ETV Bharat / sitara

ಹಸಿವಿಗಿಂತ ದೊಡ್ಡ ಕಾಯಿಲೆ ಇಲ್ಲ.. 'ಯುವರತ್ನ'ನ ಬೆನ್ನಿಗೆ ನಿಂತ ಸ್ಯಾಂಡಲ್​ವುಡ್​ ಸ್ಟಾರ್ಸ್.. - ಸರ್ಕಾರದ ನಿರ್ಧಾರಕ್ಕೆ ನಟರಿಂದ ಆಕ್ಷೇಪ

ಹಸಿವಿಗಿಂತ ದೊಡ್ಡ ಕಾಯಿಲೆ ಇಲ್ಲ. ನಿರ್ಬಂಧಗಳು ನಮ್ಮ ಬದುಕಿಗೆ ಸಹಾಯವಾಗಬೇಕೇ ಹೊರತು, ಮುಳುವಾಗಬಾರದು. ಚಿತ್ರರಂಗದ ಮೇಲಿನ ಹಠಾತ್‌ ಧೋರಣೆ ಖಂಡನೀಯ. ಎಲ್ಲರಿಗೂ ದುಡಿಯವ ಅವಕಾಶ ಇದೆ, ಚಿತ್ರರಂಗಕ್ಕೆ ಯಾಕಿಲ್ಲ.. ಸೂಚನೆ ಕೊಡದೆ ಜಾರಿ ಮಾಡಿರುವ ನಿರ್ಬಂಧಗಳಿಂದ ಚಿತ್ರರಂಗ ಬಲಿಯಾಗಿದೆ..

Sandlwood stars reaction about Govt Decision
ಸರ್ಕಾರದ ನಿರ್ಧಾರಕ್ಕೆ ಸ್ಯಾಂಡಲ್​ವುಡ್​ ನಟರ ಆಕ್ಷೇಪ
author img

By

Published : Apr 3, 2021, 8:11 PM IST

ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಮಾತ್ರ ಆಸನ ಭರ್ತಿಗೆ ಅವಕಾಶ ನೀಡಿರುವ ರಾಜ್ಯ ಸರ್ಕಾರದ ನಿರ್ಧಾರದಿಂದ ಇತ್ತೀಚೆಗೆ ಬಿಡುಗಡೆಯಾದ 'ಯುವರತ್ನ' ಸಿನಿಮಾಗೆ ದೊಡ್ಡ ಹೊಡೆದ ಬಿದ್ದಿದೆ. ಸರ್ಕಾರದ ನಿರ್ಧಾರದ ವಿರುದ್ಧ ಸ್ಯಾಂಡಲ್‌ವುಡ್ ಬಳಗ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

  • Hoping that the government does the needful for us as our industry is in trouble.
    All rules and regulations will be followed in the theatres.
    I request our CM @BSYBJP to consider the matter and solve it immediately

    — DrShivaRajkumar (@NimmaShivanna) April 3, 2021 " class="align-text-top noRightClick twitterSection" data=" ">

ಏಕಾಏಕಿ ನಿರ್ಧಾರದ ಮೂಲಕ ಒಂದು ಒಳ್ಳೆಯ ಕನ್ನಡ ಸಿನಿಮಾವನ್ನು ಕೊಲೆ ಮಾಡಲಾಗುತ್ತಿದೆ ಎಂದು ನಟ ಪುನೀತ್ ರಾಜ್‌ಕುಮಾರ್ ಆಕ್ರೋಶ ಹೊರ ಹಾಕಿದ್ದಾರೆ. 'ಯುವರತ್ನ' ಚಿತ್ರ ತಂಡದ ಪರವಾಗಿ ಇಡೀ ಸ್ಯಾಂಡಲ್‌ವುಡ್ ಧ್ವನಿ ಎತ್ತಿದೆ. ಹೀಗಾಗಿ #Yuvarathanna #SaveCinema# Wewant 100PercentOccupancy ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್​ ಮಾಡಲಾಗುತ್ತಿದೆ.

