ಕ್ರೇಜಿಸ್ಟಾರ್ ರವಿಚಂದ್ರನ್ 'ರವಿ ಬೋಪಣ್ಣ' ಚಿತ್ರದ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಮಡಿಕೇರಿಯ ಹಚ್ಚಹಸರಿನ ಪ್ರಕೃತಿ ಮಡಿಲಲ್ಲಿ ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ಈಗ ಈ ಚಿತ್ರತಂಡಕ್ಕೆ ನಟಿ ಸಂಚಿತಾ ಪಡುಕೋಣೆ ಸೇರ್ಪಡೆಯಾಗಿದ್ದಾರೆ.
![Sanchitha Padukone](https://etvbharatimages.akamaized.net/etvbharat/prod-images/kn-bng-1-sanchithapadukone-join-ravibopannateam-ka10012_18112019084651_1811f_1574047011_404.jpg)
ಚಿತ್ರದಲ್ಲಿ ಡಿಪರೆಂಟ್ ಲುಕ್ನಲ್ಲಿ ರವಿಮಾಮ ಕಾಣಿಸ್ತಿದ್ದು, ಇಬ್ಬರು ನಾಯಕಿಯರ ಜೊತೆ ಡುಯೆಟ್ ಹಾಡಲು ರೆಡಿಯಾಗಿದ್ದಾರೆ. ಚಿತ್ರಕ್ಕೆ ಕನ್ನಡತಿ ಕಾವ್ಯ ಶೆಟ್ಟಿ ನಾಯಕಿಯಾಗಿ ಈಗಾಗಲೇ ಆಯ್ಕೆಯಾಗಿದ್ದು ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಇನ್ನು ಮತ್ತೊಬ್ಬ ನಾಯಕಿ ಪಾತ್ರಕ್ಕೆ ಕನ್ನಡತಿಯನ್ನೇ ಆಯ್ಕೆಮಾಡುವುದಾಗಿ ಹೇಳಿದ್ದ ರವಿಚಂದ್ರನ್, ಈಗ ಕನ್ನಡತಿ ಸಂಚಿತಾ ಪಡುಕೋಣೆ ಅವರನ್ನು ಫೈನಲ್ ಮಾಡಿದ್ದಾರೆ.
ರವಿ ಬೋಪಣ್ಣ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜತೆಗೆ ಸಂಗೀತ, ಸಾಹಿತ್ಯ, ಚಿತ್ರಕಥೆ, ಸಂಕಲನ ಎಲ್ಲವನ್ನೂ ರವಿಚಂದ್ರನ್ ಅವರೇ ನಿಭಾಯಿಸುತ್ತಿದ್ದಾರೆ.
ಅಲ್ಲದೆ ಈ ಚಿತ್ರದ ಮತ್ತೊಂದು ಹೈಲೆಟ್ ಅಂದ್ರೆ, ಅತಿಥಿ ಪಾತ್ರದಲ್ಲಿ ಕಿಚ್ಚ ಸುದೀಪ್ ಜಡ್ಜ್ ಆಗಿ ಮಿಂಚಲಿದ್ದಾರೆ. ಇನ್ನು ರಾಮಕೃಷ್ಣ, ಜೈಜಗದೀಶ್, ರವಿಶಂಕರ್ ಗೌಡ, ಮೋಹನ್ ಮುಂತಾದ ಹಿರಿಯ ಕಲಾವಿದರು ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ.