ETV Bharat / sitara

ಅಂದು ಅಣ್ಣಾವ್ರ ಅದೇ ಕಣ್ಣು.. ಇಂದು ಹೊಸಬರ ಅದೇ ಮುಖ..

ಚಿತ್ರದಲ್ಲಿ ನಟ ಬರೋಬ್ಬರಿ ಏಳು ಪಾತ್ರಗಳಲ್ಲಿ ನಟಿಸಿದ್ದು, ಒಂದಕ್ಕಿಂತ ಮತ್ತೊಂದು ಭಿನ್ನ, ವಿಶಿಷ್ಟ, ಕ್ಷಣ ಕ್ಷಣಕ್ಕೂ ಸಸ್ಪೆನ್ಸ್ ಹೆಚ್ಚಿಸುತ್ತಲೇ ಹೋಗುವಂತ ಚಿತ್ರವಾಗುವ ಎಲ್ಲಾ ಸಾಧ್ಯತೆ ಇದೆಯಂತೆ. ಓರ್ವ ಕಲಾವಿದ ಏಳು ವಿಚಿತ್ರ ಪಾತ್ರಗಳಲ್ಲಿ ನಟಿಸುವ ಮೂಲಕ ಗಿನ್ನೆಸ್ ರೆಕಾರ್ಡ್​ಗೆ ತೆಗೆದುಕೊಂಡು ಹೋಗಬೇಕೆಂಬ ಹಂಬಲವೂ ಇದೆಯಂತೆ..

ಅದೇ ಮುಖ ಕನ್ನಡ ಹೊಸ ಸಿನಿಮಾ
Sandesh Shetty directed new film Adhe mukha in kannada
author img

By

Published : Jan 17, 2021, 8:15 PM IST

ಕನ್ನಡ ಚಿತ್ರರಂಗದಲ್ಲಿ 1985ರಲ್ಲಿ 'ಅದೇ ಕಣ್ಣು' ಎಂಬ ಸಿನಿಮಾ ಬಂದಿತ್ತು. ಈ ಸಿನಿಮಾದಲ್ಲಿ ಡಾ.ರಾಜ್ ಕುಮಾರ್ ದ್ವಿಪಾತ್ರದಲ್ಲಿ ಅಮೋಘವಾಗಿ ಅಭಿನಯಿಸಿದ್ದರು. ಇದೀಗ ಇದೇ ಟೈಟಲ್​ ಹೋಲುವ 'ಅದೇ ಮುಖ' ಎಂಬ ಶೀರ್ಷಿಕೆ ಇಟ್ಟುಕೊಂಡ ಹೊಸ ಸಿನಿಮಾವೊಂದು ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡ್ತಿದೆ.

ಅದೇ ಮುಖ ಚಿತ್ರದಂಡ..

ಉದಯೋನ್ಮುಖ ನಟ ಮತ್ತು ನಿರ್ದೇಶಕ ಸಂದೇಶ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಅದೇ ಮುಖ ಚಿತ್ರ ಇತ್ತೀಚೆಗೆ ಸೆಟ್ಟೇರಿದೆ. ಈ ಸಿನಿಮಾ ಸೆಟ್ ಏರುವ ಮುನ್ನವೇ ಈ ಚಿತ್ರದ ಶೀರ್ಷಿಕೆ ಸಾಕಷ್ಟು ಸದ್ದು ಮಾಡಿತ್ತು.

