ETV Bharat / sitara

ಕನ್ನಡದ ಹಿರಿಯ ನಟ ಕೃಷ್ಣೇಗೌಡರು ಕೋವಿಡ್​ಗೆ ಬಲಿ - Veteran actor Krishna Gowda latest news

ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ ಚಂದನವನದ ಹಿರಿಯ ನಟ ಕೃಷ್ಣೇಗೌಡರು ಇಂದು ಕೊರೊನಾಗೆ ಬಲಿಯಾಗಿದ್ದಾರೆ..

ಕನ್ನಡದ ಹಿರಿಯ ನಟ ಕೃಷ್ಣೇಗೌಡ
ಕಲಾವಿದ ಬಿ.ಎಮ್ ಕೃಷ್ಣೇಗೌಡ
author img

By

Published : May 25, 2021, 12:14 PM IST

Updated : May 25, 2021, 12:20 PM IST

ಸ್ಯಾಂಡಲ್​ವುಡ್ ಮತ್ತೊಬ್ಬ ಹಿರಿಯ ಕಲಾವಿದ ಬಿ.ಎಂ ಕೃಷ್ಣೇಗೌಡ ವಿಧಿವಶರಾಗಿದ್ದಾರೆ. ರಂಗಭೂಮಿ, ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದ ಕೃಷ್ಣೇಗೌಡರು ಕೊರೊನಾಗೆ ಬಲಿಯಾಗಿದ್ದಾರೆ.

ಕನ್ನಡದ ಹಿರಿಯ ನಟ ಕೃಷ್ಣೇಗೌಡ
ಕನ್ನಡದ ಹಿರಿಯ ನಟ ಕೃಷ್ಣೇಗೌಡ

80 ವರ್ಷ ವಯಸ್ಸಿನ ಹಿರಿಯ ನಟ ಇಂದು ನಿಧನರಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದ ಕೃಷ್ಣೇಗೌಡ, ಆಸ್ಪತ್ರೆಯಿಂದ ಡಿಚ್ಚಾರ್ಜ್ ಆಗಿ ಬಂದಿದ್ದರು. ಆದರೆ ಶ್ವಾಸಕೋಶದ ತೊಂದರೆಯಿಂದ ಕೃಷ್ಣೇಗೌಡ ಇಹಲೋಕ ತ್ಯಜಿಸಿದ್ದಾರೆ.

ದುರಂತ ಅಂದರೆ ಕೃಷ್ಣೇಗೌಡ ಅವರ ಮಗ ಕೂಡ ಒಂದು ತಿಂಗಳ ಹಿಂದೆ ಕೊರೊನಾಗೆ ಬಲಿಯಾಗಿದ್ದರು. ಈಗ ಪುತ್ರನ ಬಳಿಕ ಕೃಷ್ಣೇಗೌಡರು ಕೂಡ ಇಹಲೋಕ ತ್ಯಜಿಸಿದ್ದಾರೆ.

ಕನ್ನಡದ ಹಿರಿಯ ನಟ ಕೃಷ್ಣೇಗೌಡ
ಕನ್ನಡದ ಹಿರಿಯ ನಟ ಕೃಷ್ಣೇಗೌಡ

ಕರ್ನಾಟಕ ರಾಜ್ಯದ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ಎಮ್‌ ಕೃಷ್ಣೇಗೌಡ, ಕಲಾವಿದರು ಸಹ ಆಗಿದ್ದರು. ಅಬ್ಬೂರು ಜಯತೀರ್ಥ, ಆರ್.ನಾಗೇಶ್, ಶ್ರೀನಿವಾಸ ಪ್ರಭು, ಡಾ.ಬಿ.ವಿ.ರಾಜಾರಾಂ ಮುಂತಾದ ನಿರ್ದೇಶಕರ ನಾಟಕಗಳಲ್ಲಿ ಅಭಿನಯಿಸಿದ್ದರು.

ವಿಷ್ಣುವರ್ಧನ್ ಹಾಗು ಸಿತಾರ ಅಭಿನಯದ ‘ಹಾಲುಂಡ’ ತವರು ಚಿತ್ರದಲ್ಲಿ ‌ಕೃಷ್ಣೇಗೌಡ ನಟಿಸಿ ಗಮನ ಸೆಳೆದಿದ್ದರು. ಹಿರಿಯ ನಟ ಬಿ.ಎಂ.ಕೃಷ್ಣೇಗೌಡ ಅಗಲಿಕೆಗೆ ಕನ್ನಡ ಚಿತ್ರರಂಗದ ಗಣ್ಯರು, ನಟ-ನಟಿಯರು ಸಂತಾಪ ಸೂಚಿಸಿದ್ದಾರೆ.

Last Updated : May 25, 2021, 12:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.