ETV Bharat / sitara

ಕನ್ನಡಿಗರ ಭಾವನೆಗೆ ಧಕ್ಕೆ ತಂದ ಎಂಇಎಸ್‌ ಪುಂಡರ ವಿರುದ್ಧ ಚಂದನವನದ ಕಿಡಿ

author img

By

Published : Dec 16, 2021, 4:45 PM IST

ಮಹಾರಾಷ್ಟ್ರ ಏಕೀಕರಣ ಸಮಿತಿ (MES) ತೋರಿದ ದುರ್ವರ್ತನೆಗೆ ಕನ್ನಡದ ಸ್ಟಾರ್​ ನಟರು ಕಿಡಿ ಕಾರಿದ್ದಾರೆ. ಟ್ವೀಟ್​ ಮಾಡಿ ಆಕ್ರೋಶ ಹೊರಹಾಕಿರುವ ಅವರು ರಾಜ್ಯ ಸರ್ಕಾರ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.

Sandalwood Urge Govt to take serious action against who burnt Karnataka Flag

ಬೆಂಗಳೂರು: ಮಹಾರಾಷ್ಟ್ರದಲ್ಲಿ ಕನ್ನಡ ಧ್ವಜವನ್ನು ಸುಟ್ಟು ಹಾಕಿ ಕನ್ನಡಿಗರ ಭಾವನೆಗೆ ಧಕ್ಕೆ ತಂದಿರುವ ಎಂಇಎಸ್‌ ಪುಂಡರ ವಿರುದ್ಧ ಚಂದನವನ ಕಿಡಿ ಕಾರಿದೆ.

​ನಟ ಶಿವರಾಜ್​ಕುಮಾರ್, ಜಗ್ಗೇಶ್​, ದರ್ಶನ್​, ಗಣೇಶ್​, ದುನಿಯಾ ವಿಜಯ್​, ಪ್ರಜ್ವಲ್​ ದೇವರಾಜ್​, ವಿನೋದ್​ ಪ್ರಭಾಕರ್, ದ್ರುವ ಸರ್ಜಾ ಹಾಗೂ​ ನಟಿ ಮೇಘನಾ ಗಾವ್ಕಂರ್ ಸೇರಿದಂತೆ ಹಲವರು ಟ್ವೀಟ್​ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • ಅವರು ಸುಟ್ಟಿದ್ದು ಧ್ವಜವಲ್ಲ,
    ಕನ್ನಡಿಗರ ಸ್ವಾಭಿಮಾನದ ಕಿಚ್ಚು.
    ಭುವನೇಶ್ವರಿಯ ಮುಕುಟ ಎಂದೂ ಮುಕ್ಕಾಗದು.
    ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಲೇಬೇಕು ‌@CMofKarnataka

    ಜೈ ಕನ್ನಡಾಂಬೆ!! pic.twitter.com/YsITVrhQwe

    — Ganesh (@Official_Ganesh) December 16, 2021 " class="align-text-top noRightClick twitterSection" data=" ">

ಶಿವರಾಜ್​ ಕುಮಾರ್ ನಮ್ಮ ನಾಡ ಧ್ವಜ ಸುಟ್ಟವರಿಗೆ ತಕ್ಕ ಶಿಕ್ಷೆ ಆಗಲಿ. ನಿಜವಾದ ಕನ್ನಡಪರ ಹೋರಾಟಗಾರರನ್ನು ಬಿಡುಗಡೆಗೊಳಿಸಿ. ಜೈ ಕನ್ನಡ. ಜೈ ಕರ್ನಾಟಕ ಎಂದು ಟ್ವೀಟ್​ ಮಾಡಿದ್ದಾರೆ. ಇವರ ಜೊತೆ ಇಡೀ ಸ್ಯಾಂಡಲ್​ವುಡ್​ನ ನಟ ಮತ್ತು ನಟಿಯರು ಕೈಜೋಡಿಸಿದ್ದಾರೆ.

ನಮ್ಮ ಕರುನಾಡ ಧ್ವಜ ಸುಟ್ಟ ಹೇಡಿಗಳಿಗೆ ತಕ್ಕ ಶಿಕ್ಷೆಯಾಗಲೇಬೇಕು. ನಿಜವಾಗಿ ಕನ್ನಡ ಪರ ಹೋರಾಟ ಮಾಡುವವರನ್ನು ಬಿಡುಗಡೆಗೊಳಿಸಿ. ಕನ್ನಡ ತಾಯಿ ತಾಯ್ನಾಡು ವಿಷಯಕ್ಕೆ ಈ ರೀತಿ ಅಪಮಾನ ಮಾಡಿರುವವರಿಗೆ ತಕ್ಕ ಪಾಠ ಕಲಿಸಲೇಬೇಕು ಎಂದು ನಟ ದರ್ಶನ್ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಭಾಷೆ ಎನ್ನುವುದು ಒಂದು ನಾಡಿನ ಸ್ವಾಭಿಮಾನದ ಪ್ರತೀಕ. ಕನ್ನಡ ಧ್ವಜ ನಮ್ಮ ಸಂಸ್ಕೃತಿಯ ತಿಲಕ. ಕನ್ನಡಧ್ವಜವನ್ನು ಸುಟ್ಟಿದ್ದು ತೀವ್ರ ಬೇಸರ ತರಿಸಿದೆ. ಸರ್ಕಾರ ಈ ಕೂಡಲೇ ಇಂತಹ ನಾಡದ್ರೋಹಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಕನ್ನಡಿಗರ ಸ್ವಾಭಿಮಾನವನ್ನು ರಕ್ಷಿಸಬೇಕು ಎಂದು ನಟ ದ್ರುವ ಸರ್ಜಾ ಟ್ವೀಟ್​ ಮಾಡಿದ್ದಾರೆ.

ನಿರ್ದೇಶಕ ಆನಂದ್​ ರಾಮ್​ ಕೂಡ ಟ್ವೀಟ್​ ಮಾಡಿ ಎಂಇಎಸ್‌ ಪುಂಡರ ವಿರುದ್ಧ ಕಿಡಿ ಕಾರಿದ್ದಾರೆ. ನಮ್ಮ ಭಾಷೆ, ನಾಡು, ನೀರಿನ ಪರ ಧ್ವನಿಯಾಗಿರುವುದು​ ನಮ್ಮ ಕರ್ತವ್ಯ. ಬೆಳಗಾವಿ ಕರ್ನಾಟಕದ ಕಳಶ ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಕೊಲ್ಹಾಪುರದಲ್ಲಿ ಶಿವಸೇನಾ ಕಾರ್ಯಕರ್ತರು ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಕನ್ನಡ ಭಾವುಟವನ್ನು ಸುಟ್ಟು ಹಾಕಿದ್ದು ಸ್ಯಾಂಡಲ್​ವುಡ್​ ನಟರಷ್ಟೇ ಅಲ್ಲದೇ ರಾಜಕೀಯ ನಾಯಕರು ಟ್ವೀಟ್​ ಮಾಡಿ ಕಿಡಿ ಕಾರಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.