ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರಾಗಿರುವ ಸ್ಯಾಂಡಲ್ವುಡ್ ನಟಿ ಶ್ವೇತಾ ಶ್ರೀವಾತ್ಸವ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 35ನೇ ವಸಂತಕ್ಕೆ ಕಾಲಿಟ್ಟಿರುವ ಸಿಂಪಲ್ ಬೆಡಗಿಗೆ ಅಭಿಮಾನಿಗಳು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ.
‘ಪ್ರಾರ್ಥನೆ’ ಚಿತ್ರದಲ್ಲಿ ಪುಟ್ಟ ಪಾತ್ರ ಮಾಡುವ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟ ಶ್ವೇತಾ, ನಂತರ 2013ರಲ್ಲಿ ಸಿಂಪಲ್ ಸುನಿ ನಿರ್ದೇಶನದ ‘ಸಿಂಪಲ್ಲಾಗ್ ಒಂದು ಲವ್ ಸ್ಟೋರಿ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಜೊತೆ ನಟಿಸುವ ಮೂಲಕ ನಾಯಕಿಯಾಗಿ ಪ್ರಮೋಷನ್ ಪಡೆದರು. ಈ ಸಿನಿಮಾ ಮೂಲಕ ಶ್ವೇತಾ, ಸಿನಿಪ್ರಿಯರ ಗಮನ ಸೆಳೆದಿದ್ದರು. ನಂತರ ಸೈಬರ್ ಯುಗದೊಳ್, ಫೇರ್ ಆ್ಯಂಡ್ ಲವ್ಲಿ, ಆತ್ಮಸಾಕ್ಷಿ ಸಿನಿಮಾಗಳಲ್ಲಿ ಅವರು ನಟಿಸಿದರೂ ಸಿನಿಮಾ ಅಂತ ಯಶಸ್ಸು ಗಳಿಸಲಿಲ್ಲ. ನಂತರ ಅವರಿಗೆ ಬ್ರೇಕ್ ನೀಡಿದ್ದು 'ಕಿರಗೂರಿನ ಗಯ್ಯಾಳಿಗಳು' ಸಿನಿಮಾ. ನಂತರ ಅವರು ಗರ್ಭಿಣಿಯಾಗಿದ್ದರಿಂದ ನಟನೆಯಿಂದ ದೂರ ಸರಿದಿದ್ದರು.
ಬಳಿಕ ಶ್ವೇತಾ ತಮ್ಮ ಮಗಳೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. ಮಗಳು ಅಶ್ಮಿತಾ ಜೊತೆ ಕಲರ್ಫುಲ್ ಫೋಟೋಶೂಟ್ ಮಾಡುತ್ತಿರುತ್ತಾರೆ. ಇತ್ತೀಚೆಗೆ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಯಶೋದಾಕೃಷ್ಣನ ವೇಷ ಭೂಷಣ ತೊಟ್ಟು ಮುದ್ದಾದ ಮಗುವಿನ ಜೊತೆ ಫೋಟೋಶೂಟ್ ಮಾಡಿಸಿದ್ರು.
ಸದ್ಯ ಶ್ವೇತಾ ಶ್ರೀವಾಸ್ತವ್ ಕೆಎಎಸ್ ಅಧಿಕಾರಿ ಪಾತ್ರದಲ್ಲಿ ನಟಿಸಿರುವ 'ಹೋಪ್' ಸಿನಿಮಾದ ಚಿತ್ರೀಕರಣ ಮುಗಿದಿದೆ. ಚಿತ್ರತಂಡ ಇತ್ತೀಚೆಗೆ ಮೇಕಿಂಗ್ ವಿಡಿಯೋ ರಿವೀಲ್ ಮಾಡಿತ್ತು.
ಕೆಲದಿನಗಳ ಹಿಂದೆ ತಮ್ಮ ಪತಿ ಅಮಿತ್ ಹುಟ್ಟುಹಬ್ಬವನ್ನು ಮನೆಯಲ್ಲಿ ಕುಟುಂಬ ಹಾಗೂ ಸ್ನೇಹಿತರ ಜೊತೆ ಆಚರಣೆ ಸಿಂಪಲ್ ಸುಂದರಿ, ಇದೀಗ ತಮ್ಮ 35ನೇ ವರ್ಷದ ಬರ್ತ್ಡೇ ಸಂಭ್ರಮದಲ್ಲಿದ್ದಾರೆ.
ಇದನ್ನೂ ಓದಿ: ಪರಿಸರವಾದಿ ಡಿ.ವಿ. ಗಿರೀಶ್ ಮೇಲಿನ ಹಲ್ಲೆ ಪ್ರಕರಣ: ಘಟನೆ ಖಂಡನೀಯ ಎಂದ ನಟಿ ರಮ್ಯಾ