ಜೀ ಕನ್ನಡ ವಾಹಿನಿಯ ಹೆಸರಾಂತ ರಿಯಾಲಿಟಿ ಶೋ 'ಸರಿಗಮಪ' ಇದೇ ತಿಂಗಳು ಆರಂಭವಾಗಲಿದೆ. ಸರಿಗಮಪ ಸೀಸನ್ 17ರ ಆರಂಭಕ್ಕೆ ಕೇವಲ ಎರಡು ವಾರಗಳು ಮಾತ್ರ ಬಾಕಿ ಇದ್ದು ಗಾನ ಕೋಗಿಲೆಗಳು ಗಾಯನದ ರಸದೌತಣವನ್ನು ಉಣಬಡಿಸಲು ನಿಮ್ಮ ಮುಂದೆ ಬರಲಿದ್ದಾರೆ.
ಅಂದ ಹಾಗೇ ಸರಿಗಮಪ ಸೀಸನ್ 17ರ ಪ್ರೋಮೋ ಸಖತ್ ಆಗಿ ಮೂಡಿ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದು ಮಾಡುತ್ತಿದೆ. ವಿಭಿನ್ನ ಶೈಲಿಯ ಪ್ರೊಮೊ ಮೂಲಕ ಸದ್ದು ಮಾಡುತ್ತಿರುವ ಸರಿಗಮಪ, ಇದೇ ಜನವರಿ 18ರಿಂದ ಆರಂಭವಾಗಲಿದೆ. ಶನಿವಾರ ಮತ್ತು ಭಾನುವಾರ ಪ್ರತಿ ರಾತ್ರಿ 7.30ಕ್ಕೆ ಪ್ರಸಾರವಾಗಲಿದೆ.

ಅನುಶ್ರೀ ಮಾತಿನ ಝಲಕ್ ಈ ಸೀಸನ್ನಲ್ಲೂ ಮುಂದುವರಿಯಲಿದೆ. ಕಳೆದ ಬಾರಿಯಂತೆ ಈ ಬಾರಿಯೂ ನಾದಬ್ರಹ್ಮ ಹಂಸಲೇಖ ಮಹಾಗುರುಗಳಾಗಿ ಸಂಗೀತ ವೇದಿಕೆಯನ್ನು ಅಲಂಕರಿಸಲಿದ್ದಾರೆ. ಉಳಿದಂತೆ ತೀರ್ಪುಗಾರರಾಗಿ ರಾಜೇಶ್ ಕೃಷ್ಣನ್, ವಿಜಯ ಪ್ರಕಾಶ್ ಮತ್ತು ಅರ್ಜುನ್ ಜನ್ಯ ಮುಂದುವರಿಯಲಿದ್ದಾರೆ.
- " class="align-text-top noRightClick twitterSection" data="
">