ರಿಷಭ್ ಶೆಟ್ಟಿ ನಿರ್ದೇಶನದ, ಹಿರಿಯ ನಟ ಅನಂತ್ ನಾಗ್ ನಟನೆಯ ಈ ಚಿತ್ರ ಮೂಡಿಸಿದ ಪ್ರಭಾದಿಂದ 'ಸರ್ಕಾರಿ ಶಾಲೆ ಉಳಿಸೋಣ' ಅಭಿಯಾನ ಪ್ರಾರಂಭವಾಯಿತು. ಇದರಡಿ ಅಳಿವಿನ ಅಂಚಿನಲ್ಲಿದ್ದ ಸಾಕಷ್ಟು ಶಾಲೆಗಳು ಮತ್ತೆ ತಲೆ ಎತ್ತಿ ನಿಂತವು.
ಇನ್ನು ಕಾಸರಗೋಡು ಶಾಲೆ ಚಿತ್ರದ ಶೂಟಿಂಗ್ ಬಂಟ್ವಾಳದ ಕೈರಂಗಳನ ಸರ್ಕಾರಿ ಶಾಲೆಯಲ್ಲಿ ನಡೆದಿತ್ತು. ಚಿತ್ರ ಗೆಲುವು ಪಡೆದ ನಂತ್ರ ನಿರ್ದೇಶಕ ರಿಷಭ್ ಶೆಟ್ಟಿ ಈ ಶಾಲೆಯನ್ನು ಮರೆಯಲಿಲ್ಲ. 118 ವರ್ಷಗಳ ಹಿಂದಿನ ಈ ಶಾಲೆಗೆ ಪುನರುಜ್ಜೀವನಕ್ಕೆ ಕೈ ಹಾಕಿದ್ರು. ಸಿನಿಮಾ ಗಳಿಸಿದ ಹಣದ ಕೊಂಚ ಭಾಗ ಈ ಶಾಲೆಯ ಉದ್ಧಾರಕ್ಕೆ ವಿನಿಯೋಗಿಸಿದರು.
ಕಳೆದ ಕೆಲ ತಿಂಗಳು ಹಿಂದೆ ಕೈರಂಗಳ ಶಾಲೆ ಶಿಥೀಲಾವಸ್ಥೆಯಲ್ಲಿದ್ದ ಕಟ್ಟಡಗಳನ್ನು ದುರಸ್ತಿಗೊಳಿಸಿದ್ದರು. ಚಾವಣಿಗೆ ಹೊಸ ಹೆಂಚುಗಳನ್ನು ಹೊದಿಸಿ ಗಟ್ಟಿಮುಟ್ಟಾಗಿಸಿದ್ದರು. ಇದೀಗ ಈ ಶಾಲೆಗೆ ಮತ್ತೊಂದು ಹೊಸ ರೂಪ ನೀಡುತ್ತಿದ್ದಾರೆ ಈ ನಮ್ಮ ಶೆಟ್ಟರು.
ಹೌದು, ಶಾಲೆಗೆ ಬಣ್ಣ ಬಳಿಸುತ್ತಿದ್ದಾರೆ. ಗೋಡೆಯ ಮೇಲೆ ಕರಾವಳಿ ಸಂಸ್ಕೃತಿ ಬಿಂಬಿಸುವ ಚಿತ್ರಗಳನ್ನು ಬಿಡಿಸಿದ್ದಾರೆ. ತಾವೇ ಮುಂದೆ ನಿಂತು ಈ ಕಾರ್ಯ ಮಾಡಿಸುತ್ತಿದ್ದಾರೆ. ಶೆಟ್ಟರ ಈ ಕಾರ್ಯದಿಂದ ಈ ಸರ್ಕಾರಿ ಶಾಲೆ ಹೊಚ್ಚ ಹೊಸ ರೂಪ ಪಡೆದ ಆಕರ್ಷಕವಾಗಿ ಕಾಣುತ್ತಿದೆ.
-
ರಜೆ ಮುಗಿಸಿ ಬರುವ ಮಕ್ಕಳಿಗೆ ಹೊಸ ವರ್ಷಕ್ಕೆ ಹೊಸ ಶಾಲೆ, ಹೊಸ ಕಲಿಕೆ, ಹೊಸ ಜೀವನವನ್ನು ನೀಡುವ ಪ್ರಯತ್ನದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೇವೆ. ಆ ಮಕ್ಕಳ ಭವಿಷ್ಯಕ್ಕೂ, ನಮ್ಮ ಈ ಪ್ರಯತ್ನಕ್ಕೂ ನಿಮ್ಮ ಸಹಕಾರವಿರಲಿ :) #savekannadaschool pic.twitter.com/GRbkMQXtxo
— Rishab Shetty (@shetty_rishab) April 25, 2019 " class="align-text-top noRightClick twitterSection" data="
">ರಜೆ ಮುಗಿಸಿ ಬರುವ ಮಕ್ಕಳಿಗೆ ಹೊಸ ವರ್ಷಕ್ಕೆ ಹೊಸ ಶಾಲೆ, ಹೊಸ ಕಲಿಕೆ, ಹೊಸ ಜೀವನವನ್ನು ನೀಡುವ ಪ್ರಯತ್ನದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೇವೆ. ಆ ಮಕ್ಕಳ ಭವಿಷ್ಯಕ್ಕೂ, ನಮ್ಮ ಈ ಪ್ರಯತ್ನಕ್ಕೂ ನಿಮ್ಮ ಸಹಕಾರವಿರಲಿ :) #savekannadaschool pic.twitter.com/GRbkMQXtxo
— Rishab Shetty (@shetty_rishab) April 25, 2019ರಜೆ ಮುಗಿಸಿ ಬರುವ ಮಕ್ಕಳಿಗೆ ಹೊಸ ವರ್ಷಕ್ಕೆ ಹೊಸ ಶಾಲೆ, ಹೊಸ ಕಲಿಕೆ, ಹೊಸ ಜೀವನವನ್ನು ನೀಡುವ ಪ್ರಯತ್ನದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೇವೆ. ಆ ಮಕ್ಕಳ ಭವಿಷ್ಯಕ್ಕೂ, ನಮ್ಮ ಈ ಪ್ರಯತ್ನಕ್ಕೂ ನಿಮ್ಮ ಸಹಕಾರವಿರಲಿ :) #savekannadaschool pic.twitter.com/GRbkMQXtxo
— Rishab Shetty (@shetty_rishab) April 25, 2019
ತಮ್ಮ ಈ ಕೆಲಸವನ್ನು ಇಂದು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಶೆಟ್ಟರು, 'ರಜೆ ಮುಗಿಸಿ ಬರುವ ಮಕ್ಕಳಿಗೆ ಹೊಸ ವರ್ಷಕ್ಕೆ ಹೊಸ ಶಾಲೆ, ಹೊಸ ಕಲಿಕೆ, ಹೊಸ ಜೀವನವನ್ನು ನೀಡುವ ಪ್ರಯತ್ನದಲ್ಲಿ ಮೊದಲ ಹೆಜ್ಜೆ ಇಟ್ಟಿದ್ದೇವೆ. ಆ ಮಕ್ಕಳ ಭವಿಷ್ಯಕ್ಕೂ, ನಮ್ಮ ಈ ಪ್ರಯತ್ನಕ್ಕೂ ನಿಮ್ಮ ಸಹಕಾರವಿರಲಿ' ಎಂದಿದ್ದಾರೆ.
-
ಆದರೆ ಸರಿಯಾದ ಸೌಲಭ್ಯಗಳಿರದೇ ಹೆಚ್ಚು ಕಡಿಮೆ ಕಥೆಯಲ್ಲಿನ ಶಾಲೆಯದ್ದೇ ಸ್ಥಿತಿಯಲ್ಲಿದ್ದ ಚಿತ್ರೀಕರಣಕ್ಕೆ ಬಳಸಿದ ಕೈರಂಗಳ ಶಾಲೆಗೂ ಏನಾದರೂ ಪುಟ್ಟ ಕೊಡುಗೆಯನ್ನು ನೀಡಬೇಕೆಂದು ‘ಸರ್ಕಾರಿ ಶಾಲೆ ಉಳಿಸಿ’ ಕಾರ್ಯಕ್ರಮದಡಿ ಅದರ ದುರಸ್ತಿ ಕಾರ್ಯಕ್ಕೆ ಕೈ ಹಾಕಿದ್ದೆವು. pic.twitter.com/JNilOD8k0Q
— Rishab Shetty (@shetty_rishab) February 20, 2019 " class="align-text-top noRightClick twitterSection" data="
">ಆದರೆ ಸರಿಯಾದ ಸೌಲಭ್ಯಗಳಿರದೇ ಹೆಚ್ಚು ಕಡಿಮೆ ಕಥೆಯಲ್ಲಿನ ಶಾಲೆಯದ್ದೇ ಸ್ಥಿತಿಯಲ್ಲಿದ್ದ ಚಿತ್ರೀಕರಣಕ್ಕೆ ಬಳಸಿದ ಕೈರಂಗಳ ಶಾಲೆಗೂ ಏನಾದರೂ ಪುಟ್ಟ ಕೊಡುಗೆಯನ್ನು ನೀಡಬೇಕೆಂದು ‘ಸರ್ಕಾರಿ ಶಾಲೆ ಉಳಿಸಿ’ ಕಾರ್ಯಕ್ರಮದಡಿ ಅದರ ದುರಸ್ತಿ ಕಾರ್ಯಕ್ಕೆ ಕೈ ಹಾಕಿದ್ದೆವು. pic.twitter.com/JNilOD8k0Q
— Rishab Shetty (@shetty_rishab) February 20, 2019ಆದರೆ ಸರಿಯಾದ ಸೌಲಭ್ಯಗಳಿರದೇ ಹೆಚ್ಚು ಕಡಿಮೆ ಕಥೆಯಲ್ಲಿನ ಶಾಲೆಯದ್ದೇ ಸ್ಥಿತಿಯಲ್ಲಿದ್ದ ಚಿತ್ರೀಕರಣಕ್ಕೆ ಬಳಸಿದ ಕೈರಂಗಳ ಶಾಲೆಗೂ ಏನಾದರೂ ಪುಟ್ಟ ಕೊಡುಗೆಯನ್ನು ನೀಡಬೇಕೆಂದು ‘ಸರ್ಕಾರಿ ಶಾಲೆ ಉಳಿಸಿ’ ಕಾರ್ಯಕ್ರಮದಡಿ ಅದರ ದುರಸ್ತಿ ಕಾರ್ಯಕ್ಕೆ ಕೈ ಹಾಕಿದ್ದೆವು. pic.twitter.com/JNilOD8k0Q
— Rishab Shetty (@shetty_rishab) February 20, 2019