ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಭಾರತೀಯ ಸಿನಿಮಾ ರಂಗದಲ್ಲಿ ಸದ್ಯಕ್ಕೆ ಸದ್ದು ಮಾಡುತ್ತಿರುವ ಸಿನಿಮಾ 'ಶಕೀಲಾ'. ಇಂದ್ರಜಿತ್ ಲಂಕೇಶ್ ನಿರ್ದೇಶನದ ರೀಚಾ ಚಡ್ಡಾ ಹಾಗೂ ಪಂಕಜ್ ತ್ರಿಪಾಠಿ ಅಭಿನಯದ ಶಕೀಲಾ ನಿನ್ನೆಯಷ್ಟೇ ದೇಶಾದ್ಯಂತ ತೆರೆ ಕಂಡಿತ್ತು. 90ರ ದಶಕದಲ್ಲಿ ದಕ್ಷಿಣ ಭಾರತದಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡಿದ ನಟಿ ಶಕೀಲಾ ಜೀವನಾಧಾರಿತ ಕಥೆ ಆಧರಿಸಿರುವ ಈ ಸಿನಿಮಾ ಸಿನಿಮಾ ಪ್ರೇಕ್ಷಕರ ಹೃದಯ ಕದಿಯುವಲ್ಲಿ ಯಶಸ್ವಿಯಾಗಿದೆ.
ಇದನ್ನೂ ಓದಿ: ರಾತ್ರೋ ರಾತ್ರಿ ಡಾ. ವಿಷ್ಣುವರ್ಧನ್ ಪ್ರತಿಮೆ ಧ್ವಂಸಗೊಳಿಸಿದ ಕಿಡಿಗೇಡಿಗಳು
ಇದೀಗ ಶಕೀಲಾ ಸಿನಿಮಾವನ್ನು ಸ್ಯಾಂಡಲ್ವುಡ್ ನಟ-ನಟಿಯರು ನೋಡಿ ಮೆಚ್ಚಿಕೊಂಡಿದ್ದಾರೆ. ನಟ ಡಾರ್ಲಿಂಗ್ ಕೃಷ್ಣ, ಲಾಸ್ಟ್ ಬಸ್ ಸಿನಿಮಾ ಖ್ಯಾತಿಯ ಅವಿನಾಶ್, ನಟಿ ಮಿಲನ ನಾಗರಾಜ್ ,ಹಿರಿಯ ನಟ ಸುಚೇಂದ್ರ ಪ್ರಸಾದ್, ಸಂಗೀತ ನಿರ್ದೇಶಕ ವೀರ್ ಸಮರ್ಥ್ ಸೇರಿದಂತೆ ಹಲವಾರು ಸೆಲಬ್ರಿಟಿಗಳು ಶಕೀಲಾ ಬಯೋಪಿಕ್ ನೋಡಿ ಮೆಚ್ಚಿಕೊಂಡಿದ್ದಾರೆ. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಮಾತನಾಡಿ, ಹೆಣ್ಣು ಮಕ್ಕಳು ಈ ಶಕೀಲಾ ಜೀವನ ಕಥೆಯ ಸಿನಿಮಾ ನೋಡಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಹಿರಿಯ ನಟ ಸುಚೇಂದ್ರ ಪ್ರಸಾದ್ ಮಾತನಾಡಿ, ಇಂದ್ರಜಿತ್ ಲಂಕೇಶ್ ನಿರ್ದೇಶನದ ಸಿನಿಮಾದಲ್ಲಿ ಶಕೀಲಾ ಸಿನಿಮಾ ನನಗೆ ಬಹಳ ಮನಮುಟ್ಟಿತು. ಈ ಸಿನಿಮಾವನ್ನು ಬಹಳ ಅದ್ಭುತವಾಗಿ ತೆರೆ ಮೇಲೆ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೊರೊನಾ ಸಮಯದಲ್ಲಿ ಸಿನಿಮಾ ಬಿಡುಗಡೆ ಮಾಡುವ ಸಾಹಸ ಮಾಡಿರುವ ನಿರ್ದೇಶಕರಿಗೆ ಒಳ್ಳೆಯದಾಗಲಿ ಎಂದು ನಟ ಅವಿನಾಶ್ ಶುಭ ಕೋರಿದರು.