ETV Bharat / sitara

ಸಂಜಯ್​ ದತ್​ಗೆ​​ ಶ್ವಾಸಕೋಶದ ಕ್ಯಾನ್ಸರ್​​... ಆತಂಕದಲ್ಲಿ ‘ಕೆಜಿಎಫ್​​​​ 2’ ಚಿತ್ರತಂಡ! - ಕೆಜಿಎಫ್​ ಚಾಫ್ಟರ್​-2

ನಟ ಸಂಜಯ್ ದತ್​ಗೆ ಶ್ವಾಸಕೋಶದ ಕ್ಯಾನ್ಸರ್​ ಕಾಣಿಸಿಕೊಂಡಿದೆ ಎಂಬ ವರದಿ ಹಿನ್ನೆಲೆಯಲ್ಲಿ ಇದೀಗ ಬಹುನಿರೀಕ್ಷಿತ ಕೆಜಿಎಫ್​ ಚಾಪ್ಟರ್​- 2 ಚಿತ್ರತಂಡ ಸಂಕಷ್ಟಕ್ಕೆ ಸಿಲುಕಿಕೊಂಡಿದೆ.

Sanjay Dutt lung cancer
Sanjay Dutt lung cancer
author img

By

Published : Aug 12, 2020, 11:48 PM IST

Updated : Aug 13, 2020, 1:41 PM IST

ಮುಂಬೈ: ಬಾಲಿವುಡ್ ನಟ ಕೆಜಿಎಫ್​ನ 'ಅಧೀರ' ಸಂಜಯ್​​ ದತ್​​​ ಅನಾರೋಗ್ಯಕ್ಕೀಡಾಗಿದ್ದು, ಚಿಕಿತ್ಸೆಗೋಸ್ಕರ ಇದೀಗ ಯುಎಸ್​ಗೆ ಪ್ರಯಾಣ ಬೆಳೆಸಲಿರುವ ಕಾರಣ ಸಿನಿಮಾ ಶೂಟಿಂಗ್​​ನಿಂದ ಸಣ್ಣ ಬ್ರೇಕ್​ ಪಡೆದುಕೊಳ್ಳಲಿದ್ದಾರೆ.

ಇದೇ ವಿಚಾರವಾಗಿ ಟ್ವೀಟ್​ ಮಾಡಿರುವ ಸಂಜಯ್​ ದತ್​, ನನಗೆ ಚಿಕಿತ್ಸೆಯ ಅವಶ್ಯಕತೆ ಇದೆ. ನನ್ನ ಸ್ನೇಹಿತರು, ಕುಟುಂಬಸ್ಥರು ನನ್ನೊಂದಿಗಿದ್ದಾರೆ. ವದಂತಿ ನಂಬಬೇಡಿ. ಆದಷ್ಟು ಬೇಗ ಚೇತರಿಸಿಕೊಳ್ಳುತ್ತೇನೆ ಎಂದು ಟ್ವೀಟ್​ ಮಾಡಿದ್ದಾರೆ. ಅಲ್ಲದೆ ಖಳನಾಯಕ ಆದಷ್ಟು ಬೇಗ ಗುಣಮುಖರಾಗಲಿ ಎಂದು ಬಾಲಿವುಡ್​​ ನಟರು ಹಾಗೂ ಕ್ರಿಕೆಟಿಗ ಯುವರಾಜ್ ಸಿಂಗ್ ಶುಭ ಹಾರೈಸಿ ಅಧೀರನ ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ.

Sanjay Dutt lung cancer
ಸಂಜಯ್​ ದತ್​ಗೆ ಶ್ವಾಸಕೋಶದ ಕ್ಯಾನ್ಸರ್

ಇದೆಲ್ಲದರ ನಡುವೆ ಸಂಜಯ್ ದತ್​​ಗೆ ಕ್ಯಾನ್ಸರ್ ಕಾಣಿಸಿಕೊಂಡಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕೆಜಿಎಫ್ ಚಾಪ್ಟರ್​​-2 ಚಿತ್ರತಂಡಕ್ಕೆ ಈಗ ದೊಡ್ಡ ತಲೆನೋವಾಗಿದೆ. ಕಾರಣ ಕೆಜಿಎಫ್ ಚಿತ್ರದಲ್ಲಿ ಅಧೀರನ ಪಾತ್ರದ ಮೂಲಕ ಮೊದಲ ಬಾರಿಗೆ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೆ ಚಿತ್ರದ ಶೂಟಿಂಗ್​ನಲ್ಲೂ ಭಾಗಿಯಾಗಿದ್ದಾರೆ.