  • Goin bk to 50% theatrical occupancy is surely a shocker to a film tats jus released. Respecting the govts decision too is our duty, keeping in mind its for a reason. I wsh team #Yuvaratna the best of strength to over come this situation and come out victorious. @hombalefilms

    — Kichcha Sudeepa (@KicchaSudeep) April 3, 2021 " class="align-text-top noRightClick twitterSection" data=" ">

ಈಗಾಗಲೇ ರಕ್ಷಿತ್ ಶೆಟ್ಟಿ, ಧನಂಜಯ, ನಟ ಪ್ರದೀಪ್, ನಿರ್ದೇಶಕ ಪ್ರೇಮ್, ಕಿಚ್ಚ ಸುದೀಪ್, ಶ್ರೀಮುರಳಿ ಹೀಗೆ ಸಾಕಷ್ಟು ಜನ ತಾರೆಯರು ಸರ್ಕಾರದ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಟ ಶಿವರಾಜ್ ಕುಮಾರ್ ಕೂಡ ನಮ್ಮ ಉದ್ಯಮ ತೊಂದರೆಯಲ್ಲಿರುವುದರಿಂದ ಸರ್ಕಾರ ನಮಗೆ ಅಗತ್ಯ ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇನೆ.

ಚಿತ್ರಮಂದಿರಗಳಲ್ಲಿ ಎಲ್ಲಾ ನಿಯಮಗಳನ್ನ ಅನುಸರಿಸಲಾಗುತ್ತಿದೆ. ಸರ್ಕಾರದ ಈ ನಿರ್ಧಾರವನ್ನ ಮರು ಪರಿಶೀಲಿಸಲು ಹಾಗೂ ಪರಿಹರಿಸಲು ನಾನು ಮನವಿ ಮಾಡುತ್ತೇನೆ ಎಂದು ಟ್ಟೀಟ್ ಮಾಡಿದ್ದಾರೆ.

ಓದಿ : ಚಿತ್ರ ಮಂದಿರಗಳಿಗೆ ಶೇ.50 ರಷ್ಟು ಪ್ರೇಕ್ಷಕರಿಗೆ ಅನುಮತಿ: ಸರ್ಕಾರದ ವಿರುದ್ಧ ಅಭಿಮಾನಿಗಳ ಆಕ್ರೋಶ

ಇದರ ಜೊತೆಗೆ ನಟ ರಾಕಿಂಗ್ ಸ್ಟಾರ್ ಯಶ್ ಕೂಡ ರಾಜ್ಯ ಸರ್ಕಾರದ ವಿರುದ್ಧ ಕಿರಿ ಕಾರಿದ್ದಾರೆ. ನಮ್ಮಲ್ಲಿ ಜಾಗೃತಿ ಮೂಡಿದೆ, ಜವಾಬ್ದಾರಿಯೂ ಇದೆ. ಹಸಿವಿಗಿಂತ ದೊಡ್ಡ ಕಾಯಿಲೆ ಇಲ್ಲ. ನಿರ್ಬಂಧಗಳು ನಮ್ಮ ಬದುಕಿಗೆ ಸಹಾಯವಾಗಬೇಕೇ ಹೊರತು, ಮುಳುವಾಗಬಾರದು.

ಚಿತ್ರರಂಗದ ಮೇಲಿನ ಹಠಾತ್‌ ಧೋರಣೆ ಖಂಡನೀಯ. ಎಲ್ಲರಿಗೂ ದುಡಿಯವ ಅವಕಾಶ ಇದೆ, ಚಿತ್ರರಂಗಕ್ಕೆ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ. ಸೂಚನೆ ಕೊಡದೆ ಜಾರಿ ಮಾಡಿರುವ ನಿರ್ಬಂಧಗಳಿಂದ ಚಿತ್ರರಂಗ ಬಲಿಯಾಗಿದೆ ಎಂದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.