ಕಿರುತೆರೆಯಿಂದ ಬಣ್ಣದ ಬದುಕು ಆರಂಭಿಸಿ ಸದ್ಯ ಸ್ಯಾಂಡವುಡ್ವುಡ್ನಲ್ಲಿ ತನ್ನದೇ ಐಡೆಂಟಿಟಿಯನ್ನ ಕ್ರಿಯೇಟ್ ಮಾಡಿಕೊಂಡಿರುವ ಅದಿತಿ ಪ್ರಭುದೇವ ಗುಡ್ ನ್ಯೂಸ್ ನೀಡಿದ್ದಾರೆ.
ನಮ್ ಹುಡ್ಗಿ ಶ್ಯಾನೇ ಟಾಪಾಗವ್ಳೆ ಎಂದು ಎಲ್ಲರ ಮನದಲ್ಲಿ ಕಾಲೂರಿದ್ದ ಅದಿತಿ ಪ್ರಭುದೇವ, ಸದ್ದಿಲ್ಲದೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಮದುವೆಯಾಗಲಿರುವ ತಮ್ಮ ಹುಡುಗನ ಜೊತೆಗೆ ಇರುವ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ದಾವಣಗೆರೆ ಮೂಲದ ಯಶಸ್ ಎಂಬ ಉದ್ಯಮಿಯ ಕೈಹಿಡಿಯಲಿದ್ದು ಒಬ್ಬರಿಗೊಬ್ಬರು ಕೈಹಿಡಿದುಕೊಂಡಿರುವ ಫೋಟೋವನ್ನು ನಟಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಪ್ತರ ಪ್ರಕಾರ, ನಿನ್ನೆ ಹೊಳೆನರಸೀಪುರದಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಈ ಕಾರ್ಯಕ್ರಮಕ್ಕೆ ಕೆಲವು ಆಪ್ತರಿಗಷ್ಟೇ ಆಹ್ವಾನ ನೀಡಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಯಶಸ್ ಕಾಫಿ ಎಸ್ಟೇಟ್ ಹಾಗೂ ಬಿಲ್ಡರ್ ಕೂಡ ಹೌದಂತೆ. ತಂದೆ-ತಾಯಿ ನೋಡಿದ ಹುಡುಗನ ಜೊತೆ ನಿನ್ನೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಸದ್ಯ ಅದಿತಿ ಪ್ರಭುದೇವ ಎಂಗೇಜ್ಮೆಂಟ್ ಮಾಡಿಕೊಂಡಿರುವ ಹುಡುಗನ ಜೊತೆ ಫೋಟೋ ಹಾಕಿಕೊಂಡು, 'ಒಂದು ಕನಸಿನಂತೆ ಈ ಕನಸು ನನಸಾಯಿತು’ ಎಂದು ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಅದಿತಿ ಕೈಯಲ್ಲಿರುವ ಉಂಗುರ ಹೈಲೈಟ್ ಆಗಿದೆ.
ಇನ್ನು ಅದಿತಿ ಹಾಕಿರುವ ಫೋಟೋಗೆ ಅಭಿಮಾನಿಗಳು ಶುಭಾಶಯ ಹೇಳುತ್ತಿದ್ದಾರೆ. ಇತ್ತೀಚೆಗೆ ಅದಿತಿ ಪ್ರಭುದೇವ ಅಭಿನಯದ ಆನ ಸಿನಿಮಾ ತೆರೆಗೆ ಬಂದಿತ್ತು. ಆದರೆ, ಸ್ಟಾರ್ ಸಿನಿಮಾಗಳ ಮಧ್ಯೆ, ಅದಿತಿ ಪ್ರಭುದೇವ ನಟನೆಯ ಆನ ಸಿನಿಮಾಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ಇದನ್ನೂ ಓದಿ: Watch Video... ಹೈ ಹೀಲ್ಸ್ ಧರಿಸಿ ಬ್ಯಾಲೆನ್ಸ್ ಕಳೆದುಕೊಂಡ ಮಲೈಕಾ: ನಟಿ ರಕ್ಷಿಸಿದ ಸಿಬ್ಬಂದಿ