ETV Bharat / sitara

ವಿಜಯ್ ಪ್ರಸಾದ್ - ಸತೀಶ್ ನೀನಾಸಂ ಕಾಂಬಿನೇಷನ್​ನಲ್ಲಿ ಬರ್ತಿದೆ ಪೆಟ್ರೋಮ್ಯಾಕ್ಸ್ - Petromax kannada movie

ವಿನಯ್​ ಪ್ರಸಾದ್​​​ ಪರಿಮಳ ಲಾಡ್ಜ್ ಸಿನಿಮಾ ರಿಲೀಸ್ ಮುನ್ನವೇ, ಸತೀಶ್ ನೀನಾಸಂ ಜೊತೆ ಹೊಸ ಸಿನಿಮಾವನ್ನ ಅನೌನ್ಸ್​​​ ಮಾಡಿದ್ದಾರೆ. ಆ ಸನಿಮಾಕ್ಕೆ ಪೆಟ್ರೋಮ್ಯಾಕ್ಸ್​ ಎಂದು ನಾಮಕರಣ ಮಾಡಲಾಗಿದೆ.

Satish Neenasam is acting in Petromax cinema
ವಿಜಯ್ ಪ್ರಸಾದ್-ಸತೀಶ್ ನೀನಾಸಂ ಕಾಂಬಿನೇಶನ್​ನಲ್ಲಿ ಬರ್ತಿದೆ ಪೆಟ್ರೋಮ್ಯಾಕ್ಸ್
author img

By

Published : Sep 29, 2020, 5:00 PM IST

ಟೀಸರ್​​ನಿಂದಲೇ ಸ್ಯಾಂಡಲ್​​ವುಡ್​​ನಲ್ಲಿ ಸೌಂಡ್ ಮಾಡುತ್ತಿರುವ ಸಿನಿಮಾ ಪರಿಮಳ ಲಾಡ್ಜ್. ನೀರ್ ದೋಸೆ ಚಿತ್ರದ ಖ್ಯಾತಿಯ ನಿರ್ದೇಶಕ ವಿಜಯ್ ಪ್ರಸಾದ್, ಪರಿಮಳ ಲಾಡ್ಜ್ ಸಿನಿಮಾ ರಿಲೀಸ್ ಮುನ್ನವೇ, ಸತೀಶ್ ನೀನಾಸಂ ಜೊತೆ ಹೊಸ ಸಿನಿಮಾವನ್ನ ಅನೌನ್ಸ್​​​ ಮಾಡಿದ್ದಾರೆ.

Satish Neenasam is acting in Petromax cinema
ಚಿತ್ರತಂಡ

ಈಗಾಗಲೇ ವಿಜಯ್ ಪ್ರಸಾದ್ ನಿರ್ದೇಶನದ ಪರಿಮಳ ಲಾಡ್ಜ್ ಚಿತ್ರದಲ್ಲಿ ಸತೀಶ್ ನೀನಾಸಂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಚಿತ್ರ ಬಿಡುಗಡೆ ಮುನ್ನವೇ ವಿಜಯ್ ಪ್ರಸಾದ್ ಮತ್ತು ಸತೀಶ್ ನೀನಾಸಂ ಕಾಂಬಿನೇಷನ್, ಕ್ಯಾಚೀ ಟೈಟಲ್ ಹೊಂದಿರುವ ಪೆಟ್ರೋಮ್ಯಾಕ್ಸ್ ಎಂಬ ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ.

ಪರಿಮಳ ಲಾಡ್ಜ್​​ ಪೋಸ್ಟರ್​​

ಪೆಟ್ರೋಮ್ಯಾಕ್ಸ್ ಚಿತ್ರದ ವಿಶಿಷ್ಟವಾದ ಕಥೆ ಕೇಳಿ ಸತೀಶ್ ನೀನಾಸಂ ಇಷ್ಟ ಪಟ್ಟಿದ್ದಾರಂತೆ. ಈ ಚಿತ್ರವು ಜೀವನದ ಮೌಲ್ಯದ ಜೊತೆಗೆ ಸಂದೇಶವನ್ನು ಕೊಡುತ್ತೆ ಅನ್ನೋದು ಸತೀಶ್ ನೀನಾಸಂ ನಂಬಿಕೆ. ಮೊದಲಿನಿಂದಲೂ ನಿರ್ದೇಶಕ ವಿಜಯ್ ಪ್ರಸಾದ್ ಹಾಗೂ ಸತೀಶ್ ನೀನಾಸಂ ಆತ್ಮೀಯ ಗೆಳೆಯರಂತೆ. ಈ ಸ್ನೇಹಕ್ಕಾಗಿ ಈಗ ವಿಜಯ್ ಪ್ರಸಾದ್ ಸತೀಶ್ ಸಿನಿಮಾಗೆ ಆಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರಂತೆ.

ಲಾಕ್ ಡೌನ್ ಟೈಮಲ್ಲಿ ಸತೀಶ್ ನೀನಾಸಂ, ನಿರ್ದೇಶಕ ವಿಜಯ್ ಪ್ರಸಾದ್ ಜೊತೆ ಸಾಕಷ್ಟು ಕಥೆಗಳನ್ನ ಚರ್ಚೆ ಮಾಡಿದ್ರಂತೆ. ಹತ್ತಾರು ಕಥೆಗಳಲ್ಲಿ ಒಂದು ಕಥೆಯನ್ನ ಫೈನಲ್ ಮಾಡಿ, ಈ ಚಿತ್ರಕ್ಕೆ ಪೆಟ್ರೋಮ್ಯಾಕ್ಸ್ ಅಂತಾ ಟೈಟಲ್ ಇಟ್ಟಿದ್ದಾರೆ.

ಇನ್ನು ಈ ಚಿತ್ರದ ಟೈಟಲ್ ಸೌಂಡಿಂಗ್ ಒಂಥಾರ ವಿಭಿನ್ನವಾಗಿದೆ‌. ಈ ಸಿನಿಮಾ ವಿಚಾರವಾಗಿ ವಿಜಯ್ ಪ್ರಸಾದ್ ಅಂಡ್ ಟೀಮ್ ಸತೀಶ್ ನೀನಾಸಂ ಜೊತೆ ಚರ್ಚೆ ಮಾಡಿದ್ದಾರೆ. ಸದ್ಯ ಸತೀಶ್ ನೀನಾಸಂ ಮಾತ್ರ ಆಯ್ಕೆ ಆಗಿದ್ದು, ಹೀರೋಯಿನ್ ಯಾರು ಮತ್ತೆ ಯಾರೆಲ್ಲಾ ತಾರಾ ಬಳಗ ಇರುತ್ತೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.

ಎಲ್ಲಾ ಫೈನಲ್ ಆದ್ರೆ ಅಕ್ಟೋಬರ್ ತಿಂಗಳಲ್ಲಿ ಪೆಟ್ರೋಮ್ಯಾಕ್ಸ್ ಸಿನಿಮಾದ ಶೂಟಿಂಗ್ ಮಾಡೋದಿಕ್ಕೆ ನಿರ್ದೇಶಕ ವಿಜಯ್ ಪ್ರಸಾದ್ ಪ್ಲಾನ್ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.