲಾಡ್ಜ್ ಚಿತ್ರದಲ್ಲಿ, ನೀನಾಸಂ ಸತೀಶ್ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಚಿತ್ರ ಬಿಡುಗಡೆ ಮುನ್ನವೇ ವಿಜಯ್ ಪ್ರಸಾದ್ ಮತ್ತು ಸತೀಶ್ ನೀನಾಸಂ ಕಾಂಬಿನೇಷನ್ ಈ ಚಿತ್ರದ ಬಗ್ಗೆ ಸಾಕಷ್ಟು ಸಿದ್ಧತೆಗಳನ್ನು ಮಾಡುತ್ತಾ ಇದ್ದಾರೆ‌. ಈಗ ನಿರ್ದೇಶಕ ವಿಜಯ ಪ್ರಸಾದ್ ಹಾಗೂ ನೀನಾಸಂ ಸತೀಶ್ ಜೊತೆಗೂಡಿ, ಇಡೀ ಪೆಟ್ರೋಮ್ಯಾಕ್ಸ್ ಟೀಮ್​ನೊಂದಿಗೆ ಸ್ಕ್ರಿಪ್ಟ್ ರೀಡಿಂಗ್ ಚರ್ಚೆ ಮಾಡಿದ್ದಾರೆ.

ಸತೀಶ್ ನೀನಾಸಂ ಪೆಟ್ರೋಮ್ಯಾಕ್ಸ್ ಚಿತ್ರದ ಸ್ಕ್ರಿಪ್ಟ್ ರೀಡಿಂಗ್ ಚರ್ಚೆ.

ವಿಜಯ್ ಪ್ರಸಾದ್ ಚಿತ್ರದ ಡೈಲಾಗ್ ಸನ್ನಿವೇಶದ ಜೊತೆಗೆ ಹೇಳುವ ಶೈಲಿ ಸಖತ್ ತಮಾಷೆಯಾಗಿದೆ‌. ವಿಜಯ್ ಪ್ರಸಾದ್ ಒಂದೊಂದು ಸೀನ್​ಗಳನ್ನು ಸ್ವಾರಸ್ಯಕರವಾಗಿ ಹೇಳುವುದನ್ನು ಸತೀಶ್ ನೀನಾಸಂ ಸಖತ್ ಎಂಜಾಯ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕ ವಿಜಯ್ ಪ್ರಸಾದ್, ನಿರ್ದೇಶನದ ತಂಡ, ಕ್ಯಾಮೆರಾಮ್ಯಾನ್, ಕಲಾವಿದ ನಾಗಭೂಷಣ್, ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಸೇರಿದಂತೆ ಪೆಟ್ರೋಮ್ಯಾಕ್ಸ್ ಚಿತ್ರತಂಡ ಈ ಸ್ಕ್ರಿಪ್ಟ್ ಚರ್ಚೆಯನ್ನು ಮಾಡಿದೆ.

ಸದ್ಯ ಎಲ್ಲಾ ಫೈನಲ್ ಆಗಿದ್ದು ಇದೇ ಅಕ್ಟೋಬರ್ 19ರಿಂದ ಮೈಸೂರಿನಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ನಿರ್ದೇಶಕ ವಿಜಯ್ ಪ್ರಸಾದ್ ಹಾಗೂ ಸತೀಶ್ ನೀನಾಸಂ ಆತ್ಮೀಯ ಗೆಳೆಯರಂತೆ. ಈ ಸ್ನೇಹಕ್ಕಾಗಿ ಈಗ ವಿಜಯ್ ಪ್ರಸಾದ್ ಸತೀಶ್ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರಂತೆ.

ಲಾಕ್​ಡೌನ್ ಟೈಮಲ್ಲಿ ನೀನಾಸಂ ಸತೀಶ್, ನಿರ್ದೇಶಕ ವಿಜಯ್ ಪ್ರಸಾದ್ ಜೊತೆ ಸಾಕಷ್ಟು ಕಥೆಗಳನ್ನು ಚರ್ಚೆ ಮಾಡಿದ್ರಂತೆ. ಹತ್ತಾರು ಕಥೆಗಳಲ್ಲಿ ಒಂದು ಕಥೆಯನ್ನು ಫೈನಲ್ ಮಾಡಿ, ಈ ಚಿತ್ರಕ್ಕೆ ಪೆಟ್ರೋಮ್ಯಾಕ್ಸ್ ಅಂತಾ ಟೈಟಲ್ ಇಟ್ಟಿದ್ದಾರೆ. ಸದ್ಯ ಸತೀಶ್ ನೀನಾಸಂ ಮಾತ್ರ ಆಯ್ಕೆ ಆಗಿದ್ದು, ಹೀರೋಯಿನ್ ಯಾರು ಮತ್ತೆ ಯಾರೆಲ್ಲಾ ತಾರಾ ಬಳಗ ಇರುತ್ತೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.