ಬೆಂಗಳೂರು : ಸದಾ ಕಿರಿಕ್ ಮಾಡ್ಕೊಂಡೇ ಸುದ್ದಿಯಲ್ಲಿರೋ ನಟಿ ಸಂಯುಕ್ತ ಹೆಗಡೆ ಮತ್ತೆ ಸಾರ್ವಜನಿಕರ ಜತೆಗೆ ಗಲಾಟೆ ಮಾಡ್ಕೊಂಡಿದ್ದಾರೆ. ನಗರದ ಅಗರ ಲೇಕ್ನ ಬಳಿ ಸ್ನೇಹಿತರ ಜತೆ ವ್ಯಾಯಾಮ ಮಾಡ್ತಿದ್ದ ಸಂಯುಕ್ತ ಹೆಗಡೆ ರಸ್ತೆ ಬದಿ ಕಿರಿಕ್ ಮಾಡಿದ್ದಾರೆ.
ಉದ್ಯಾನವನದಲ್ಲಿ ಸಂಯುಕ್ತ ಅಸಭ್ಯವರ್ತನೆ ತೋರಿದ್ದಾರೆ ಎಂದು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರು ನೀಡಿದ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಆಗಮಿಸಿದನ್ನು ಕಂಡ ಸಂಯುಕ್ತ, ತಕ್ಷಣ ಇನ್ಸ್‌ಸ್ಟಾಗ್ರಾಮ್ ಲೈವ್ ಬಂದು ಬಂದು ರಂಪಾಟ ಮಾಡಿದ್ದಾರೆ.
ಸಂಯುಕ್ತ ಕಿರುಚಾಟ ಕಂಡು ಪಾರ್ಕ್‌ನಲ್ಲಿ ನೂರಾರು ಮಂದಿ ಸೇರಿದ್ದಾರೆ. ಅಗರ ಪಾರ್ಕ್‌ನಲ್ಲಿ ಸಂಯುಕ್ತ ತಮ್ಮ ತಂಡದ ಜತೆ ಪಾರ್ಕ್‌ನಲ್ಲಿ ಹುಲಾ ಹೂಪ್ ಪ್ರ್ಯಾಕ್ಟೀಸ್ ಮಾಡುತ್ತಿದ್ದರು.
ಈ ಸಂದರ್ಭದಲ್ಲಿ ಅವರ ಉಡುಗೆಯ ಬಗ್ಗೆ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಪಾರ್ಕ್ ಗೇಟ್ ಬಂದ್ ಮಾಡಿ ಪೊಲೀಸರಿಗೆ ಕರೆ ಮಾಡಿದ್ದರು. ಪೊಲೀಸರು ಬಂದ ನಂತರ ಪಾರ್ಕ್‌ನಲ್ಲಿ ಸಂಯುಕ್ತ ರಂಪಾಟ ನಡೆಸಿದ್ದಾರೆ.