ETV Bharat / sitara

ಸ್ಯಾಂಡಲ್​ವುಡ್ ಹಿರಿಯ ನಟ ರಾಜೇಶ್ ಇನ್ನಿಲ್ಲ - ಸ್ಯಾಂಡಲ್​ವುಡ್ ನಟ ರಾಜೇಶ್

ಬಹು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್​ವುಡ್ ಹಿರಿಯ ನಟ ರಾಜೇಶ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

Sandalwood Senior actor Rajesh no more
ಸ್ಯಾಂಡಲ್​ವುಡ್ ಹಿರಿಯ ನಟ ರಾಜೇಶ್ ಇನ್ನಿಲ್ಲ
author img

By

Published : Feb 19, 2022, 7:53 AM IST

Updated : Feb 19, 2022, 9:09 AM IST

ಬೆಂಗಳೂರು: ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಯಾಂಡಲ್​ವುಡ್ ಹಿರಿಯ ನಟ ರಾಜೇಶ್ (87) ಶನಿವಾರ ಕೊನೆಯುಸಿರೆಳೆದಿದ್ದಾರೆ. ಶನಿವಾರ ಮುಂಜಾನೆ 2.30ರ ಸುಮಾರಿಗೆ ಇಹಲೋಕವನ್ನು ತ್ಯಜಿಸಿದ್ದಾರೆ ಎಂದು ರಾಜೇಶ್ ಅವರ ಅಳಿಯ ಮತ್ತು ನಟ ಅರ್ಜುನ್ ಸರ್ಜಾ ಮಾಹಿತಿ ನೀಡಿದ್ದಾರೆ.

ಹಿರಿಯ ನಟ ರಾಜೇಶ್ ಪಾರ್ಥಿವ ಶರೀರ ರವಾನೆ

ಬಹು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ರಾಜೇಶ್, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ವಿದ್ಯಾರಣ್ಯಪುರದ ನಿವಾಸದಲ್ಲಿ ರಾಜೇಶ್ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಅರ್ಜುನ್ ಸರ್ಜಾ ಹೇಳಿದ್ದಾರೆ.

ಮಧ್ಯಾಹ್ನ 3:30ರ ನಂತರ ಹೆಬ್ಬಾಳ ಚಿತಾಗಾರದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಇವರು ನಟನೆ ಜೊತೆ ಶಕ್ತಿ ನಾಟಕ‌ ಮಂಡಳಿ‌ ಕಟ್ಟಿದ್ದ ರಂಗಕರ್ಮಿ. ನಿರುದ್ಯೋಗಿ ಬಾಳು, ಬಡವನ‌ ಬಾಳು, ವಿಷ ಸರ್ಪ, ನಂದಾ ದೀಪ, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿದ್ದರು. ಜೊತೆಗೆ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ ಕಲಾತಪಸ್ವಿ ಇವರು.

ಇವರ ಅಗಲಿಕೆಗೆ ಚಿತ್ರ ರಸಿಕರು ಹಾಗೂ ಗಣ್ಯರು ಕಂಬನಿ ಮಿಡಿದಿದ್ದಾರೆ.

ಇದನ್ನು ಓದಿ:ತಿರುಮಲದಲ್ಲಿ ಗೋವಿಂದಾನಂದ ಯಾತ್ರೆಗೆ ಪೊಲೀಸರ ಅಡ್ಡಿ.. ಹನುಮ ಜನ್ಮಭೂಮಿ ವಿವಾದ ಮತ್ತಷ್ಟು ಜಟಿಲ

Last Updated : Feb 19, 2022, 9:09 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.