ETV Bharat / sitara

ತಾಯಿ ಗರ್ಭದಲ್ಲೂ ಹೆಣ್ಣಿಗೆ ರಕ್ಷಣೆಯಿಲ್ಲದಂತಾಗಿದೆ... ವಿದ್ಯಾರ್ಥಿನಿ ಸಾವಿಗೆ ನ್ಯಾಯ ಕೇಳಿದ ತಾರೆಯರು! - ರಾಯಚೂರು

ರಾಯಚೂರಿನ ವಿದ್ಯಾರ್ಥಿನಿ ಸಾವಿಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಇಡೀ ಮಾನವ ಕುಲವೇ ತಲೆ ತಗ್ಗಿಸುವಂತ ಹೀನ ಕೃತ್ಯಕ್ಕೆ ಕಾರಣವಾದವರಿಗೆ ಉಗ್ರ ಶಿಕ್ಷೆ ನೀಡುವಂತೆ ಅಭಿಯಾನ ಶುರುವಾಗಿದೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ
author img

By

Published : Apr 19, 2019, 4:47 PM IST

Updated : Apr 21, 2019, 1:29 PM IST

ರಾಯಚೂರಿನ ಎಂಜಿನಿಯರಿಂಗ್​ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿಗೆ ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಹೀನ ಕೃತ್ಯಕ್ಕೆವೆಸಗಿರುವ ದುರುಳರಿಗೆ ಉಗ್ರಶಿಕ್ಷೆ ನೀಡಬೇಕೆಂದು ಒಕ್ಕೂರಲಿನಿಂದ ಆಗ್ರಹಿಸಲಾಗುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಂತೂ ಸಂತಾಪ ಸೂಚಿಸುತ್ತಿರುವ ಜನರು, ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಇದೀಗ ಕನ್ನಡ ಚಿತ್ರರಂಗದ ತಾರೆಯರು ಇದಕ್ಕೆ ದನಿಗೂಡಿಸಿದ್ದು, ಟ್ವಿಟ್ಟರ್​ ಹಾಗೂ ಫೇಸ್​ಬುಕ್​ನಲ್ಲಿ ತೀವ್ರ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಟ್ವಿಟ್ಟರ್​ನಲ್ಲಿ ಸಂತಾಪ ಸೂಚಿಸಿರುವ ನಟಿ ಹರ್ಷಿಕಾ ಪೂಣಚ್ಚ, 'ಈ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕು, ಇಂಥ ಘೋರ ಕೃತ್ಯ ವೆಸಗಿದವರಿಗೆ ಈಗಲೇ ಶಿಕ್ಷೆಯಾಗಬೇಕು.ರಾಯಚೂರಿನ ಜನರೊಂದಿಗೆ ನಾನಿದ್ದೇನೆ ಎಂದು ಧೈರ್ಯ ತುಂಬಿದ್ದಾರೆ.

  • ಈ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕು 🙏
    ಇಂಥ ಘೋರ ಕೃತ್ಯ ವೆಸಗಿದವರಿಗೆ ಈಗಲೇ ಶಿಕ್ಷೆಯಾಗಬೇಕು 😓
    ರೈಚೂರಿನ ಜನರೊಂದಿಗೆ ನಾನಿದ್ದೇನೆ 🙏#justiceformadhu😢 #rip ಮಧು https://t.co/Ec1QfzekY1

    — Harshika Poonacha (@actressharshika) April 19, 2019 " class="align-text-top noRightClick twitterSection" data=" ">

ನಟಿ ಅಪೇಕ್ಷಾ ಪುರೋಹಿತ್, 'ಹೆಣ್ಣು ಮಗಳು ಯಾಕೆ ಉಸಿರಾಡಲು ಸಾಧ್ಯವಾಗುತ್ತಿಲ್ಲ. ಏಕೆ ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಒಂದು ಹೆಣ್ಣಿಗೆ ಮನುಷ್ಯರ ಮಧ್ಯೆಯಷ್ಟೆಯಲ್ಲ ತಾಯಿಯ ಗರ್ಭದಲ್ಲಿಯೂ ಸುರಕ್ಷಿತ ಇಲ್ಲವಾದಂತಾಗಿದೆ' ಎಂದು ಆತಂಕ ಕಳವಳ ವ್ಯಕ್ತಪಡಿಸಿದ್ದಾರೆ.

'ಮನುಷ್ಯ ಕುಲವೇ ತಲೆ ತಗ್ಗಿಸುವಂಥ ಕೆಲಸ ಮಾಡಿದ ನೀಚರಿಗೆ ಸರಿಯಾದ ಶಿಕ್ಷೆ ಆಗಲಿ... ನ್ಯಾಯ ಸಿಗಲಿ ಅವರಿಗೆ...ಎಂದು ನೀನಾಸಂ ಸತೀಶ್ ಆಗ್ರಹಿಸಿದ್ದಾರೆ.

  • Where is the humanity? According to sources Madhu a Raichur ,engineering student was raped, murdered.. this truly breaks my heart..how many more like this beforeit stops? #JusticeForMadhu ..Hope justice is given.. and this comes to an end..😔

    — Rashmika Mandanna (@iamRashmika) April 19, 2019 " class="align-text-top noRightClick twitterSection" data=" ">

ನಟಿ ರಶ್ಮಿಕಾ ಮಂದಣ್ಣ ಅವರು ಕೂಡ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಕೊಡಿ ಎಂದು ಆಗ್ರಹಿಸಿದ್ದಾರೆ. ಇಂದು ಮಾನವೀಯತೆ ಎಲ್ಲಿದೆ ? ಎಂದು ಟ್ವಿಟ್ಟರ್​ನಲ್ಲಿ ಪ್ರಶ್ನಿಸಿರುವ ಅವರು, ನಿಮಗೆ ಇನ್ನೂ ಎಷ್ಟು ಬಲಿ ಬೇಕು ಎಂದಿದ್ದಾರೆ.ವಿದ್ಯಾರ್ಥಿನಿ ಸಾವಿನ ಸುದ್ದಿ ಕೇಳಿ ಹೃದಯ ಒಡೆದು ಹೋಯಿತು. ಈಕೆಯ ಸಾವಿಗೆ ನ್ಯಾಯ ಸಿಗಲಿ, ಇಂತಹ ಘಟನೆಗಳು ಇಲ್ಲಿಗೆ ಕೊನೆಯಾಗಲಿ ಎಂದಿದ್ದಾರೆ.

Intro:Body:Conclusion:
Last Updated : Apr 21, 2019, 1:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.