ಇದರ ಜೊತೆಗೆ ಕೆಜಿಎಫ್ ನಿರ್ದೇಶಕ ಪ್ರಶಾಂತ್‌ ನೀಲ್ ಸಂಜಯ್​ ದತ್​ ಹುಟ್ಟುಹಬ್ಬದ ದಿನವೇ ಅಧೀರನ ಪಾತ್ರದ ಲುಕ್ ರಿವೀಲ್ ಮಾಡಿದ್ರು‌. ಆದರೆ ಇದೀಗ ಅಭಿಮಾನಿಗಳಲ್ಲಿ ಅತಂಕ ಕಾಡ್ತಿದೆ. ಬಾಲಿವುಡ್​ ನಟ ಕ್ಯಾನ್ಸರ್​ ಚಿಕಿತ್ಸೆಗಾಗಿ ಅಮೆರಿಕಾಗೆ ಪ್ರಯಾಣ ಬೆಳೆಸಲಿರುವ ಕಾರಣ ಸಿನಿಮಾ ಶೂಟಿಂಗ್​​ನಿಂದ ದೂರು ಉಳಿಯಲಿದ್ದಾರೆ. ಹೀಗಾಗಿ ಕೆಜಿಎಫ್​​-2 ಚಿತ್ರದ ಶೂಟಿಂಗ್​ ಕತೆ ಏನು ಎಂಬ ಆತಂಕ ಶುರುಗೊಂಡಿದೆ.

Sanjay Dutt lung cancer
ಸಂಕಷ್ಟದಲ್ಲಿ "ಕೆಜಿಎಫ್​​​​ 2" ಚಿತ್ರತಂಡ!

ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ ಕೆಜಿಎಫ್​​ ಚಿತ್ರದ ಕ್ಲೈಮ್ಯಾಕ್ಸ್​​​ ಬಾಕಿ ಉಳಿದಿದ್ದು, ಸಂಜಯತ್​ ದತ್​​ 15 ದಿನಗಳ ಕಾಲ ಶೂಟಿಂಗ್​​ನಲ್ಲಿ ಭಾಗವಹಿಸಬೇಕಾಗಿತ್ತು. ಆಗಷ್ಟ 16 ರಿಂದ ಬೆಂಗಳೂರಿನಲ್ಲಿ, ತದನಂತರ ಹೈದರಾಬಾದ್​ನಲ್ಲಿ ಶೂಟಿಂಗ್​ನಲ್ಲಿ ಭಾಗಿಯಾಗಬೇಕಾಗಿತ್ತು.

ಆದರೆ ಇದೀಗ ಚಿಕಿತ್ಸೆಗೋಸ್ಕರ ವಿದೇಶಕ್ಕೆ ಹೋಗುತ್ತಿರುವ ಕಾರಣ ಶೂಟಿಂಗ್​ ಮತ್ತಷ್ಟು ಮುಂದೆ ಹೋಗುವ ಸಾಧ್ಯತೆ ಇದೆ. ಒಂದು ವೇಳೆ ಸಂಜಯ್​ ದತ್​ ಚಿತ್ರದ ಶೂಟಿಂಗ್​ ಮುಗಿಸಿ ಯುಎಸ್​ಗೆ ಹೋದರೆ ಚಿತ್ರತಂಡಕ್ಕೆ ಯಾವುದೇ ತೊಂದರೆ ಇಲ್ಲ. ಒಂದು ವೇಳೆ ಶೂಟಿಂಗ್​ನಲ್ಲಿ ಭಾಗಿಯಾಗದಿದ್ದರೆ ಅನಿವಾರ್ಯವಾಗಿ ಮುಂದೂಡಬೇಕಾಗುತ್ತದೆ.

Last Updated : Aug 13, 2020, 1:41 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.