'ಮಾಮು ಟೀ ಅಂಗಡಿ' ಸಿನಿಮಾದಿಂದ ವೃತ್ತಿ ಜೀವನ ಆರಂಭಿಸಿ 'ಪ್ರೀತಿ ಗೀತಿ ಇತ್ಯಾದಿ', 'ಎರಡನೇ ಸಲ', 'ದಯವಿಟ್ಟು ಗಮನಿಸಿ' ಮತ್ತು ಕೆಲವು ಪರಭಾಷೆ ಚಿತ್ರಗಳಲ್ಲಿ ಅಭಿನಯಿಸಿದ್ದ ಸಂಗೀತ ಭಟ್ ‘ಕಪಟ ನಾಟಕ ಸೂತ್ರಧಾರಿ’ ಸಿನಿಮಾ ಮೂಲಕ ವಾಪಸ್ ಬಂದಿದ್ದಾರೆ. ಮಿ ಟೂ ವಿವಾದದ ಬಳಿಕ ಅವರು ಇನ್ನು ಮುಂದೆ ನಟಿಸುವುದಿಲ್ಲ ಎಂದು ಹೇಳಿ ಚಿತ್ರರಂಗದಿಂದ ದೂರವಿದ್ದರು. ಗರುಡ ಕ್ರಿಯೇಷನ್ ಬ್ಯಾನರ್ ಅಡಿ ತಯಾರಾಗುತ್ತಿರುವ ‘ಕಪಟ ನಾಟಕ ಸೂತ್ರಧಾರಿ’ ಚಿತ್ರೀಕರಣವನ್ನು ಬೆಂಗಳೂರು ಸುತ್ತ ಮುತ್ತ ನಡೆಸಲಾಗಿದೆ. ಸದ್ಯದಲ್ಲೇ ಚಿತ್ರದ ಆಡಿಯೋ ಬಿಡುಗಡೆಯಾಗಲಿದೆ.
ಸಂಗೀತ ಭಟ್ ಜೋಡಿಯಾಗಿ 'ಹುಲಿರಾಯ' ಖ್ಯಾತಿಯ ಬಾಲು ನಾಗೇಂದ್ರ ನಟಿಸಿದ್ದಾರೆ. ಕ್ರಿಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಕೂಡಾ ಮಾಡುತ್ತಿದ್ದಾರೆ. ಅದಿಲ್ ನಾದಾಫ್ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಕ್ರಿಶ್, ವೇಣು ಹಸ್ರಾಲಿ, ಚಾಣಕ್ಯ, ಅನಿರುಧ್ ಶಾಸ್ತ್ರಿ ಹಾಡುಗಳನ್ನು ರಚಿಸಿದ್ದಾರೆ. ಹರಿಚರಣ್, ಸಿದ್ದಾರ್ಥ್, ಮಾಧುರಿ ಶೇಷಾದ್ರಿ, ಇಶಾ ಸುಚಿ, ಪವನ್ ಪಾರ್ಥ ಮತ್ತು ಅನಿರುಧ್ ಶಾಸ್ತ್ರಿ ಚಿತ್ರದ ಹಾಡುಗಳನ್ನು ಹಾಡಿದ್ದಾರೆ. ಕಿರಣ್ ಚಂದ್ರ ಹಾಗೂ ವೇಣು ಹಸ್ರಾಲಿ ಸಂಭಾಷಣೆ ಬರೆದಿರುವ ಈ ಚಿತ್ರದಲ್ಲಿ ಕರಿ ಸುಬ್ಬು, ಶಂಕರ್ ನಾರಾಯಣ್, ಪ್ರಕಾಶ್ ತುಮ್ಮೀನಡು, ಉಗ್ರಮ್ ಮಂಜು, ಜಯದೇವ, ನವೀನ್ ವಾಸುದೇವ್, ಸುನಿಲ್ ಕುಲಕರ್ಣಿ ಹಾಗೂ ಇತರರು ನಟಿಸಿದ್ದಾರೆ.