ಕೊರೊನಾ ಸಂಕಷ್ಟಕ್ಕೆ ಸಿಲುಕಿ ನಲುಗಿದ ಚಿತ್ರಮಂದಿರಗಳು ಅಕ್ಟೋಬರ್ 15 ರಿಂದ ಮತ್ತೆ ಕಾರ್ಯಾರಂಭ ಮಾಡಿದೆ. ಇದುವರೆಗೂ ಹೊಸ ಸಿನಿಮಾಗಳು ಬಿಡುಗಡೆಯಾಗಗಿದ್ದರೂ ಲಾಕ್ಡೌನ್ಗೂ ಮುನ್ನ ಬಿಡುಗಡೆಯಾದ ಸಿನಿಮಾಗಳು ಮರುಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿವೆ.
- " class="align-text-top noRightClick twitterSection" data="">
ಚಿತ್ರಮಂದಿರಗಳು ತೆರೆದರೂ ಜನರು ಮಾತ್ರ ಚಿತ್ರಮಂದಿರಗಳತ್ತ ಸುಳಿಯುತ್ತಿಲ್ಲ. ಹೀಗಾಗಿ ನಿರ್ದೇಶಕ ಯೋಗಿ ಮತ್ತು ಕೆಜಿಎಫ್ ಸಿನಿಮಾದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಸೇರಿ ಕಿರುಚಿತ್ರವೊಂದನ್ನು ತಯಾರಿಸಿದ್ದಾರೆ. ನಿರ್ಮಾಪಕರು, ನಿರ್ದೇಶಕರು, ನಟ, ನಟಿಯರು, ಅಭಿಮಾನಿಗಳು ಇಲ್ಲದಿರುವ ಚಿತ್ರಮಂದಿರಗಳನ್ನು ಗಮನದಲ್ಲಿಟ್ಟುಕೊಂಡು ಪ್ರೇಕ್ಷಕ ಪ್ರಭುಗಳು ಮತ್ತೆ ಚಿತ್ರಮಂದಿರಗಳಿಗೆ ಬರಲಿ ಎಂಬ ಉದ್ದೇಶದಿಂದ ಈ ಭಾವನಾತ್ಮಕ ಕಿರುಚಿತ್ರವನ್ನು ಚಿತ್ರೀಕರಣ ಮಾಡಲಾಗಿದೆ. ಖುಷಿ ಖುಷಿಯಾಗಿ, ಬಂಗಾರ ಸನ್ ಆಫ್ ಬಂಗಾರದ ಮನುಷ್ಯ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಯೋಗಿ , ಈ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
ಈ ಕಿರುಚಿತ್ರದಲ್ಲಿ 8 ತಿಂಗಳಿನಿಂದ, ಸಿನಿಮಾ ಪ್ರದರ್ಶನಗಳು ಇಲ್ಲದೆ, ಅಭಿಮಾನಿಗಳ ಸಂಭ್ರಮ ಇಲ್ಲದೆ ಚಿತ್ರಮಂದಿರಗಳು ಹೇಗಿವೆ ಎಂಬುದನ್ನು ತೋರಿಸಲಾಗಿದೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಪುನೀತ್ ರಾಜ್‍ಕುಮಾರ್, ಡಾಲಿ ಧನಂಜಯ್, ಗಣೇಶ್, ಶ್ರೀಮುರಳಿ, ದುನಿಯಾ ವಿಜಯ್ ಸೇರಿದಂತೆ ಎಲ್ಲಾ ಕಲಾವಿದರು ಚಿತ್ರರಂಗದ ಪರವಾಗಿ, ಪ್ರೇಕ್ಷಕ ಪ್ರಭುಗಳು ಮತ್ತೆ ಚಿತ್ರಮಂದಿರಗಳಿಗೆ ಬನ್ನಿ ಎಂದು ಪ್ರೀತಿಯ ಆಹ್ವಾನ ನೀಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಅಭಿಮಾನಿಗಳ ಹಾರೈಕೆ ಎಷ್ಟು ಮುಖ್ಯ ಎಂಬುದು ಈ ಕಿರುಚಿತ್ರದಲ್ಲಿ ತೋರಿಸಲಾಗಿದೆ.
ಈ ಕಿರುಚಿತ್ರದಲ್ಲಿ ಗಿರೀಶ್ ಜೆಟ್ಟಿ ಥಿಯೇಟರ್ ಮ್ಯಾನೇಜರ್ ಆಗಿ ಕಾಣಿಸಿಕೊಂಡಿದ್ದು, ಚಿತ್ರರಂಗ ಹಾಗೂ ಅಭಿಮಾನಿಗಳ ಶಕ್ತಿ ಏನು ಎಂಬುದನ್ನು ಸಂಭಾಷಣೆಕಾರ ಮಾಸ್ತಿ ತಮ್ಮ ಡೈಲಾಗ್ ಮೂಲಕ ಹೇಳಿದ್ದಾರೆ. ಕ್ಯಾಮರಾ ಮ್ಯಾನ್ ಶೀಷಾ ಅಷ್ಟೇ ಚೆನ್ನಾಗಿ ಚಿತ್ರೀಕರಿಸಿದ್ದಾರೆ.ಕೆಜಿಎಫ್ ಕಾರ್ಯಕಾರಿ ನಿರ್ಮಾಪಕರಾಗಿರುವ ಕಾರ್ತಿಕ್ ಹಾಗೂ ಯೋಗಿ ಜೊತೆ ಸೇರಿ ಈ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ಸದ್ಯ ಈ ಕಿರುಚಿತ್ರ ಕನ್ನಡ ಚಿತ್ರರಂಗದಲ್ಲಿ ಸಖತ್ ಸದ್ದು ಮಾಡುತ್ತಿದೆ.