ETV Bharat / sitara

ಸ್ಯಾಂಡಲ್​​ವುಡ್ ನಿರ್ಮಾಪಕರಿಗೆ ಪೈರಸಿ ಆತಂಕ: ಪೊಲೀಸ್ ಕಮಿಷನರ್​ಗೆ ದೂರು - ಪೈರಸಿ

ಕಷ್ಟಪಟ್ಟು ನಿರ್ಮಿಸಿದ ಚಿತ್ರಗಳು ಪೈರಸಿ ಆಗುವ ಆತಂಕ ನಿರ್ಮಾಪಕರನ್ನು ಕಾಡುತ್ತಿದೆ. ಹೀಗಾಗಿ, ನಿರ್ಮಾಪಕ ಸಂಘದ ಅಧ್ಯಕ್ಷ ಪ್ರವೀಣ್ ನೇತೃತ್ವದ ನಿಯೋಗ ಆಯುಕ್ತ ಕಮಲ್ ಪಂತ್‌ ಅವರನ್ನು ಭೇಟಿ ಮಾಡಿ ಸೂಕ್ತಕ್ರಮ ಕೈಗೊಳ್ಳಬೇಕೆಂದು ದೂರು ನೀಡಿದೆ.

Sandalwood producer register complaint against Piracy
ಸ್ಯಾಂಡಲ್​​ವುಡ್ ನಿರ್ಮಾಪಕರಿಗೆ ಪೈರಸಿ ಭಯ
author img

By

Published : Oct 1, 2021, 5:54 PM IST

ಬೆಂಗಳೂರು: ಕಳೆದೆರಡು ದಿನಗಳ ಹಿಂದಷ್ಟೇ ಕೋಟಿಗೊಬ್ಬ-3 ಚಿತ್ರವನ್ನು ಪೈರಸಿ ಮಾಡುವುದಾಗಿ ಸಾಮಾಜಿಕ‌ ಜಾಲತಾಣಗಳಲ್ಲಿ ಬಂದಿದ್ದ ಬೆದರಿಕೆ ಸಂದೇಶ ಹಿನ್ನೆಲೆಯಲ್ಲಿ ನಿರ್ಮಾಪಕ ಸೂರಪ್ಪಬಾಬು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಬೆನ್ನಲ್ಲೇ ಎಚ್ಚೆತ್ತಿರುವ ಸ್ಯಾಂಡಲ್‌ವುಡ್ ನಿರ್ಮಾಪಕ ಸಂಘ, ಕನ್ನಡ ಚಿತ್ರಗಳು ಪೈರಸಿ ಆಗುವುದನ್ನು ತಡೆಯಬೇಕೆಂದು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ‌.

ಥಿಯೇಟರ್​​ಗಳಲ್ಲಿ ಪೂರ್ಣಾ ಪ್ರಮಾಣದಲ್ಲಿ ಆಸನಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದು ಅಕ್ಟೋಬರ್‌ನಲ್ಲಿ ಸಾಲು-ಸಾಲು ಚಿತ್ರಗಳು ತೆರೆಕಾಣಲು ಸಜ್ಜಾಗಿವೆ.‌ ಪ್ರಮುಖವಾಗಿ ಕೋಟಿಗೊಬ್ಬ-3, ಸಲಗ, ಭಜರಂಗಿ-2 ಸೇರಿದಂತೆ ಇನ್ನಿತರ ಬಿಗ್ ಬಜೆಟ್‌ ಸಿನಿಮಾಗಳು ರಿಲೀಸ್ ಆಗುತ್ತಿವೆ. ಕಷ್ಟಪಟ್ಟು ನಿರ್ಮಿಸಿದ ಚಿತ್ರಗಳು ಪೈರಸಿ ಆಗುವ ಆತಂಕ ನಿರ್ಮಾಪಕರನ್ನು ಕಾಡುತ್ತಿದೆ.

ಈ ಸಂಬಂಧ ಮಾತನಾಡಿದ ಸಂಘದ ಅಧ್ಯಕ್ಷ ಪ್ರವೀಣ್, ಇಂದಿನಿಂದ ಥಿಯೇಟರ್​​ಗಳಲ್ಲಿ ಶೇ.100ರಷ್ಟು ಪೂರ್ಣಾವಧಿ ಆಸನಕ್ಕೆ ಅವಕಾಶವಿದೆ. ಹೀಗಾಗಿ ಈ ತಿಂಗಳಿಂದ ಸಾಲು-ಸಾಲು ಬಿಗ್ ಬಜೆಟ್ ಚಿತ್ರಗಳು ರಿಲೀಸ್ ಆಗುತ್ತಿವೆ. ಕೋಟ್ಯಂತರ ರೂಪಾಯಿ ಹಾಕಿ ನಿರ್ಮಾಪಕರು ಚಿತ್ರ ನಿರ್ಮಾಣ ಮಾಡುತ್ತಾರೆ. ತೆರೆಗೆ ಬರಲು ಕೆಲದಿನಗಳು ಬಾಕಿ ಇರಬೇಕಾದರೆ ಕಿಡಿಗೇಡಿಗಳು ಸೋಷಿಯಲ್ ಮೀಡಿಯಾದಲ್ಲಿ ಪೈರಸಿ ಮಾಡುತ್ತಾರೆ‌‌.‌ ಇದರಿಂದ ಎಷ್ಟೋ ನಿರ್ಮಾಪಕರು ಬೀದಿಗೆ ಬೀಳುತ್ತಾರೆ‌. ಸಂಪೂರ್ಣವಾಗಿ ಪೈರಸಿ ತಡೆಯುವ ನಿಟ್ಟಿನಲ್ಲಿ ಇಂದು ಪೊಲೀಸ್ ಕಮಿಷನರ್ ಗೆ ದೂರು ನೀಡಿದ್ದೇವೆ ಎಂದರು.

ನಿರ್ಮಾಪಕ ಕೆ.ಮಂಜು ಮಾತನಾಡಿ, ಪೊಲೀಸ್ ಕಮಿಷನರ್ ಕಮಲ್‌ಪಂತ್ ಅವರು ಪ್ರತ್ಯೇಕ ಸ್ವ್ಕಾಡ್ ಟೀಮ್ ಮಾಡಿ ಪೈರಸಿ ಮಾಡುವ ಕಿಡಿಗೇಡಿಗಳನ್ನು ಬಂಧಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಆಶ್ವಾಸನೆ ನೀಡಿದ್ದಾರೆ. ಸ್ವ್ಕಾಡ್ ಟೀಮ್ ರಚನೆಯಿಂದ ನಿರ್ಮಾಪಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ತಿಂಗಳಲ್ಲಿ ನಾಲ್ಕೈದು ಬಿಗ್ ಬಜೆಟ್ ಚಿತ್ರಗಳು ರಿಲೀಸ್ ಆಗಲಿವೆ. ದಯವಿಟ್ಟು ಚಿತ್ರಮಂದಿರಗಳಿಗೆ ಬಂದು ಸಿನಿಮಾ ನೋಡಿ ಎಂದು ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.