ಕೊರೊನಾ ಹೆಮ್ಮಾರಿಯಿಂದ ಇಡೀ ದೇಶವೇ ತತ್ತರಿಸಿ ಹೋಗಿದೆ. ಇದೆ ಎಫೆಕ್ಟ್ ಜನ ಸಾಮಾನ್ಯರು ಅಲ್ಲದೇ, ರಾಜ್ಯದಲ್ಲಿರುವ ಮೃಗಾಲಯದ ಪ್ರಾಣಿಗಳ ಮೇಲೆ ಆಗಿತ್ತು. ಹೀಗಾಗಿ ನಟ ದರ್ಶನ್ ಕರ್ನಾಟಕದಲ್ಲಿರುವ 9 ಮೃಗಾಲಯದ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಲು ನೀಡಿದ ಕರೆಗೆ ಅಭೂತಪೂರ್ವ ಬೆಂಬಲ ಸಿಕ್ಕಿದೆ.
ಅಭಿಮಾನಿಗಳು ರಾಜ್ಯದ ಜನತೆ ಸ್ಪಂದಿಸಿದ್ದು, ಪ್ರಾಣಿಗಳನ್ನು ದತ್ತು ಪಡೆಯಲು ಮುಂದೆ ಬರ್ತಾ ಇದ್ದಾರೆ. ಇದರಿಂದ ಜೂಗಳಿಗೆ ಭರಪೂರ ಹಣ ಹರಿದು ಬರುತ್ತಿದೆ. ನಾಲ್ಕೇ ದಿನದಲ್ಲಿ ಬರೋಬ್ಬರಿ 70 ಲಕ್ಷ ರೂ. ಹೆಚ್ಚು ಸಂಗ್ರಹಗೊಂಡಿದೆ.
ನಾಲ್ಕು ದಿನಗಳಲ್ಲಿ ಸುಮಾರು ಎರಡು ಸಾವಿರಕ್ಕೂ ಅಧಿಕ ಜನರಿಂದ ಪ್ರಾಣಿಗಳ ದತ್ತು ಸ್ವೀಕಾರ ಮಾಡಲಾಗಿದೆ. ರಾಜ್ಯದ ಜೂಗಳಿಗೆ 4 ದಿನಗಳಲ್ಲಿ ಹರಿದು ಬಂದ ಮೊತ್ತ ಬರೋಬ್ಬರಿ 70 ಲಕ್ಷ 33 ಸಾವಿರ ರೂಪಾಯಿ.ಇದೇ ಜೂನ್ 5ರಂದು ಲಾಕ್ಡೌನ್ನಿಂದ ಕರ್ನಾಟಕದ 9 ಜೂಗಳಲ್ಲೂ ಸಮಸ್ಯೆಗಳು ಉಂಟಾಗಿದ್ದು, ಪ್ರಾಣಿಗಳ ದತ್ತು ಪಡೆಯುವ ಮೂಲಕ ನೆರವಾಗಿ ಎಂದು ವಿಡಿಯೋ ಮೂಲಕ ದರ್ಶನ್ ಮನವಿ ಮಾಡಿದರು.
ಜೂನ್ 5ರಂದು 8.65 ಲಕ್ಷ, ಜೂನ್ 6 - 22.83 ಲಕ್ಷ, ಜೂನ್ 7 - 19.86 ಲಕ್ಷ, ಜೂನ್ 8 - 18.98 ಲಕ್ಷ ಸೇರಿದಂತೆ ಹೀಗೆ ನಾಲ್ಕು ದಿನಗಳಲ್ಲಿ ಒಟ್ಟು 70.33 ಲಕ್ಷ ರೂಪಾಯಿ ರಾಜ್ಯದ 9 ಜೂಗಳಿಗೆ ಹರಿದು ಬಂದಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರು ದರ್ಶನ್ಗೆ ಧನ್ಯವಾದ ಹೇಳಿದ್ದಾರೆ.