ಚಿತ್ರದಲ್ಲಿ ನಟ ಬರೋಬ್ಬರಿ ಏಳು ಪಾತ್ರಗಳಲ್ಲಿ ನಟಿಸಿದ್ದು, ಒಂದಕ್ಕಿಂತ ಮತ್ತೊಂದು ಭಿನ್ನ, ವಿಶಿಷ್ಟ, ಕ್ಷಣ ಕ್ಷಣಕ್ಕೂ ಸಸ್ಪೆನ್ಸ್ ಹೆಚ್ಚಿಸುತ್ತಲೇ ಹೋಗುವಂತ ಚಿತ್ರವಾಗುವ ಎಲ್ಲಾ ಸಾಧ್ಯತೆ ಇದೆಯಂತೆ. ಓರ್ವ ಕಲಾವಿದ ಏಳು ವಿಚಿತ್ರ ಪಾತ್ರಗಳಲ್ಲಿ ನಟಿಸುವ ಮೂಲಕ ಗಿನ್ನೆಸ್ ರೆಕಾರ್ಡ್​ಗೆ ತೆಗೆದುಕೊಂಡು ಹೋಗಬೇಕೆಂಬ ಹಂಬಲವೂ ಇದೆಯಂತೆ.

ಚಿತ್ರದ ನಿರ್ದೇಶಕ ಕಮ್​​ ನಟ ಸಂದೇಶ್ ಶೆಟ್ಟಿ ತಲೆಕೆಡಿಸಿಕೊಂಡು, ಸಾಕಷ್ಟು ಸಮಯ ತೆಗೆದುಕೊಂಡು ಕಥೆ ರೆಡಿ ಮಾಡಿದ್ದಾರೆ. ಕೆಲ ದಿನಗಳ ಹಿಂದೆ ಸೆಟ್ಟೇರಿರುವ ಸಿನಿಮಾ ತಂಡಕ್ಕೆ ಧರ್ಮಸಿಂಧು, ಆಧ್ಯಾತ್ಮಿಕ ಚಿಂತಕ ರಾಘವೇಂದ್ರ ಉಳ್ಳೂರ, ಸಿನಿಮಾದ ಸ್ಕ್ರಿಫ್ಟ್ ಪೂಜೆ ನೆರವೇರಿಸಿ ಶುಭ ಹಾರೈಸಿದ್ದಾರೆ.

ಖ್ಯಾತ ಚಲನಚಿತ್ರ ನಟ ಕಂ ನಿರ್ಮಾಪಕ ದಿವಂ ಕುಂದರ್, ನಟ ನಿರ್ಮಾಪಕ ಕರಣ್ ಕುಂದರ್ ಮತ್ತು ನ್ಯಾಯವಾದಿ ನಿರ್ಮಾಪಕ ವಿಜಯ ಶೆಟ್ಟಿ ಜಂಟಿಯಾಗಿ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ. ಸಿನಿಮಾ ಸೆಟ್ಟೇರಿದ್ದು, ಚಿತ್ರೀಕರಣವೂ ಸದ್ಯದಲ್ಲಿಯೇ ಆರಂಭವಾಗಲಿದೆ. ತಸ್ಮಯ್ ಪ್ರೊಡಕ್ಷನ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಸಂದೇಶ್ ಶೆಟ್ಟಿ ಕಥೆ ಹೇಳುತ್ತಿದ್ದಂತೆ, ಹಿಂದೂ ಮುಂದೂ ನೋಡದೆ ಒಪ್ಪಿಕೊಂಡಿರುವುದು ಆಜ್ರಿ ಅವರ ಚಾಣಾಕ್ಷತನಕ್ಕೆ ಸಾಕ್ಷಿಯಾಗಿದೆ.

ಕಾರ್ಯಕ್ರಮದಲ್ಲಿ ನಟ ಅಶ್ವತ್ಥ್ ಆಚಾರ್ಯ, ವೈದ್ಯೆ ಡಾ.ವಾಣಿಶ್ರೀ ಐತಾಳ್, ಉದ್ಯಮಿ ಮಹೇಶ್ ಐತಾಳ್, ಉಷಾ ಸಂದೇಶ್ ಶೆಟ್ಟಿ, ತಸ್ಮಯ್ ಶೆಟ್ಟಿ, ರಂಗ ನಟ ಜಯಶೇಖರ್ ಮಡಪ್ಪಾಡಿ ಮತ್ತಿತರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.